ಶಿವಮೊಗ್ಗ: ಸಿಎಂ ತವರು ಕ್ಷೇತ್ರ ಶಿಕಾರಿಪುರಕ್ಕೆ, ಹಾವೇರಿ ಜಿಲ್ಲೆಯ ರಟ್ಟೆಹಳ್ಳಿ-ಹಿರೇಕೆರೂರು ಭಾಗದಿಂದ ನೀರು ತೆಗೆದುಕೊಂಡು ಹೋಗುತ್ತಿರುವ ವಿಧಾನವನ್ನು ಖಂಡಿಸಿ ವಕೀಲರು, ಹೋರಾಟಗಾರಾದ ಬಿ.ಡಿ. ಹಿರೇಮಠ್, ಹಿರೇಕೆರೂರಿನಿಂದ ಶಿಕಾರಿಪುರಕ್ಕೆ ಪಾದಯಾತ್ರೆ ಕೈಗೊಂಡಿದ್ದಾರೆ.
ಓದಿ: ರಾಜಭವನ ಚಲೋಗೆ ಪೊಲೀಸರು ಸಹಕಾರ ಕೊಡಬೇಕಿದೆ: ಡಿಕೆಶಿ
ನಿನ್ನೆ ರಟ್ಟೀಹಳ್ಳಿ ಭಾಗದಿಂದ ಹೊರಟ ಪಾದಯಾತ್ರೆ ಶಿರಾಳಕೊಪ್ಪ ದಾಟಿಕೊಂಡು ಇಂದು ಶಿಕಾರಿಪುರದ ತುಪ್ಪೂರು ಗ್ರಾಮದ ಬಳಿ ಆಗಮಿಸಿದ್ದಾರೆ. ಸುಮಾರು 50 ಜನರ ತಂಡದೊಂದಿಗೆ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದಾರೆ. ಶಿಕಾರಿಪುರ ತಾಲೂಕು ಉಡುಗಣಿ ಹಾಗೂ ಹೂಸೂರು ಭಾಗದ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಇದಾಗಿದೆ.
ಶಿಕಾರಿಪುರಕ್ಕೆ ಒಂದ ಕಡೆ ತುಂಗಭದ್ರಾ ನದಿಯಿಂದ ನೀರನ್ನು ತೆಗೆದುಕೊಂಡು ಬರಲಾಗುತ್ತಿದೆ. ಮತ್ತೊಂದು ಕಡೆ ಶಿವಮೊಗ್ಗದ ತುಂಗಾ ನದಿಯಿಂದ ನೀರನ್ನು ತೆಗೆದುಕೊಂಡು ಕೆರೆಗಳಿಗೆ ತುಂಬಿಸುವ ಯೋಜನೆ ಇದಾಗಿದೆ. ಹಾವೇರಿಯಿಂದ ಬರುವ ಪೈಪ್ ಗಳನ್ನು ಫಲವತ್ತಾದ ರೈತರ ಭೂಮಿಯಲ್ಲಿ ಬರಲು ಹಾಕಲಾಗುತ್ತಿದೆ.
ಮೊದಲು ಭೂಮಿಯ ಒಳಗೆ ಪೈಪು ತೆಗೆದುಕೊಂಡು ಹೋಗಲಾಗುತ್ತಿದೆ ಎನ್ನಲಾಗುತ್ತಿತ್ತು. ರೈತರಿಗೆ ನೀರು ತೆಗೆದುಕೊಂಡು ಹೋಗಲು ನಮ್ಮ ಅಭ್ಯಂತರವಿಲ್ಲ. ಆದರೆ, ಭೂಮಿಯ ಮೇಲೆಯೇ ಪೈಪು ತೆಗೆದುಕೊಂಡು ಹೋಗುವುದಕ್ಕೆ ನಮ್ಮ ವಿರೋಧವಿದೆ. ಸಿಎಂ ಯಡಿಯೂರಪ್ಪನವರಿಗೆ ಇದರ ಬಗ್ಗೆ ಮಾಹಿತಿ ಇಲ್ಲ. ಆದರೆ ಉನ್ನತ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಸೇರಿ ರೈತರಿಗೆ ಅನ್ಯಾಯ ಮಾಡುತ್ತಿದ್ದಾರೆ. ಇದರಿಂದ ಶಿಕಾರಿಪುರ ನೀರಾವರಿ ಇಲಾಖೆ ಎದುರು ಪ್ರತಿಭಟನೆ ನಡೆಸಲು ಪಾದಯಾತ್ರೆ ಮೂಲಕ ಬಿ.ಡಿ.ಹಿರೇಮಠ ಆಗಮಿಸುತ್ತಿದ್ದಾರೆ. ನಾಳೆ ಶಿಕಾರಿಪುರದಲ್ಲಿ ಧರಣಿ ನಡೆಸುವ ಸಾಧ್ಯತೆ ಇದೆ.