ಶಿವಮೊಗ್ಗ: ಭಾರತೀಯ ಅಂಚೆ ಇಲಾಖೆ ವತಿಯಿಂದ ಡಿಜಿಟಲ್ ಮತ್ತು ಆನ್‍ಲೈನ್ ಬ್ಯಾಂಕಿಂಗ್ ಸೇವೆಗಳನ್ನು ಒದಗಿಸಲಾಗುತ್ತಿದ್ದು, ಈ ಕುರಿತು ಜೂನ್ 23ರಂದು ವಿಶೇಷ ಅಭಿಯಾನ ಆಯೋಜಿಸಲಾಗಿದೆ.
ಈ ಸೇವೆಯನ್ನು ಪಡೆಯಲು ಸಾರ್ವಜನಿಕರು ಹತ್ತಿರದ ಅಂಚೆ ಕಚೇರಿಗಳಲ್ಲಿ, ಪೋಸ್ಟ್ ಮ್ಯಾನ್ ಮೂಲಕ ಐಪಿಪಿಬಿ ಖಾತೆಗಳನ್ನು ತೆರೆಯಬಹುದು. ಎಇಪಿಎಸ್ ಮೂಲಕ ಇತರ ಬ್ಯಾಂಕ್‍ನಲ್ಲಿರುವ ಹಣವನ್ನು ಯಾವುದೇ ಶುಲ್ಕವಿಲ್ಲದೆ ಬಿಡಿಸಬಹುದು (ಪಿಎನ್‍ಬಿ ಮತ್ತು ಬಿಒಬಿ ಹೊರತುಪಡಿಸಿ). ಇದಕ್ಕಾಗಿ ಆಧಾರ್ ಸಂಖ್ಯೆ ಮತ್ತು ಮೊಬೈಲ್ ನಂಬರ್ ಇರುವುದು ಕಡ್ಡಾಯವಾಗಿದೆ.
ಐಪಿಪಿಬಿ ಖಾತೆಗಳ ಮೂಲಕ ಅಂಚೆ ಕಚೇರಿಯ ಸುಕನ್ಯಾ ಸಮೃದ್ಧಿ, ಪಿಪಿಎಫ್, ಆರ್ಡಿ ಖಾತೆಗಳಿಗೆ ಐಪಿಪಿಬಿ ಮೊಬೈಲ್ ಬ್ಯಾಂಕಿಂಗ್ ಆ್ಯಪ್ ಮೂಲಕ ಆನ್‍ಲೈನ್‍ನಲ್ಲಿ ಪಾವತಿಸಬಹುದಾಗಿದೆ. ಅಲ್ಲದೆ ಮೆಸ್ಕಾಂ ಬಿಲ್, ಎಲ್‍ಪಿಜಿ ಬುಕ್ಕಿಂಗ್, ಮೊಬೈಲ್ ರಿಚಾರ್ಜ್, ಡಿಟಿಎಚ್ ರಿಚಾರ್ಜ್, ಸ್ಥಿರ ದೂರವಾಣಿ ಬಿಲ್ ಪಾವತಿಸಬಹುದಾಗಿದೆ.
ಐಪಿಪಿಬಿ ಖಾತೆಗಳನ್ನು ಎನ್ಆರ್ಇಜಿ, ಸಂಧ್ಯಾ ಸುರಕ್ಷಾ, ಮಾತೃ ವಂದನಾ, ಇತರ ಮಾಸಾಶನಗಳು, ವಿದ್ಯಾರ್ಥಿ ವೇತನಗಳು, ರೈತರ ಸಹಾಯಧನಗಳು ಇತ್ಯಾದಿ ಆಧಾರ್ ಆಧಾರಿತ ಕೇಂದ್ರ ಮತ್ತು ರಾಜ್ಯ ಸರ್ಕಾರದ ಅನುದಾನಗಳನ್ನು ಪಡೆಯಲು ಬಳಸಬಹುದಾಗಿದೆ.
ಅಂಚೆ ಕಚೇರಿ ಮೂಲಕ ಆನ್‍ಲೈನ್ ಬ್ಯಾಂಕಿಂಗ್ ಸೇವೆ ಅಭಿಯಾನ - Online Banking Service Campaign
ಭಾರತೀಯ ಅಂಚೆ ಇಲಾಖೆ ವತಿಯಿಂದ ಡಿಜಿಟಲ್ ಮತ್ತು ಆನ್‍ಲೈನ್ ಬ್ಯಾಂಕಿಂಗ್ ಸೇವೆಗಳನ್ನು ಒದಗಿಸಲಾಗುತ್ತಿದ್ದು, ಈ ಕುರಿತು ಜೂನ್ 23ರಂದು ವಿಶೇಷ ಅಭಿಯಾನ ಆಯೋಜಿಸಲಾಗಿದೆ.