ಶಿವಮೊಗ್ಗ : ಜಿಲ್ಲೆಯ 20 ವರ್ಷದ ಯುವತಿಯಲ್ಲಿ ಒಮಿಕ್ರಾನ್ ಸೋಂಕು ಪತ್ತೆಯಾಗಿದೆ ಎಂದು ಆರೋಗ್ಯ ಸಚಿವ ಡಾ. ಕೆ.ಸುಧಾಕರ್ ತಿಳಿಸಿದ್ದಾರೆ.
-
Five cases of Omicron have been confirmed on Dec 19th:
— Dr Sudhakar K (@mla_sudhakar) December 20, 2021 " class="align-text-top noRightClick twitterSection" data="
🔹 Dharwad: 54 yr male
🔹 Bhadravathi: 20 yr female
🔹 Udupi: 82 yr male and 73 yr female
🔹 Mangaluru: 19 yr female#Omicronindia #Covid_19 @BSBommai
">Five cases of Omicron have been confirmed on Dec 19th:
— Dr Sudhakar K (@mla_sudhakar) December 20, 2021
🔹 Dharwad: 54 yr male
🔹 Bhadravathi: 20 yr female
🔹 Udupi: 82 yr male and 73 yr female
🔹 Mangaluru: 19 yr female#Omicronindia #Covid_19 @BSBommaiFive cases of Omicron have been confirmed on Dec 19th:
— Dr Sudhakar K (@mla_sudhakar) December 20, 2021
🔹 Dharwad: 54 yr male
🔹 Bhadravathi: 20 yr female
🔹 Udupi: 82 yr male and 73 yr female
🔹 Mangaluru: 19 yr female#Omicronindia #Covid_19 @BSBommai
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ನಿನ್ನೆ(ಭಾನುವಾರ) ರಾಜ್ಯದಲ್ಲಿ 5 ಒಮಿಕ್ರಾನ್ ಸೋಂಕಿತರು ಪತ್ತೆಯಾಗಿದ್ದಾರೆ. ಅದರಲ್ಲಿ ಶಿವಮೊಗ್ಗದ ಯುವತಿ ಸಹ ಸೇರಿದ್ದಾರೆ ಎಂದು ತಿಳಿಸಿದ್ದಾರೆ.
ಡಿ.9ರಂದು ಭದ್ರಾವತಿಯ ನಿರ್ಮಲ ನರ್ಸಿಂಗ್ ಕಾಲೇಜಿಗೆ ಕೇರಳದಿಂದ ಪರೀಕ್ಷೆ ಬರೆಯಲು ಬಂದಿದ್ದ 24 ಮಂದಿಯಲ್ಲಿ ಕೋವಿಡ್ ಸೋಂಕು ದೃಢಪಟ್ಟಿತ್ತು. ಇವರ ಗಂಟಲು ದ್ರವ ಮಾದರಿಯನ್ನು ಬೆಂಗಳೂರಿಗೆ ಕಳುಹಿಸಿ ಕೊಡಲಾಗಿತ್ತು. ಅಲ್ಲಿಂದ ಬಂದ ಮಾಹಿತಿ ಮೇರೆಗೆ ಆರೋಗ್ಯ ಸಚಿವರು ಟ್ವೀಟ್ ಮಾಡಿದ್ದಾರೆ ಎನ್ನಲಾಗಿದೆ.
ಭದ್ರಾವತಿಗೆ ಬಂದಿದ್ದ ವಿದ್ಯಾರ್ಥಿಗಳಲ್ಲಿ ಕೋವಿಡ್ ಸೋಂಕು ದೃಢಪಟ್ಟ ಬಳಿಕ ಕಾಲೇಜು ಹಾಗೂ ಆಸ್ಪತ್ರೆಯನ್ನು ಸೀಲ್‌ಡೌನ್ ಮಾಡಲಾಗಿತ್ತು. ಸೀಲ್‌ಡೌನ್ ಮುಗಿದ ನಂತರ ಯುವತಿ ಎಲ್ಲಿಗೆ ಹೋದರು ಎಂಬ ಮಾಹಿತಿ ಲಭ್ಯವಾಗಿಲ್ಲ. ಈ ಕುರಿತು ಜಿಲ್ಲಾಡಳಿತ ಇನ್ನೂ ಸ್ಪಷ್ಟನೆ ನೀಡಿಲ್ಲ.
ಇದನ್ನೂ ಓದಿ: OMICRON: ರಾಜ್ಯದಲ್ಲಿ ಮತ್ತೆ ಐವರಿಗೆ ಒಮಿಕ್ರಾನ್ ಸೋಂಕು ದೃಢ : 19ಕ್ಕೆ ಏರಿದ ಸೋಂಕಿತರ ಸಂಖ್ಯೆ