ಶಿವಮೊಗ್ಗ: ಸಾಗರದಲ್ಲಿ ಸೇರಿದ್ದ ಗುಂಪು ಚದುರಿಸಲು ಪೊಲೀಸರು ನಡೆಸಿದ ಲಘು ಲಾಠಿ ಪ್ರಹಾರದಲ್ಲಿ ಓರ್ವನಿಗೆ ಗಾಯವಾಗಿದೆ.
ಲಘು ಲಾಠಿ ಪ್ರಹಾರದಲ್ಲಿ ನೆಹರು ನಗರದ ನಿವಾಸಿ ಈಕ್ರಮ್ ಅಲಿಖಾನ್ (45) ಗಾಯಗೊಂಡ ವ್ಯಕ್ತಿ. ಸಾಗರದ ಆಜಾದ್ ನಗರದ ಜಾಮೀಯ ಮಸೀದಿಯಲ್ಲಿ ಆಡಳಿತಾಧಿಕಾರಿ ನೇಮಕದ ವಿಚಾರವಾಗಿ ಸಭೆ ನಡೆಯುತ್ತಿತ್ತು. ಈ ಸಭೆಯನ್ನು ಜಿಲ್ಲಾ ವಕ್ಫ್ ಬೋರ್ಡ್ ಅಧ್ಯಕ್ಷರು ನಡೆಸುತ್ತಿದ್ಧರು. ಈ ವೇಳೆ ಉಂಟಾದ ಸಣ್ಣ ಗಲಾಟೆಯನ್ನು ನಿಯಂತ್ರಿಸಲು ಸಾಗರ ಪೇಟೆ ಪೊಲೀಸರು ಲಾಠಿ ಬಿಸಿದ್ದಾರೆ. ಈ ವೇಳೆ ಈಕ್ರಮ್ ತಲೆಗೆ ಪೆಟ್ಟು ಬಿದ್ದಿದೆ.
ಈಕ್ರಮರನ್ನು ತಕ್ಷಣ ಸಾಗರದ ಆಸ್ಪತ್ರೆಗೆ ದಾಖಲಿಸಿ, ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗಕ್ಕೆ ರವಾನೆ ಮಾಡಲಾಗಿದೆ.
ಪೇದೆ ಸಂತೋಷ್ ನಾಯ್ಕರಿಂದ ಹಲ್ಲೆ ಆರೋಪ
ಜನರನ್ನು ಚದುರಿಸುವಾಗ ಪೇದೆ ಸಂತೋಷ್ ನಾಯ್ಕ ನನ್ನ ಮೇಲೆ ಬೇಕಂತಲೆ ಹಲ್ಲೆ ನಡೆಸಿದ್ದಾರೆ. ನನ್ನ ಸುತ್ತಲಿದ್ದ ಜನರನ್ನು ದೂರ ಕಳುಹಿಸಿ ನನ್ನ ಮೇಲೆ ಮನಸೂಇಚ್ಛೆ ಥಳಿಸಿದ್ದಾರೆ ಎಂದು ಗಾಯಳು ಈಕ್ರಮ ಅಲಿಖಾನ್ ನೇರ ಆರೋಪ ಮಾಡಿದ್ದಾರೆ.