ETV Bharat / state

ಶಿವಮೊಗ್ಗದಲ್ಲಿ ಮಳೆ ಆರ್ಭಟ: ಓರ್ವ ಬಲಿ, 108 ಮನೆ ಕುಸಿತ, ಸಾವಿರಾರು ಎಕರೆ ಭೂಮಿ ಜಲಾವೃತ - ಶಿವಮೊಗ್ಗ ಜಿಲ್ಲೆ

ಕಳೆದ 24 ಗಂಟೆಗಳಲ್ಲಿ ಸುರಿದ‌ ಅಶ್ಲೇಷ ಮಳೆಗೆ ಶಿವಮೊಗ್ಗ ಜಿಲ್ಲೆಯಲ್ಲಿ ಸಾಕಷ್ಟು ಅನಾಹುತ ಸಂಭಂವಿಸಿದೆ. ಒಟ್ಟಾರೆ ಜಿಲ್ಲೆಯಲ್ಲಿ ಇದುವರೆಗೂ 139.83 ಮಿ.ಮೀ. ಮಳೆಯಾಗಿದೆ.

ಮಲೆನಾಡಿನಲ್ಲಿ ವರುಣನ ಅಬ್ಬರ
author img

By

Published : Aug 7, 2019, 8:59 AM IST

ಶಿವಮೊಗ್ಗ: ಕಳೆದ 24 ಗಂಟೆಗಳಲ್ಲಿ ಸುರಿದ‌ ಅಶ್ಲೇಷ ಮಳೆ ಜಿಲ್ಲೆಯಲ್ಲಿ ಸಾಕಷ್ಟು ಅನಾಹುತ ಸೃಷ್ಟಿಸಿದ್ದು, ಮಳೆಗೆ ನೂರಾರು ಮನೆಗಳು ನೆಲಸಮವಾಗಿವೆ.

ಜಿಲ್ಲೆಯಲ್ಲಿ ನಿನ್ನೆ ಸಂಜೆ ಮಣ್ಣು ಕುಸಿದ ಪರಿಣಾಮ ತೀರ್ಥಹಳ್ಳಿ ತಾಲೂಕು ಕಳವತ್ತಿ ಗ್ರಾಮದ ರಮೇಶ್ ಎಂಬ ರೈತ ಸಾವನ್ನಪ್ಪಿದ್ದಾನೆ.

ಮಳೆಯಿಂದ ಕುಸಿದ ಮನೆಗಳ ವಿವರ:

ಶಿವಮೊಗ್ಗ ತಾಲೂಕಿನ 19, ಭದ್ರಾವತಿ 27, ಸಾಗರದಲ್ಲಿ 15, ತೀರ್ಥಹಳ್ಳಿಯಲ್ಲಿ 8, ಶಿಕಾರಿಪುರದಲ್ಲಿ 21, ಸೊರಬದಲ್ಲಿ 10 ಹಾಗೂ ಹೊಸನಗರದಲ್ಲಿ 6 ಮನೆ ಸೇರಿ ಒಟ್ಟು 106 ಮನೆಗಳು ಕುಸಿದಿವೆ. ತೀರ್ಥಹಳ್ಳಿ ತಾಲೂಕಿನ‌ 5 ಸೇತುವೆಗಳು ಭಾಗಶಃ ಹಾನಿಯಾಗಿವೆ.

ಕೃಷಿ ಭೂಮಿ ಜಲಾವೃತಗೊಂಡ ವಿವರ:

ಸಾಗರದಲ್ಲಿ 2,150 ಹೆಕ್ಟೇರ್​, ಸೊರಬ 2,239 ಹೆಕ್ಟೇರ್​, ಶಿಕಾರಿಪುರದಲ್ಲಿ 6.5 ಹೆಕ್ಟೇರ್​​, ಹೊಸನಗರದ 58 ಹೆಕ್ಟೇರ್​ ಕೃಷಿ ಭೂಮಿ ನೀರಿನಿಂದ ಜಲಾವೃತಗೊಂಡಿದೆ.

ಮಲೆನಾಡಿನಲ್ಲಿ ವರುಣನ ಅಬ್ಬರ

ಕಳೆದ 24 ಗಂಟೆಯಲ್ಲಿ ಸುರಿದ ಮಳೆ ವಿವರ:

ಶಿವಮೊಗ್ಗ-68 ಎಂ.ಎಂ.
ಭದ್ರಾವತಿ-76.20 ಎಂ.ಎಂ, ತೀರ್ಥಹಳ್ಳಿ-148.60 ಎಂ.ಎಂ.
ಸಾಗರ-157.40 ಎಂ.ಎಂ.
ಶಿಕಾರಿಪುರ-93.40 ಎಂ.ಎಂ.
ಸೊರಬ-152 ಎಂ.ಎಂ.
ಹೊಸನಗರ-283.20 ಎಂ.ಎಂ.
ಒಟ್ಟು- 139.83 ಎಂ.ಎಂ. ಮಳೆಯಾಗಿದೆ.

ಜಿಲ್ಲೆಯಲ್ಲಿ ಮಳೆ‌ ಮುಂದುವರೆಯುವ ಸಾಧ್ಯತೆಗಳಿರುವುದರಿಂದ ಎಲ್ಲಾ ತಹಶೀಲ್ದಾರ್​​ಗಳಿಗೆ ಕೇಂದ್ರ ಸ್ಥಾನದಲ್ಲಿ ಇರುವಂತೆ ಜಿಲ್ಲಾಧಿಕಾರಿ ಸೂಚಿಸಿದ್ದಾರೆ. ಜಿಲ್ಲಾಧಿಕಾರಿಗಳು ತೀರ್ಥಹಳ್ಳಿ ಹಾಗೂ ಶಿವಮೊಗ್ಗದಲ್ಲಿ ಮಳೆಹಾನಿ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Intro:ಅಶ್ಲೇಷ ಮಳೆಗೆ ಒಂದು ಸಾವು,108 ಮನೆ ಕುಸಿತ: 4.453 ಹೆಕ್ಟರ್ ಭೂಮಿ ಜಲಾವೃತ.

ಶಿವಮೊಗ್ಗ: ಕಳೆದ 24 ಗಂಟೆಯಲ್ಲಿ ಸುರಿದ‌ ಅಶ್ಲೇಷ ಮಳೆ ಸಾಕಷ್ಟು ಅನಾಹುತವನ್ನು ಸೃಷ್ಟಿಸಿದೆ. ಜಿಲ್ಲೆಯಲ್ಲಿ ನಿನ್ನೆ ಸಂಜೆ ಮಣ್ಣು ಕುಸಿದು ತೀರ್ಥಹಳ್ಳಿ ತಾಲೂಕು ಕಳವತ್ತಿ ಗ್ರಾಮದ ರಮೇಶ್ ರೈತನನ್ನು ಬಲಿ ತೆಗೆದು ಕೊಂಡಿದೆ.
ಮಳೆಯಿಂದ ಕುಸಿದ ಮನೆಗಳ ವಿವರ-
ಶಿವಮೊಗ್ಗ ತಾಲೂಕಿನ 19, ಭದ್ರಾವತಿಯ‌27, ಸಾಗರದಲ್ಲಿ 15, ತೀರ್ಥಹಳ್ಳಿಯಲ್ಲಿ 8, ಶಿಕಾರಿಪುರದಲ್ಲಿ 21, ಸೊರಬದಲ್ಲಿ 10 ಹಾಗೂ ಹೊಸನಗರದಲ್ಲಿ 6 ಮನೆ ಸೇರಿ ಒಟ್ಟು 106 ಮನೆಗಳು ಕುಸಿತ ಕಂಡಿವೆ.

ತೀರ್ಥಹಳ್ಳಿ ತಾಲೂಕಿನ‌ 5 ಸೇತುವೆಗಳು ಭಾಗಶಃ ಹಾನಿಯಾಗಿವೆ.Body:
ಕೃಷಿ ಭೂಮಿ ಜಲಾವೃತಗೊಂಡ ವಿವರ-
ಸಾಗರದ 2150 ಹೆಕ್ಟರ್, ಸೊರಬದ 2239 ಹೆಕ್ಟರ್, ಶಿಕಾರಿಪುರದಲ್ಲಿ 6.5 ಹೆಕ್ಟರ್, ಹೊಸನಗರದ 58 ಹೆಕ್ಟರ್ ಕೃಷಿ ಭೂಮಿಗಳು ನೀರಿನಿಂದ ಜಲಾವೃತಗೊಂಡಿವೆ.

ಕಳೆದ 24 ಗಂಟೆಯಲ್ಲಿ ಸುರಿದ ಮಳೆ ವಿವರ-
ಶಿವಮೊಗ್ಗ-68 ಎಂ.ಎಂ.
ಭದ್ರಾವತಿ-76.20 ಎಂ.ಎಂ.
ತೀರ್ಥಹಳ್ಳಿ-148.60 ಎಂ.ಎಂ.
ಸಾಗರ-157.40 ಎಂ.ಎಂ.
ಶಿಕಾರಿಪುರ-93.40 ಎಂ.ಎಂ.
ಸೊರಬ-152 ಎಂ.ಎಂ.
ಹೊಸನಗರ-283.20 ಎಂ.ಎಂ.
ಒಟ್ಟು- 139.83 ಎಂ.ಎಂ ಮಳೆಯಾಗಿದೆ. Conclusion:ಶಿವಮೊಗ್ಗ, ಸಾಗರ ದ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ಜಿಲ್ಲೆಯಲ್ಲಿ ಮಳೆ‌ ಮುಂದುವರೆಯುವ ಸಾಧ್ಯತೆಗಳಿರುವುದರಿಂದ ಎಲ್ಲಾ ತಹಶೀಲ್ದಾರ್ ಗಳಿಗೆ ಕೇಂದ್ರ‌‌ ಸ್ಥಾನದಲ್ಲಿ ಇರುವಂತೆ ಜಿಲ್ಲಾಧಿಕಾರಿ ಸೂಚಿಸಿದ್ದಾರೆ. ಜಿಲ್ಲಾಧಿಕಾರಿಗಳು ತೀರ್ಥಹಳ್ಳಿ ಹಾಗೂ ಶಿವಮೊಗ್ಗದಲ್ಲಿ ಮಳೆಹಾನಿ ಪ್ರದೇಶಗಳಿಗೆ ಭೇಟಿ ಪರಿಶೀಲನೆ ನಡೆಸಿದ್ದಾರೆ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.