ಶಿವಮೊಗ್ಗ: ರಸ್ತೆಯಲ್ಲಿ ಏಕಾಏಕಿ ಬೈಕ್ ಸವಾರರಿಗೆ ಹಾಗೂ ಪಾದಚಾರಿಗಳ ಮೇಲೆ ದಾಳಿ ನಡೆಸಿ, ಸಾರ್ವಜನಿಕರಲ್ಲಿ ಭಯಭೀತ ವಾತಾವರಣ ಸೃಷ್ಟಿ ಮಾಡಿದ್ದ ಗೂಳಿಯನ್ನು ಮಹಾನಗರ ಪಾಲಿಕೆ ಸಿಬ್ಬಂದಿಗಳು ಸೆರೆ ಹಿಡಿದಿದ್ದಾರೆ
ವಿನೋಬನಗರದ 60 ಅಡಿ ರಸ್ತೆಯಲ್ಲಿ ಹುಚ್ಚೆದ್ದು ಸಾರ್ವಜನಿಕರ ಮೇಲೆ ದಾಳಿ ನಡೆಸುತ್ತಿತ್ತು. ಇಂದು ಬೆಳಗ್ಗೆ ಬೈಕ್ ಸವಾರರಿಬ್ಬರ ಮೇಲೆ ದಾಳಿ ನಡೆಸಿದ್ದು, ಬೈಕ್ ಸವಾರಿಬ್ಬರೂ ಗಾಯಗೊಂಡಿದ್ದರು. ಬಳಿಕ ಸಾರ್ವಜನಿಕರು ಮಹಾನಗರ ಪಾಲಿಕೆಗೆ ದೂರು ನೀಡಿದ್ದು, ತಕ್ಷಣ ಎಚ್ಚೆತ್ತ ಮಹಾನಗರ ಪಾಲಿಕೆ, ಪಶು ವೈದ್ಯ ವಿನಯ್ರವರನ್ನು ಕರೆಯಿಸಿ, ಮತ್ತು ಬರುವ ಇಂಜೆಕ್ಷನ್ ನೀಡಿ ಗೂಳಿಯನ್ನು ಸೆರೆ ಹಿಡಿಯಲಾಯಿತು.
ಸೆರೆಹಿಡಿದ ಗೂಳಿಯನ್ನು ಮಹಾವೀರ ಗೋ ಶಾಲೆಗೆ ಬಿಡಲಾಗಿದೆ. .