ಶಿವಮೊಗ್ಗ: ಭಾರತೀಯರ ಗುಲಾಮಗಿರಿ ಸಂಕೇತವಾಗಿದ್ದ ಬಾಬರಿ ಮಸೀದಿ ಧ್ವಂಸ ಪ್ರಕರಣದಲ್ಲಿ ಲಾಲ್ ಕೃಷ್ಣ ಅಡ್ವಾಣಿ ಸೇರಿದಂತೆ 32 ಮಂದಿಯನ್ನು ಖುಲಾಸೆಗೊಳಿಸಿರುವ ಈ ದಿನ, ರಾಷ್ಟ್ರೀಯವಾದಿಗಳು ಸಂತೋಷ ಪಡುವಂತಹ ದಿನವಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.
ಶಿವಮೊಗ್ಗದ ತಮ್ಮ ನಿವಾಸದಲ್ಲಿ ಮಾತನಾಡಿದ ಅವರು, ಸ್ವತಂತ್ರ ಭಾರತದ ಶ್ರದ್ಧಾ ಕೇಂದ್ರಗಳಿಗೆ ಗೌರವ ಸಿಗಬೇಕು ಎಂದು ಹೋರಾಟ ಮಾಡುವವರಿಗೆ ಇಂದಿನ ತೀರ್ಪು ಸ್ಫೂರ್ತಿದಾಯಕವಾಗಿದೆ ಎಂದು ಭಾವಿಸುತ್ತೇನೆ. ಯಾವುದೋ ದೇಶದಿಂದ ಬಂದ ಬಾಬರ್ ನಮ್ಮ ಪ್ರಭು ಶ್ರೀರಾಮ ಚಂದ್ರನ ದೇವಾಲಯ ಧ್ವಂಸ ಮಾಡಿ ಅಲ್ಲಿ ಬಾಬರ್ ಮಸೀದಿ ನಿರ್ಮಾಣ ಮಾಡಲಾಗಿತ್ತು.
ಅಯೋಧ್ಯೆಯಲ್ಲಿ ಶ್ರೀರಾಮಚಂದ್ರನ ಮಂದಿರ ಕಟ್ಡಲು ಎಲ್ಲಾ ಪಕ್ಷದವರ ಮನಸ್ಸಿನಲ್ಲೂ ಇತ್ತು. ಇಂದಿನ ತೀರ್ಪು ಬಂದಿರುವುದು ತುಂಬಾ ಸಂತೋಷವಾಗಿದೆ. ಕೋರ್ಟ್ 32 ಜನರ ಪರವಾಗಿ ತೀರ್ಪು ನೀಡಿದೆ. ಇದು ಕೇವಲ ಒಂದು ಅಯೋಧ್ಯೆಗೆ ಮಾತ್ರ ಸಿಮೀತವಾಗಿಲ್ಲ. ಮಥುರಾದಲ್ಲೂ ಸಹ ಕೃಷ್ಣನ ದೇವಾಲಯ ಕೆಡವಿ ಮಸೀದಿ ನಿರ್ಮಾಣ ಮಾಡಲಾಗಿದೆ. ಇಂದಿನ ತೀರ್ಪು ಮಥುರಾದಲ್ಲೂ ಸಹ ಕೃಷ್ಣನ ಮಂದಿರ ನಿರ್ಮಾಣಕ್ಕೆ ಸ್ಪೂರ್ತಿಯಾಗಿದೆ ಎಂದು ಭಾವಿಸುತ್ತೇನೆ ಎಂದರು.