ETV Bharat / state

ದೇವಾಲಯ ಕಟ್ಟಿಸುವಂತೆ ಮನವಿ ಮಾಡಿದ ಮುಸ್ಲಿಂ ಯುವಕ - Etv bharat Kannada

ಶಿವಮೊಗ್ಗ ನಗರದ ಮಲವಗೊಪ್ಪ ಎಂಬಲ್ಲಿ ಮುಸ್ಲಿಂ ಸಮುದಾಯದ ಯುವಕನೊಬ್ಬ ಹಿಂದೂ ದೇವಾಲಯವನ್ನು ಕಟ್ಟಿಸುವಂತೆ ಕಾಂಗ್ರೆಸ್ ವಕ್ತಾರೆ ಜಿ ಪಲ್ಲವಿ ಅವರಲ್ಲಿ ಮನವಿ ಮಾಡಿದ್ದಾನೆ.

muslim-youth-requested-to-build-a-temple-at-shivmogga
ದೇವಾಲಯ ಕಟ್ಟಿಸುವಂತೆ ಮನವಿ ಮಾಡಿದ ಮುಸ್ಲಿಂ ಯುವಕ
author img

By

Published : Sep 5, 2022, 3:17 PM IST

ಶಿವಮೊಗ್ಗ: ನಗರದ ಸೋಮಿನಕೊಪ್ಪ ಬಡಾವಣೆಯಲ್ಲಿ ಗಣೇಶೋತ್ಸವ ಮೆರವಣಿಗೆ ಸಂದರ್ಭ ಮುಸ್ಲಿಂ ಸಮುದಾಯದವರು ಭಾಗವಹಿಸಿ ಭಾವೈಕ್ಯತೆ ಮೆರೆದಿದ್ದರು. ಇದೀಗ ನಗರದ ಮಲವಗೊಪ್ಪದಲ್ಲಿ ಮುಸ್ಲಿಂ ಸಮುದಾಯದ ಯುವಕನೊಬ್ಬ ಹಿಂದೂ ದೇವಾಲಯ ಕಟ್ಟಿಸಿಕೊಡುವಂತೆ ಕಾಂಗ್ರೆಸ್ ವಕ್ತಾರೆ ಜಿ ಪಲ್ಲವಿಯವರಿಗೆ ಮನವಿ ಮಾಡಿರುವ ಘಟನೆ ನಡೆದಿದೆ.

ದೇವಾಲಯ ಕಟ್ಟಿಸುವಂತೆ ಮನವಿ ಮಾಡಿದ ಮುಸ್ಲಿಂ ಯುವಕ

ಪಲ್ಲವಿರವರು ಮಲವಗೊಪ್ಪದಲ್ಲಿನ ಗಣೇಶೋತ್ಸವದಲ್ಲಿ ಭಾಗವಹಿಸಿದ್ದ ವೇಳೆ ಮುಸ್ಲಿಂ ಯುವಕ ಮನವಿ ಮಾಡಿದ್ದಾನೆ. ಇದಕ್ಕೆ ಸ್ಥಳದಲ್ಲಿದ್ದವರು ಚಪ್ಪಾಳೆ ತಟ್ಟಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹಿಂದೂಗಳು ದೇವಾಲಯಕ್ಕೆ ಹೋಗಲು ಹತ್ತಿರದಲ್ಲಿ ದೇವಸ್ಥಾನ ಇಲ್ಲ. ಹಾಗಾಗಿ ಸಮೀಪದಲ್ಲಿಯೇ ದೇವಾಲಯವೊಂದು ಕಟ್ಟಿಕೊಡುವಂತೆ ಯುವಕ ಮನವಿ ಮಾಡಿದ್ದಾನೆ. ನಮ್ಮ ಗ್ರಾಮದಲ್ಲಿ ಹಿಂದೂಗಳು ಮತ್ತು ಮುಸ್ಲಿಮರು ಸೌಹಾರ್ದತೆಯಿಂದ ಜೀವನ ನಡೆಸುತ್ತಿದ್ದೆವೆ. ನಾವೆಲ್ಲರೂ ಒಂದೇ ಎಂದು ಇದೇ ವೇಳೆ ಹೇಳಿದ್ದಾನೆ.

ಇದನ್ನೂ ಓದಿ : ಗಣೇಶ ಮೂರ್ತಿ ನಿಮಜ್ಜನ ಮೆರವಣಿಗೆ.. ಡಿಜೆ ಬಂದ್​ ಮಾಡಿ ಮುಸ್ಲಿಂ ವ್ಯಕ್ತಿಯ ಶವಯಾತ್ರೆಗೆ ಗೌರವ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.