ಶಿವಮೊಗ್ಗ: ಸಾಗರದಲ್ಲಿ ಮೇ 28ರಂದು ನಡೆದ ಶಝೀಲ್ ಎಂಬ ಯುವಕನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಪ್ರಮುಖ ಐವರು ಆರೋಪಿಗಳನ್ನು ಬಂಧಿಸುವಲ್ಲಿ ಸಾಗರ ಗ್ರಾಮಾಂತರ ಪೊಲೀಸರು ಯಶಸ್ವಿಯಾಗಿದ್ದಾರೆ.
ಸುಹೇಲ್ ಅಲಿಯಾಸ್ ಸುಕ್ಕ, ಮುಜಾಮಿಲ್ ಅಲಿಯಾಸ್ ಮುಜ್ಜು, ಅಬ್ದುಲ್ ಸಲಾಂ ಅಲಿಯಾಸ್ ಸಲ್ಲು ಹಾಗೂ ಸಮಿವುಲ್ಲಾ ಬಂಧಿತ ಆರೋಪಿಗಳು. ಬಂಧಿತರೆಲ್ಲರೂ ಗಾಂಜಾ ವ್ಯಸನಿಗಳಾಗಿದ್ದಾರೆ.
ಕೊಲೆಯಾದ ಶಝೀಲ್ ಹಾಗೂ ಸುಹೇಲ್ ನಡುವೆ ಮೊಬೈಲ್ ವಿಚಾರಕ್ಕೆ ಮನಸ್ತಾಪ ಉಂಟಾಗಿತ್ತು. ಇದರಿಂದ ಇವರಿಬ್ಬರ ನಡುವೆ ಆಗಾಗ ಸಣ್ಣ ಜಗಳ ನಡೆಯುತ್ತಿತ್ತು.
ಇವರಿಬ್ಬರ ನಡುವಿನ ಜಗಳ ತಾರಕಕ್ಕೇರಿದ್ದು ಕೊಲೆಯಲ್ಲಿ ಅಂತ್ಯಕಂಡಿದೆ. ಗಾಂಜಾ ಮತ್ತಿನಲ್ಲಿ ಕೊಲೆ ಮಾಡಿರುವುದಾಗಿ ತಿಳಿದುಬಂದಿದೆ.
ಸಾಗರ ಗ್ರಾಮಾಂತರ ಪಿಎಸ್ಐ ಭರತ್ ಹಾಗೂ ಸಿಬ್ಬಂದಿ ಹಜರತ್ ಅಲಿ, ಫೈರೋಜ್, ಅಶೋಕ್, ಕಾಳನಾಯ್ಕ, ಪ್ರಕಾಶ್ ಹಾಗೂ ವಿಶ್ವನಾಥ್ ಪ್ರಕರಣದ ಕಾರ್ಯಾಚರಣೆಯಲ್ಲಿದ್ದರು.