ಶಿವಮೊಗ್ಗ: ಬಸ್ ತಂಗುದಾಣದಲ್ಲಿ ನಿರ್ಗತಿಕ ಮಹಿಳೆಯೊಬ್ಬರನ್ನು ಕೊಲೆಗೈದಿರುವ ಘಟನೆ ದೊಡ್ಡಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಮೃತ ದುರ್ದೈವಿಯನ್ನು ಲತಾ ಎಂದು ಗುರುತಿಸಲಾಗಿದೆ. ನಿರ್ಗತಿಕಳಾಗಿದ್ದ ಲತಾ ಎನ್.ಟಿ. ರಸ್ತೆಯಲ್ಲಿರುವ ಲೋಕಾಯುಕ್ತ ಕಚೇರಿ ಬಳಿಯ ಬಸ್ ನಿಲ್ದಾಣದ ಬಳಿ ವಾಸವಿದ್ದರು. ಮಲಗಿದ್ದಾಗ ಲತಾಳ ತಲೆ ಮೇಲೆ ಸಿಮೆಂಟ್ ಸ್ಲಾಬ್ ಎತ್ತಿ ಹಾಕಿ ಕೊಲೆ ಮಾಡಲಾಗಿದೆ ಎಂದು ಶಂಕಿಸಲಾಗಿದೆ. ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಈ ಕುರಿತು ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಪ್ರಶಸ್ತಿ ಘೋಷಿಸಿದ ದಿನವೇ ಹಾಲ್ದೊಡ್ಡೇರಿ ನಿಧನ: ಅಭಿನಂದನೆ ಬದಲು ಸಂತಾಪ ಸೂಚಿಸಿದ ಬಿಜೆಪಿ ನಾಯಕರು