ಶಿವಮೊಗ್ಗ: ಕಳೆದ ಒಂದು ವಾರದ ಹಿಂದೆ ಶಿವಮೊಗ್ಗ-ಸಾಗರ ರಸ್ತೆಯ ಚೋರಡಿ ಬಳಿಯ ಕುಮದ್ವತಿ ನದಿಯಲ್ಲಿ ತೇಲಿ ಹೋದವರ ಕುಟುಂಬಗಳಿಗೆ ಸಂಸದ ಬಿ.ವೈ.ರಾಘವೇಂದ್ರ ಭೇಟಿ ನೀಡಿ ಸಾಂತ್ವನ ಹೇಳಿದರು.
ಕಳೆದ ವಾರ ಸುರಿದ ವಿಪರೀತ ಮಳೆಯಿಂದ ಚೋರಡಿ ಗ್ರಾಮದ ಬಳಿಯ ಕುಮದ್ವತಿ ನದಿ ಸೇತುವೆಯ ಮೇಲೆ ನಿಂತು ಕುಂಸಿ ಗ್ರಾಮದ ಅಮರನಾಥ್ ಹಾಗೂ ನಾಗರಾಜ್ ನದಿಯನ್ನು ಬೈಕ್ನಲ್ಲಿ ನಿಂತು ವೀಕ್ಷಿಸುವಾಗ ಬೊಲೆರೋ ವಾಹನ ಡಿಕ್ಕಿ ಹೊಡೆದ ಪರಿಣಾಮ, ಅಮರನಾಥ್, ನಾಗಾರಾಜ್, ಸನ್ನಿವಾಸದ ಹರೀಶ್ ಹಾಗೂ ರಾಮಣ್ಣ ನದಿಗೆ ಬಿದ್ದಿದ್ದರು. ಈ ವೇಳೆ ನದಿಗೆ ಬಿದ್ದಿದ್ದ ನಾಗರಾಜ್ನ್ನು ಪೊಲೀಸರು ರಕ್ಷಣೆ ಮಾಡಿದ್ದರು. ಉಳಿದವರು ನದಿಯಲ್ಲಿ ಕೊಚ್ಚಿಕೊಂಡು ಹೋಗಿದ್ದರು.
ಇವರಿಗಾಗಿ ಹುಡುಕಾಟ ನಡೆಸಿದಾಗ ರಾಮಣ್ಣ ಅವರ ಮೃತ ದೇಹ ಪತ್ತೆಯಾಗಿತ್ತು. ಉಳಿದ ಅಮರನಾಥ್ ಹಾಗೂ ಹರೀಶ್ ಅವರ ಮೃತ ದೇಹಗಳು ಪತ್ತೆಯಾಗದ ಕಾರಣ, ಅವರ ಮನೆಗೆ ಸಂಸದ ಬಿ.ವೈ.ರಾಘವೇಂದ್ರ ಭೇಟಿ ನೀಡಿಕುಟುಂಬದವರಿಗೆ ಸಾಂತ್ವನ ಹೇಳಿದ್ದಾರೆ.