ETV Bharat / state

ಸಿಎಂ ಬದಲಾವಣೆ ಚರ್ಚೆ ನಡೆದಿಲ್ವಂತೆ, ಬಿಎಸ್​ವೈ ಪುತ್ರ ಬಿ ವೈ ರಾಘವೇಂದ್ರ ಅವರಿಗೆ ಏನೂ ಗೊತ್ತಿಲ್ವಂತೆ.. - ಸಿಎಂ ಬದಲಾವಣೆ ವಿಚಾರ

ಬಿಜೆಪಿ ಸಂಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬರಬೇಕು ಎಂಬುದು ನಮ್ಮ ಅಪೇಕ್ಷೆ. ಸಂಘಟನೆ ಸ್ಪಪ್ಟಪಡಿಸಿದೆ. ನಮ್ಮ ನಾಯಕರು ಹೇಳಿದ್ದಾರೆ. ಹೀಗಾಗಿ, ಬದಲಾವಣೆ ವಿಷಯಕ್ಕೆ ಮಹತ್ವ ಕೊಡುವ ಅವಶ್ಯಕತೆ ಇಲ್ಲ. ಕೇವಲ‌ ವೀರಶೈವ ಸಮಾಜದ ಸ್ವಾಮೀಜಿಗಳು ಅಷ್ಟೇ ಅಲ್ಲ, ಹಿಂದುಳಿದ ಸ್ವಾಮೀಜಿಗಳು ಬೆಂಬಲ ನೀಡುತ್ತಿದ್ದಾರೆ..

MP BY Raghavendra
ಸಂಸದ ರಾಘವೇಂದ್ರ
author img

By

Published : Jul 21, 2021, 6:57 PM IST

ಶಿವಮೊಗ್ಗ : ಯಡಿಯೂರಪ್ಪ ನಾಯಕತ್ವ ಬದಲಾವಣೆ ವಿಚಾರ ಈವರೆಗೂ ನಮಗೆ ಕೇಳಿ ಬಂದಿಲ್ಲ. ಇದು ಮಾಧ್ಯಮಗಳಲ್ಲಿ ಮಾತ್ರ ಕೇಳಿ ಬರುತ್ತಿದೆ ಎಂದು ಸಿಎಂ ಯಡಿಯೂರಪ್ಪ ಪುತ್ರ ಹಾಗೂ ಸಂಸದ ಬಿ ವೈ ರಾಘವೇಂದ್ರ ಹೇಳಿದರು.

ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾಯಕತ್ವ ಬದಲಾವಣೆ ವಿಚಾರವಾಗಿ ಸಾಕಷ್ಟು ಊಹಾಪೋಹಗಳು ಬರುತ್ತಿವೆ. ಅವರ ಮಕ್ಕಳಿಗೋಸ್ಕರ ಕಂಡಿಷನ್ ಹಾಕ್ತಿದ್ದಾರೆ ಎಂದು ಕೆಲವು ಮಾಧ್ಯಮಗಳಲ್ಲಿ ಗಮನಿಸಿದೆ. ಮುಖ್ಯಮಂತ್ರಿಗಳು ತಮ್ಮ 50 ವರ್ಷದ ರಾಜಕೀಯ ಜೀವನದಲ್ಲಿ ಲಕ್ಷಗಟ್ಟಲೆ ಕಾರ್ಯಕರ್ತರನ್ನು ಸಂಘಟನೆಗೆ ಕೊಡುಗೆಯಾಗಿ ನೀಡಿದ್ದಾರೆ.

ಸಂಸದ ಬಿ.ವೈ.ರಾಘವೇಂದ್ರ ಪ್ರತಿಕ್ರಿಯೆ

ಅನೇಕ ನಾಯಕರನ್ನು ಬೆಳೆಸಿದ್ದಾರೆ. ಸಂಘಟನೆಗೆ ಶಕ್ತಿ ತುಂಬುವ ಕೆಲಸ ಮಾಡಿದ್ದಾರೆ. ಎಲ್ಲಿಯೋ ಸೀಮಿತವಾಗಿ ಬಿಎಸ್‌ವೈ ಮಕ್ಕಳಿಗೆ, ಕುಟುಂಬಕೋಸ್ಕರ ಚಿಂತನೆ ಮಾಡುವಂತಹ ಸಂಕುಚಿತ ನಾಯಕರಲ್ಲ ಎಂದರು.

ಬಿಜೆಪಿ ಆಡಳಿತಕ್ಕೆ ಬರಲು ಬಿಎಸ್‌ವೈ ಶ್ರಮ : ನಾವು ಕಾರ್ಯಕರ್ತರಾಗಿ‌ ಬೆಳೆದಿದ್ದೇವೆ. ಆರ್​ಎಸ್​​ಎಸ್ ಪ್ರಚಾರಕರಾಗಿ ಶಿಕಾರಿಪುರಕ್ಕೆ ಬಂದು ನೆಲೆಸಿ ಸಂಘಟನೆ ಮಾಡಿದ್ದಾರೆ. ಅಂದಿನ ಸರ್ಕಾರದ ಜನ ವಿರೋಧಿ ಕೆಲಸಗಳ ವಿರುದ್ಧ ಧ್ವನಿ ಎತ್ತಿ ಹೋರಾಟಗಾರರಾಗಿ ಆ ಮೂಲಕ ರಾಜಕೀಯ ಜೀವನಕ್ಕೆ ಧುಮುಕಿದವರು.

ದಕ್ಷಿಣ ಭಾರತದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಆಡಳಿತಕ್ಕೆ ಬರುವ ದಿಕ್ಕಿನಲ್ಲಿ ಶ್ರಮಿಸಿದ್ದಾರೆ. ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದಾರೆ. ವಿಜಯೇಂದ್ರನ ಮಂತ್ರಿ ಮಾಡಲು ನನಗೆ ಸ್ಥಾನ ನೀಡಲು ಎಳೆದಾಡುತ್ತಿದ್ದಾರೆ ಎಂಬುದು ಯಾವುದೂ ಪ್ರಶ್ನೆ ಇಲ್ಲ. ಇಂತಹ ಯಾವುದೇ ಚರ್ಚೆ ನಡೆದಿಲ್ಲ ಎಂದು ಸ್ಪಷ್ಟಪಡಿಸಿದರು.

ಮಠಾಧೀಶರ ಭೇಟಿಗೆ ಅನ್ಯ ಅರ್ಥ ಬೇಡ : ಸಿಎಂ ಮನೆಗೆ ಮಠಾಧೀಶರು ಬರಲು ಯಾವ ಅಭ್ಯಂತರ ಇಲ್ಲ. ಸ್ವಾಮೀಜಿಗಳ, ಸಂಘಟನೆಯ ಆಶೀರ್ವಾದದಿಂದ ಬೆಳೆದಿದ್ದಾರೆ. ಮುಖ್ಯಮಂತ್ರಿ ಅವರ ಮನೆ ರಾಜ್ಯದ ಅಭಿವೃದ್ಧಿ, ಮಠ-ಮಂದಿರಗಳ ಅಭಿವೃದ್ಧಿ ಕುರಿತು ಮಠಾಧೀಶರು ಮನೆಗೆ ಬರುತ್ತಾರೆ. ಅವರೊಂದಿಗೆ ಚರ್ಚೆ ಮಾಡುತ್ತಾರೆ. ಹೀಗಾಗಿ, ಅದಕ್ಕೆ ಬೇರೆ ಅರ್ಥ ಕಲ್ಪಿಸುವ ಅವಶ್ಯಕತೆ ಇಲ್ಲ.

ಮಠಾಧೀಶರು ಸಿಎಂ ಬದಲಾವಣೆ ಬೇಡ ಎನ್ನುತ್ತಿರುವುದು ಸರಿ‌ ಇದೆ. ನಮ್ಮ ದೌರ್ಭಾಗ್ಯ ಸರ್ಕಾರ ರಚಿಸಲು ಸಂಪೂರ್ಣ ಬಲಾಬಲ ನಮ್ಮ ಪಕ್ಷಕ್ಕೆ ಸಿಗಲಿಲ್ಲ. ಸಮಿಶ್ರ ಸರ್ಕಾರದ ಗೊಂದಲಗಳು‌ ನಮಗೆ ಲಾಭವಾಗಿ‌ ಪರಿಣಮಿಸಿತು. 17 ಜನ ಶಾಸಕರ ತ್ಯಾಗದ ಫಲವಾಗಿ ಸರ್ಕಾರ ಅಧಿಕಾರಕ್ಕೆ ಬಂತು.

ನಮ್ಮ ಸಾವಿರಾರು ಕಾರ್ಯಕರ್ತರು‌ ನಿಗಮ ಮಂಡಳಿ ಅಧ್ಯಕ್ಷರು ಸದಸ್ಯರಾಗಿದ್ದಾರೆ. ಶಾಸಕರ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯ ಆಗುತ್ತಿವೆ. ಮುಂದಿನ ದಿನಗಳಲ್ಲಿ ಒಳ್ಳೆ ರೀತಿಯ ಸರ್ಕಾರ ಕೊಡಬೇಕು ಎಂಬ ಅಭಿಲಾಷೆ ಇದೆ.

ಕೆಲವರಿಂದ ಹುಳಿ ಹಿಂಡುವ ಕೆಲಸ : ಬಿಜೆಪಿ ಸಂಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬರಬೇಕು ಎಂಬುದು ನಮ್ಮ ಅಪೇಕ್ಷೆ. ಸಂಘಟನೆ ಸ್ಪಪ್ಟಪಡಿಸಿದೆ. ನಮ್ಮ ನಾಯಕರು ಹೇಳಿದ್ದಾರೆ. ಹೀಗಾಗಿ, ಬದಲಾವಣೆ ವಿಷಯಕ್ಕೆ ಮಹತ್ವ ಕೊಡುವ ಅವಶ್ಯಕತೆ ಇಲ್ಲ. ಕೇವಲ‌ ವೀರಶೈವ ಸಮಾಜದ ಸ್ವಾಮೀಜಿಗಳು ಅಷ್ಟೇ ಅಲ್ಲ, ಹಿಂದುಳಿದ ಸ್ವಾಮೀಜಿಗಳು ಬೆಂಬಲ ನೀಡುತ್ತಿದ್ದಾರೆ.

ಆದರೆ, ಕೆಲವರು ಹುಳಿ ಹಿಂಡುವ ಕೆಲಸ ಮಾಡುತ್ತಿದ್ದಾರೆ. ಅದು ಯಾವುದಕ್ಕೂ ತಲೆ ಕೆಡಿಸಿಕೊಳ್ಳುವ ಅಗತ್ಯ ಇಲ್ಲ.‌ ಯಡಿಯೂರಪ್ಪ ನೇತೃತ್ವದಲ್ಲಿ ಸಂಘಟನೆ ಮಾಡಿದರೆ ಮುಂದಿನ ದಿನಗಳಲ್ಲಿ ಒಳ್ಳೆಯದು ಆಗಲಿದೆ ಎಂಬ ಅಭಿಪ್ರಾಯವನ್ನು ಮುರುಘಾ ಶರಣರು ಹೇಳಿದ್ದಾರೆ ಎಂದರು.

ಓದಿ: ಯಡಿಯೂರಪ್ಪ ಪರ ನಿಂತ ಕೇಂದ್ರ ನಾಯಕ ಸುಬ್ರಹ್ಮಣ್ಯಂ ಸ್ವಾಮಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.