ಶಿವಮೊಗ್ಗ : ಕಳೆದ 25 ದಿನಗಳಿಂದ ಮಲೆನಾಡಿನ ಶಿವಮೊಗ್ಗ ಜಿಲ್ಲೆಯಲ್ಲಿ ಮುಂಗಾರು ಮಳೆ ಕಾಣೆಯಾಗಿದೆ. ಇದರಿಂದಾಗಿ ಈಗಾಗಲೇ ಬಿತ್ತನೆ ಮಾಡಿರುವ ಮೆಕ್ಕೆಜೋಳ, ಭತ್ತ ಬಾಡಿ ಹೋಗುತ್ತಿದೆ. ರೈತರು ಸ್ಪ್ರಿಂಕ್ಲರ್ ಜೆಟ್ ನೀರಿನ ಮೂಲಕ ಬೆಳೆಯನ್ನು ಉಳಿಸಿಕೊಳ್ಳಲು ಮುಂದಾಗಿದ್ದಾರೆ.
ಒಳ್ಳೆಯ ಫಸಲು ಬಂದು ಲಾಭದ ನಿರೀಕ್ಷೆಯಲ್ಲಿದ್ದ ರೈತರಿಗೆ ಮೊದಲು ಧಾರಾಕಾರ ಮಳೆ ಬಂದು ಸಂಕಷ್ಟ ತಂದರೆ, ಈಗ ಮಳೆ ಮರೆಯಾಗಿ ಮತ್ತಷ್ಟು ತಲೆಬಿಸಿ ಉಂಟುಮಾಡಿದೆ. ಸಾಲ ಮಾಡಿ ಬಿತ್ತನೆ ಕಾರ್ಯ ಮಾಡಿರುವ ರೈತರಲ್ಲಿ ಆತಂಕದ ಛಾಯೆ ಮೂಡಿದೆ. ಅತಿ ಹೆಚ್ಚು ಮೆಕ್ಕೆಜೋಳ ಬೆಳೆದಿರುವ ಶಿಕಾರಿಪುರ, ಸೊರಬ, ಶಿವಮೊಗ್ಗ ಗ್ರಾಮಾಂತರ ತಾಲೂಕಿನ ರೈತರು ಬೆಳೆ ಬಾಡಿ ಹೋಗುತ್ತಿರುವುದನ್ನು ನೋಡಿ ಕಣ್ಣೀರು ಹಾಕುತ್ತಿದ್ದಾರೆ. ಸರಿಸುಮಾರು ತಿಂಗಳ ಹಿಂದೆ ಜಿಲ್ಲೆಯಲ್ಲಿ ಸುರಿದ ಧಾರಾಕಾರ ಮಳೆಯಿಂದ ತುಂಬಿ ಹರಿಯುತ್ತಿದ್ದ ತುಂಗಾ ನದಿಯಲ್ಲಿ ಈಗ ಹರಿವಿನ ಪ್ರಮಾಣ ಇಳಿಕೆಯಾಗಿದೆ.
ಮಳೆ ಪ್ರಮಾಣ: ಜಿಲ್ಲೆಯಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಒಟ್ಟು 12.00 ಮಿ.ಮೀ ಮಳೆಯಾಗಿದ್ದು, ಸರಾಸರಿ 041 ಮಿ.ಮೀ ಮಳೆ ದಾಖಲಾಗಿದೆ. ಆಗಸ್ಟ್ ತಿಂಗಳ ಸಾಮಾನ್ಯ ವಾಡಿಕೆ ಮಳೆಯ ಸರಾಸರಿ ಪ್ರಮಾಣ 404.86 ಮಿ.ಮೀ ಇದ್ದು, ಇದುವರೆಗೆ ಸರಾಸರಿ 82.89 ಮಿ.ಮೀ ಮಳೆ ದಾಖಲಾಗಿದೆ. ಶಿವಮೊಗ್ಗ 0.00, ಭದ್ರಾವತಿ 1.10 ಮಿ.ಮೀ, ತೀರ್ಥಹಳ್ಳಿ 1.10 ಮಿ.ಮೀ, ಸಾಗರ 0.20 ಮಿ.ಮೀ, ಶಿಕಾರಿಪುರ 0.20 ಮಿ.ಮೀ, ಸೊರಬ 0.20 ಮಿ.ಮೀ ಹಾಗೂ ಹೊಸನಗರದಲ್ಲಿ 1.10 ಮಿ.ಮೀ ಮಳೆಯಾಗಿದೆ.
ಜಲಾಶಯಗಳ ನೀರಿನ ಮಟ್ಟ (ಅಡಿಗಳಲ್ಲಿ ಮತ್ತು ಹರಿವು ಕ್ಯೂಸೆಕ್ಗಳಲ್ಲಿ):
- ಲಿಂಗನಮಕ್ಕಿ : 1819 (ಗರಿಷ್ಠ), 1790.40 (ಇಂದಿನ ಮಟ್ಟ), 5649.00 (ಒಳಹರಿವು), 5487.00 (ಹೊರಹರಿವು), ಕಳೆದ ವರ್ಷ ನೀರಿನ ಮಟ್ಟ 1813.00.
- ಭದ್ರಾ : 186 (ಗರಿಷ್ಠ), 166.00 (ಇಂದಿನ ಮಟ್ಟ), 3224.00 (ಒಳಹರಿವು), 3224.00 (ಹೊರಹರಿವು), ಕಳೆದ ವರ್ಷ ನೀರಿನ ಮಟ್ಟ 184.00.
- ತುಂಗಾ : 588.24 (ಗರಿಷ್ಠ), 588.24 (ಇಂದಿನ ಮಟ್ಟ), 5300.00 (ಒಳಹರಿವು), 5300.00 (ಹೊರಹರಿವು) ಕಳೆದ ವರ್ಷ ನೀರಿನ ಮಟ್ಟ 588.24.
- ಮಾಣಿ : 595 (ಎಂಎಸ್‌ಎಲ್‌ಗಳಲ್ಲಿ), 580.86 (ಇಂದಿನ ಮಟ್ಟ ಎಂಎಸ್ಎಲ್ನಲ್ಲಿ), 741 (ಒಳಹರಿವು), 253.00 (ಹೊರಹರಿವು ಕ್ಯೂಸೆಕ್ಸ್ಗಳಲ್ಲಿ) ಕಳೆದ ವರ್ಷ ನೀರಿನ ಮಟ್ಟ 588.06 (ಎಂಎಸ್‌ಎಲ್‌ಗಳಲ್ಲಿ).
- ಪಿಕ್‌ಅಪ್ : 563.88 (ಎಂಎಸ್‌ಎಲ್‌ಗಳಲ್ಲಿ), 562.38 (ಇಂದಿನ ಮಟ್ಟ ಎಂಎಸ್ಎಲ್ನಲ್ಲಿ), 28 (ಒಳಹರಿವು), 418.00 (ಹೊರಹರಿವು ಕ್ಯೂಸೆಕ್ಸ್ಗಳಲ್ಲಿ), ಕಳೆದ ವರ್ಷ ನೀರಿನ ಮಟ್ಟ 562.32 (ಎಂಎಸ್‌ಎಲ್‌ಗಳಲ್ಲಿ).
- ಚಕ್ರ : 580.57 (ಎಂಎಸ್‌ಎಲ್‌ಗಳಲ್ಲಿ), 567.06 (ಇಂದಿನ ಮಟ್ಟ ಎಂಎಸ್ಎಲ್ನಲ್ಲಿ), 234.00 (ಒಳಹರಿವು), 0.00 (ಹೊರಹರಿವು ಕ್ಯೂಸೆಕ್ಸ್ಗಳಲ್ಲಿ), ಕಳೆದ ವರ್ಷ ನೀರಿನ ಮಟ್ಟ 574.32 (ಎಂಎಸ್‌ಎಲ್‌ಗಳಲ್ಲಿ).
- ಸಾವೆಹಕ್ಲು : 583.70 (ಗರಿಷ್ಠ ಎಂಎಸ್‌ಎಲ್‌ಗಳಲ್ಲಿ), 574.40 (ಇಂದಿನ ಮಟ್ಟ ಎಂಎಸ್ಎಲ್ನಲ್ಲಿ), 311.00 (ಒಳಹರಿವು), 0.00 (ಹೊರಹರಿವು ಕ್ಯೂಸೆಕ್ಸ್ಗಳಲ್ಲಿ), ಕಳೆದ ವರ್ಷ ನೀರಿನ ಮಟ್ಟ 577.20 (ಎಂಎಸ್‌ಎಲ್‌ಗಳಲ್ಲಿ).
ಇದನ್ನೂ ಓದಿ : ಶಿವಮೊಗ್ಗದ ವಾಹನ ಸವಾರರೇ ಎಚ್ಚರ: ನಿಮ್ಮ ಮೇಲಿದೆ ಆಧುನಿಕ ತಂತ್ರಜ್ಞಾನದ ಕ್ಯಾಮರಾಗಳ ಕಣ್ಣು!