ETV Bharat / state

ಪಾಕ್‌ ಒಂಟಿ ಮಾಡಿದ್ದು ಇಂದಿರಾ ಗಾಂಧಿ ಹೊರತು ಮೋದಿಯಲ್ಲ, ಬಿಜೆಪಿಗೆ ಇತಿಹಾಸ ಗೊತ್ತಿಲ್ಲ: ಹೆಚ್. ವಿಶ್ವನಾಥ್​​​ ವಾಗ್ದಾಳಿ

author img

By

Published : Apr 20, 2019, 8:46 AM IST

ಈ ಲೋಕಸಭಾ ಚುನಾವಣೆ ತುಂಬಾ ಪ್ರಮುಖವಾಗಿದೆ. ಮೋದಿ ಸರ್ಕಾರದ ತಪ್ಪು ಹೆಜ್ಜೆಗಳು, ಅವರು ಕೊಟ್ಟ ಸುಳ್ಳು ಆಶ್ವಾಸನೆಗಳು, ಯುವಕರಿಗೆ ಮಾಡಿದ ದ್ರೋಹ, ಉದ್ಯೋಗ ಕಡಿತ ಎಲ್ಲವೂ ಮತ್ತೆ ಮತ್ತೆ ಮರುಕಳಿಸಬಾರದು . ಈ ನಕಲಿ ರಾಷ್ಟ್ರವಾದಿಗಳು ಮತ್ತೊಮ್ಮೆ ತಲೆ ಎತ್ತಬಾರದು. ಹಾಗಾಗಿ ಈ ಬಾರಿ ಬಿಜೆಪಿಯನ್ನು ಸೋಲಿಸಬೇಕಾಗಿದೆ.

ಪಾಕಿಸ್ತಾನವನ್ನ ಒಂಟಿ ಮಾಡಿದ್ದು ಮೋದಿ ಅಲ್ಲ ಇಂದಿರಾ ಗಾಂಧಿ

ಶಿವಮೊಗ್ಗ: ದೇಶದಲ್ಲಿ ನಕಲಿ ರಾಷ್ಟ್ರವಾದಿಗಳ ಹಾವಳಿ ಹೆಚ್ಚಾಗಿದೆ. ಮೋದಿಯವರ ಯಾವುದೇ ಹೆಜ್ಜೆಯನ್ನು ಕಾರ್ಯ ವೈಖರಿಯನ್ನು ಪ್ರಶ್ನಿಸಿದರೆ ಅವರು ರಾಷ್ಟ್ರದ್ರೋಹಿಗಳಾಗುವಂತಾಗಿದೆ . ಈ ರೀತಿಯ ವಾತಾವರಣ ಪ್ರಜಾಪ್ರಭುತ್ವ ವ್ಯವಸ್ಥೆಗೆ ಸರಿಯಲ್ಲ ಎಂದು ಜೆಡಿಎಸ್‌ ರಾಜ್ಯಾಧ್ಯಕ್ಷ ಹೆಚ್.​​​ ವಿಶ್ವನಾಥ್​​​ ಹೇಳಿದ್ದಾರೆ.

ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಈ ಲೋಕಸಭಾ ಚುನಾವಣೆ ತುಂಬಾ ಪ್ರಮುಖವಾಗಿದೆ. ಮೋದಿ ಸರ್ಕಾರ ತಪ್ಪು ಹೆಜ್ಜೆಗಳು, ಅವರು ಕೊಟ್ಟ ಸುಳ್ಳು ಆಶ್ವಾಸನೆಗಳು, ಯುವಕರಿಗೆ ಮಾಡಿದ ದ್ರೋಹ, ಉದ್ಯೋಗ ಕಡಿತ ಎಲ್ಲವೂ ಮತ್ತೆ ಮತ್ತೆ ಮರುಕಳಿಸಬಾರದು . ಈ ನಕಲಿ ರಾಷ್ಟ್ರವಾದಿಗಳು ಮತ್ತೊಮ್ಮೆ ತಲೆ ಎತ್ತಬಾರದು. ಹಾಗಾಗಿ ಈ ಬಾರಿ ಬಿಜೆಪಿಯನ್ನು ಸೋಲಿಸಬೇಕಾಗಿದೆ ಎಂದರು.

ಸೈನಿಕರನ್ನು ಮುಂದಿಟ್ಟುಕೊಂಡು ಪಾಕ್‌ನ ಒಂಟಿ ಮಾಡುತ್ತೇನೆ ಎಂದು ಹೇಳುತ್ತಿರುವ ಪ್ರಧಾನಿಯವರಿಗೆ ಇತಿಹಾಸ ಗೊತ್ತಿಲ್ಲ. ಇಂದಿರಾಗಾಂಧಿ ಅವರು ಪ್ರಧಾನಿಯಾಗಿದ್ದಾಗ ಮೊಟ್ಟಮೊದಲ ಬಾರಿಗೆ ಪಾಕ್‌ನ ಒಂಟಿ ಮಾಡಿದ್ದರು. ಬಾಂಗ್ಲಾದೇಶವನ್ನು ಪಾಕ್‌ನಿಂದ ಬೇರ್ಪಡಿಸಿ ಅದರ ರೆಕ್ಕೆಯನ್ನು ಕತ್ತರಿಸಿದ್ದು ಇಂದಿರಾಗಾಂಧಿ ಅವರು, ಮೋದಿಯವರು ಅಲ್ಲ ಎಂದರು.

ಮೋದಿ ಒಬ್ಬ ಮಹಾನ್ ಸುಳ್ಳುಗಾರ. 2014 ರಲ್ಲಿ ಅವರು ಕೊಟ್ಟ ಆಶ್ವಾಸನೆಗಳು ಇಂದು ಎಲ್ಲಿ ಹೋಗಿವೆ, ಅಭಿವೃದ್ಧಿಯ ಹರಿಕಾರ ಎಂದು ತನಗೆ ತಾನೇ ಬಣ್ಣಿಸಿಕೊಳ್ಳುವ ಈ ಮೋದಿ ಮಾಡಿದ ಮೊದಲ ಕೆಲಸ ಎಂದರೆ. ಯೋಜನಾ ಆಯೋಗವನ್ನೆ ರದ್ದು ಮಾಡಿ ನೀತಿ ಆಯೋಗವನ್ನ ತಂದಿದ್ದು ಎಂದು ಟೀಕಿಸಿದರು.

ಉದ್ಯೋಗ ಸೃಷ್ಟಿ ಮಾಡುತ್ತೇನೆ ಎಂದು ಯುವಕರ ಮನಸ್ಸಿನಲ್ಲಿ ಇಲ್ಲಸಲ್ಲದ ಆಸೆಗಳನ್ನು ತೋರಿಸಿ, ಹೊಸ ಉದ್ಯೋಗ ವಿರಲಿ, ಇರುವ ಉದ್ಯೋಗವನ್ನೂ ಕಸಿದು ಕೊಂಡರು. ಇವರು ಈಗಲೂ ಶೇ. 40ರಷ್ಟು ಖಾಲಿ ಉದ್ಯೋಗಗಳಿವೆ. ಜೊತೆಗೆ ಅನೇಕ ಸರ್ಕಾರಿ ಸಂಸ್ಥೆಗಳನ್ನು ಮುಚ್ಚಿದ ಕೀರ್ತಿ ಮೋದಿ ಅವರಿಗೆ ಸಲ್ಲುತ್ತದೆ. ಬಿಎಸ್​​ಎನ್​​​​​ಎಲ್​​​ ಸೇರಿದಂತೆ ಮುಂದಿನ ದಿನಗಳಲ್ಲಿ ಎಲ್ಲವೂ ಮಾಯವಾಗುವ ಕಾಲ ದೂರವಿಲ್ಲ ಎಂದರು.

ಪಾಕ್‌ನ ಟೀಕಿಸುವ ಇವರು ರಾತ್ರೋರಾತ್ರಿ ಪಾಕ್‌ ಪ್ರಧಾನಿ ಮನೆಗೆ ಹೋಗಿ ಅಪ್ಪಿಕೊಂಡು ಊಟ ಮಾಡಿ ಬರುತ್ತಾರೆ. ಇದು ಅವರ ಪಾಕ್‌ ಭಕ್ತಿ, ಹೋಗಲಿ ಬರುವಾಗ ದಾವುದ್ ಇಬ್ರಾಹಿಂ ನಾದರೂ ಕರೆದುಕೊಂಡು ಬಂದರಾ, ಇಲ್ಲ ಹಾಗೆ ಬರಿಗೈಲಿ ಬಂದರು ಎಂದು ವ್ಯಂಗವಾಡಿದರು. ಜಿಎಸ್‌ಟಿ ನೋಟ್ ಬ್ಯಾನ್ ಗಳಿಂದ ದೇಶದ ಆರ್ಥಿಕತೆ ಸ್ಥಿತಿಯ ಬಿದ್ದು ಹೋಯಿತು. ಯುದ್ಧ ವಿಮಾನ ಭ್ರಷ್ಟಾಚಾರಗಳು ದೇಶದ ಉದ್ದಗಲಕ್ಕೂ ತಲುಪಿದ್ದು ಇದಕ್ಕೆ ಸಂಬಂಧಿಸಿದ ಕಡತಗಳು ಕಳುವಾಗಿದೆ ಎಂದು ಹೇಳುವ ಮಟ್ಟಕ್ಕೆ ಬಂದಿರುವುದು ನಾಚಿಕೆಗೇಡಿನ ಸಂಗತಿ ಎಂದು ಹೀಯಾಳಿಸಿದರು.

ನಾನು ಸತ್ಯವಂತ ಸುಳ್ಳು ಹೇಳುವುದಿಲ್ಲ ಎಂದು ಹೇಳುವ ಮೋದಿ ಜಿಯೋ ಕಂಪನಿಗೆ ಮಾರ್ಕೆಟಿಂಗ್ ಮಾಡುವ ರಾಯಭಾರಿಯಾಗುತ್ತಾರೆ ಎಂದರೆ ಇವರ ಮನೋಭೂಮಿಕೆಯನ್ನು ಅರ್ಥ ಮಾಡಿಕೊಳ್ಳಬಹುದು ಎಂದರು. ಐಟಿಬಿಟಿಯನ್ನು ನಾನು ಮಾಡಿದ್ದು ಎಂದು ಹೇಳಿಕೊಳ್ಳುವ ಮೋದಿಯವರು ಅರ್ಥ ಮಾಡಿಕೊಳ್ಳಬೇಕು, ಭಾರತ ದೇಶದಲ್ಲಿ ಮೊಬೈಲ್​​ಗಳು ರಿಂಗಿಸಲು ರಾಜೀವ್ ಗಾಂಧಿ ಅವರೇ ಕಾರಣ. ಆದರೆ ಮೋದಿ ತಾನು ಕ್ರಾಂತಿ ಮಾಡುತ್ತೇನೆ ಎಂದು ಹೇಳುತ್ತಾ ಅಂಬಾನಿ ಅದಾನಿ ಯಂತವರ ಎದುರಿನಲ್ಲಿ ವಾಂತಿ ಮಾಡಿಕೊಳ್ಳುತ್ತಿದ್ದಾನೆ ಅಷ್ಟೇ ಎಂದರು.

ಕೇಂದ್ರ ಸರ್ಕಾರ ಅಡಿಕೆ ಬೆಳೆಗಾರರಿಗೆ ಮಹಾನ ವಂಚನೆ ಮಾಡಿದೆ, ಅಮಿತ್ ಶಾ ಅವರು ಅಡಿಕೆ ಬೆಳೆಗಾರರ ನೆರವಿಗೆ ಬರುತ್ತೇನೆ ಎಂದು ಮಾತುಕೊಟ್ಟಿದ್ದರು ಆದರೆ ಅವರು ಮಾಡಿದ್ದೇನು ಅಡಿಕೆ ಒಂದು ವಿಷ ಪದಾರ್ಥ ಎಂದು ಹೇಳಿದರು. ಇದು ಇವರ ರೈತ ನೀತಿ, ಇಂಥವರಿಗೆ ರೈತರು ಮತ ಕೊಡಬೇಕು ಎಂದು ಪ್ರಶ್ನಿಸಿದರು.

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.