ETV Bharat / state

ಮೊಬೈಲ್ ಟವರ್ ಬ್ಯಾಟರಿ ಕಳ್ಳರನ್ನು 24 ಗಂಟೆಯಲ್ಲೇ ಬಂಧಿಸಿದ ಸೊರಬ ಪೊಲೀಸರು

ಮೊಬೈಲ್ ಟವರ್ ಬ್ಯಾಟರಿ ಕಳ್ಳರನ್ನು ಸೊರಬ ಪೊಲೀಸರು 24 ಗಂಟೆಯಲ್ಲೇ ಬಂಧಿಸಿದ್ದಾರೆ.

author img

By

Published : Apr 16, 2021, 2:18 AM IST

Mobile tower battery thieves accused, Mobile tower battery thieves accused arrested by Shivamogga police, Shivamogga police, Shivamogga police news, ಮೊಬೈಲ್ ಟವರ್ ಬ್ಯಾಟರಿ ಕಳ್ಳರು, ಮೊಬೈಲ್ ಟವರ್ ಬ್ಯಾಟರಿ ಕಳ್ಳರನ್ನು ಬಂಧಿಸಿದ ಶಿವಮೊಗ್ಗ ಪೊಲೀಸರು, ಶಿವಮೊಗ್ಗ ಪೊಲೀಸ್​, ಶಿವಮೊಗ್ಗ ಪೊಲೀಸ್​ ಸುದ್ದಿ,
ಮೊಬೈಲ್ ಟವರ್ ಬ್ಯಾಟರಿ ಕಳ್ಳರನ್ನು 24 ಗಂಟೆಯಲ್ಲೇ ಸೊರಬ ಬಂಧಿಸಿದ ಪೊಲೀಸರು

ಶಿವಮೊಗ್ಗ: ಮೊಬೈಲ್ ಟವರ್​ಗಳ ಬ್ಯಾಟರಿ ಕಳ್ಳತನ ಮಾಡುತ್ತಿದ್ದ ಗ್ಯಾಂಗ್ ಬಂಧಿಸುವಲ್ಲಿ‌ ಸೊರಬ ಪೊಲೀಸರು ಯಶಸ್ವಿಯಾಗಿದ್ದಾರೆ.

ಸೊರಬ ತಾಲೂಕಿನ ಮಾವಲಿ ಗ್ರಾಮದಲ್ಲಿನ ಮೊಬೈಲ್​ ಟವರ್ ಬ್ಯಾಟರಿಗಳು ಕಳ್ಳತನವಾಗುತ್ತಿದ್ದವು. ಕಳ್ಳರು ಬ್ಯಾಟರಿಗಳನ್ನು ಕದ್ದ ಪರಾರಿಯಾಗುತ್ತಿದ್ದರು. ಈ ಬಗ್ಗೆ ಟವರ್ ಟೆಕ್ನಿಷಿಯನ್ ವಿನಯ್​ ಎಂಬುವರು ದೂರು ನೀಡಿದ್ದರು.

ಪ್ರಕರಣ‌ ದಾಖಲಿಸಿ‌ಕೊಂಡಿದ್ದ ಪೊಲೀಸರು ಕಳ್ಳರನ್ನು‌ ಹಿಡಿಯಲು ತಂಡ ರಚನೆ ಮಾಡಲಾಗಿತ್ತು. 24 ಗಂಟೆಯಲ್ಲೇ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಜನರನ್ನು ಬಂಧಿಸಿದ್ದಾರೆ.

ಆರೋಪಿಗಳು ಹಾವೇರಿ ಜಿಲ್ಲೆಯ‌ ಹೀರೆ‌ಲಿಂಗದಹಳ್ಳಿ ಗ್ರಾಮದ ಚಂದ್ರು (21), ಕುದುರೆಗಣಿ ಗ್ರಾಮದ ಗಣೇಶ್ (33), ಶಿರಸಿಯ ದೀಪರ್ ಶಿಬಾಜಿ (33), ಸುರೇಶ್ ( 20), ಯುವರಾಜ ಕೇಶವ (48) ಹಾಗೂ ಉತ್ತರ ಪ್ರವೇಶದ ಗುಲ್ಛಾನ್ ನಾಜೀರ್(29) ಎಂದು ಗುರುತಿಸಲಾಗಿದೆ.

ಕಳ್ಳರು ಕಳ್ಳತನಕ್ಕೆ ಬಳಸಿದ್ದ ಟಾಟಾ ಏಸ್ ಮತ್ತು‌ಒಂದು ಬೊಲೆರೊ ವಾಹನವನ್ನು ವಶಕ್ಕೆ ಪಡೆಯಲಾಗಿದೆ. ಈ ಘಟನೆ ಕುರಿತು ಸೊರಬ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.