ETV Bharat / state

ಪ್ಯಾಂಟ್​​ನಲ್ಲಿಟ್ಟುಕೊಂಡಿದ್ದ ಮೊಬೈಲ್​ ಬ್ಲಾಸ್ಟ್​... ಯುವಕನಿಗೆ ಗಾಯ! - ಪ್ಯಾಂಟ್​​ನಲ್ಲಿಟ್ಟಿಕೊಂಡಿದ್ದ ಮೊಬೈಲ್​ ಬ್ಲಾಸ್ಟ್​

ಪ್ಯಾಂಟ್​ ಜೇಬಿನಲ್ಲಿಟ್ಟುಕೊಂಡಿದ್ದ ಮೊಬೈಲ್​ ಏಕಾಏಕಿ ಸ್ಫೋಟಗೊಂಡಿರುವ ಪರಿಣಾಮ ಯವಕ ಗಾಯಗೊಂಡಿರುವ ಘಟನೆ ನಡೆದಿದೆ.

Mobile Blast in shimoga
Mobile Blast in shimoga
author img

By

Published : Sep 17, 2020, 12:48 AM IST

Updated : Sep 17, 2020, 6:35 AM IST

ಶಿವಮೊಗ್ಗ: ಬೈಕ್​​ ಮೇಲೆ ತೆರಳುತ್ತಿದ್ದ ವೇಳೆ ಪ್ಯಾಂಟ್​​ನಲ್ಲಿಟ್ಟುಕೊಂಡಿದ್ದ ಮೊಬೈಲ್​ ಏಕಾಏಕಿ ಸ್ಫೋಟಗೊಂಡಿರುವ ಪರಿಣಾಮ ಯುವಕ ಗಾಯಗೊಂಡಿರುವ ಘಟನೆ ನಡೆದಿದೆ.

ಪ್ಯಾಂಟ್ ಜೇಬಿನಲ್ಲಿ ಮೊಬೈಲ್​ ಇಟ್ಟುಕೊಂಡು ಬೈಕ್ ಚಲಾಯಿಸುತ್ತಿದ್ದಾಗ ಏಕಾಏಕಿ ಬ್ಲಾಸ್ಟ್ ಆಗಿದೆ. ಇದರಿಂದ ಬೈಕ್ ಸವಾರ ಗಾಯಗೊಂಡಿದ್ದಾರೆ. ಶಿವಮೊಗ್ಗದ ಸೊರಬ ತಾಲೂಕು ಕುಪ್ಪಗುಡ್ಡೆ ಗ್ರಾಮದ ಕೆರೆ ಬಳಿ ಘಟನೆ ನಡೆದಿದೆ.

ತವನಂದಿ ಗ್ರಾಮದ ಶರತ್(22) ಗಾಯಗೊಂಡವರು. ತವನಂದಿ ಗ್ರಾಮದಿಂದ ಕುಪ್ಪಗುಡ್ಡೆಗೆ ಶರತ್​ ಹೋಗುತ್ತಿದ್ದಾಗ ಕೆರೆಯ ಬಳಿ ಮೊಬೈಲ್ ಸ್ಫೋಟಗೊಂಡಿದೆ. ಗಾಬರಿಗೊಂಡ ಶರತ್​ ಬೈಕ್​​ ನಿಯಂತ್ರಣ ಕಳೆದುಕೊಂಡು ಕೆರೆಗೆ ಬಿದ್ದಿದ್ದಾರೆ.

ತಕ್ಷಣ ಆತನನ್ನು ಹಿಂಬದಿ ಬೈಕ್ ಸವಾರರು ಸೊರಬ ತಾಲೂಕು ಆಸ್ಪತ್ರೆಗೆ ದಾಖಲಿಸಿದ್ದಾರೆ. ಶರತ್​ನ ಬಲ ತೊಡೆಗೆ ಗಾಯವಾಗಿದೆ. ಈ ಕುರಿತು ಆನವಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Last Updated : Sep 17, 2020, 6:35 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.