ಶಿವಮೊಗ್ಗ : ಹಾಡಹಗಲೆ ಸಹೋದರಿಬ್ಬರ ಮೇಲೆ ಕಿಡಿಗೇಡಿಗಳ ಗುಂಪು ಮಾರಾಕಾಸ್ತ್ರಗಳಿಂದ ಹಲ್ಲೆ ನಡೆಸಿರುವ ಘಟನೆ ಶಿವಮೊಗ್ಗದ ಟಿಪ್ಪು ನಗರದಲ್ಲಿ ನಡೆದಿದೆ.
ಟಿಪ್ಪು ನಗರದ 7ನೇ ತಿರುವಿನ ನಿವಾಸಿಗಳಾದ ಸಯ್ಯದ್ ಇಮ್ರಾನ್ ಹಾಗೂ ಸಯ್ಯದ್ ಸಾದಿಕ್ ಮನೆಗೆ ಏಕಾಏಕಿ ನುಗ್ಗಿದ ಕಿಡಿಗೇಡಿಗಳ ಗುಂಪು ಹಲ್ಲೆ ನಡೆಸಿದೆ. ಇಮ್ರಾನ್ ಹಳೆ ವಾಹನಗಳ ವ್ಯಾಪಾರಿಯಾಗಿದ್ದಾನೆ. ಈತನಿಗೆ ಬಚ್ಚಾ ಗ್ಯಾಂಗ್ನ ಕೆಲವರು ಪೋನ್ ಮಾಡಿ ಹಣ ನೀಡುವಂತೆ ಬೇಡಿಕೆ ಇಟ್ಟಿದ್ದರು. ಇಮ್ರಾನ್ ಹಣ ನೀಡದೇ, ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದ. ಈ ಹಿನ್ನೆಲೆ ಇಮ್ರಾನ್ನನ್ನು ಬೆದರಿಸಿ ಹಣ ನೀಡುವಂತೆ ಒತ್ತಾಯಿಸಲಾಗುತ್ತಿತ್ತು. ಹಣ ನೀಡದ ಕಾರಣ ಬಚ್ಚಾ ಗ್ಯಾಂಗ್ನ ತೌಸೀಫ್ ಎಂಬಾತ ತಂಡದೊಂದಿಗೆ ಬಂದು ಸಹೋದರರ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ತಿಳಿದು ಬಂದಿದೆ.
ಓದಿ : ಹುಟ್ಟುಹಬ್ಬದ ವಿಶ್ ಮಾಡೋಕೆ ಬಂದು ಭಾವನನ್ನೇ ಕೊಂದ: ಸಿಲಿಕಾನ್ ಸಿಟಿಯಲ್ಲಿ ಮರ್ಯಾದಾ ಹತ್ಯೆ..?
ಹಲ್ಲೆಯಿಂದ ಇಮ್ರಾನ್ ಕೈಗೆ ಹಾಗೂ ಸಾದಿಕ್ನ ಬೆರಳು, ಕಿವಿಗಳಿಗೆ ಗಾಯಗಳಾಗಿವೆ. ಗಾಯಾಳುಗಳನ್ನು ನಗರದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಈ ಕುರಿತು ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.