ಶಿವಮೊಗ್ಗ: ಕುರುಬ ಸಮುದಾಯ ಸಿದ್ದರಾಮಯ್ಯರನ್ನು ಸಿಎಂ ಮಾಡಿತ್ತು. ಆದರೆ ಎಸ್ಟಿ ಮೀಸಲಾತಿ ಹೋರಾಟಕ್ಕೆ ಬರದೇ ಸಮುದಾಯಕ್ಕೆ ಅವರು ಕೈ ಕೊಟ್ಟಿದ್ದಾರೆ ಎಂದು ಸಚಿವ ಕೆ.ಎಸ್. ಈಶ್ವರಪ್ಪ ಕಿಡಿ ಕಾರಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯರನ್ನು ಇಬ್ಬರು ಸ್ವಾಮೀಜಿಗಳು ಭೇಟಿ ಮಾಡಿ ಕರೆದರೂ ಬರಲಿಲ್ಲ. ಆಗ ನಾನು ಪೋನ್ ಮಾಡಿ ಬರಲು ವಿನಂತಿಸಿದರೂ ಬರಲಿಲ್ಲ. ನಂತರ ಪಾದಯಾತ್ರೆ ಹಿಂದೆ ಆರ್ಎಸ್ಎಸ್ ಇದೆ ಎಂದ್ರು, ಆರ್ಎಸ್ಎಸ್ಗೆ ಗ್ರಹಚಾರ ಕೆಟ್ಟಿದೆಯೇ ಎಂದು ಪ್ರಶ್ನೆ ಮಾಡಿದರು.
ಸಿದ್ದರಾಮಯ್ಯ ಹೋರಾಟಕ್ಕೆ ಏಕೆ ಬರಲಿಲ್ಲ ಎಂಬುದನ್ನು ಹೇಳಬೇಕು. ಎಸ್ಟಿ ಮೀಸಲಾತಿ ಕುರಿತು ರಾಜ್ಯ ಸರ್ಕಾರ ಸಚಿವ ಸಂಪುಟದಲ್ಲಿಟ್ಟು ತೀರ್ಮಾನ ಮಾಡಿ ಕೇಂದ್ರ ಸರ್ಕಾರಕ್ಕೆ ಕಳುಹಿಸಬೇಕು. ಈ ಬಗ್ಗೆ ಪ್ರಧಾನಿ ಹಾಗೂ ಗೃಹ ಸಚಿವರು ಈ ಬಗ್ಗೆ ಗಮನ ಹರಿಸುತ್ತಾರೆ ಎಂದರು.