ಶಿವಮೊಗ್ಗ : ನಿಜವಾದ ರೈತರು ಪ್ರತಿಭಟನೆ ಮಾಡಿ ಭಾರತ್ ಬಂದ್ಗೆ ಬೆಂಬಲ ನೀಡಿಲ್ಲ. ಏಜೆಂಟ್ಗಳು ಮಾರ್ಕೆಟಿಂಗ್ ಕ್ರೆಡಿಟ್ ಮಾಡೋದಕ್ಕೆ ಈ ರೀತಿ ಮಾಡುತ್ತಿದ್ದಾರೆ ಎಂದು ಸಚಿವ ನಾರಾಯಣಗೌಡ ಆರೋಪಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೈತರಿಗೇನು ಈ ಕಾಯ್ದೆಗಳಿಂದ ತೊಂದರೆಯಾಗುತ್ತಿದೆ? ಪ್ರಧಾನಿ ಮೋದಿ ರೈತರಿಗೆ ಎಲ್ಲಾ ಸೌಲಭ್ಯಗಳನ್ನು ನೀಡಿದ್ದಾರೆ. ಬೆಲೆ ಏರಿಕೆ ಮಾಡಿದ್ದಾರೆ ಎಂದರು.
ಬಂದ್ ಮಾಡುವ ಅಗತ್ಯ ಇರಲಿಲ್ಲ. ಎಪಿಎಂಸಿ ಕಾಯ್ದೆ ರೈತರಿಗೇನು ನಷ್ಟ ಮಾಡಿಲ್ಲ ಹಾಗೂ ಎಪಿಎಂಸಿ ಮಾರುಕಟ್ಟೆಯಲ್ಲಿ ಈಗ ಸುಧಾರಣೆ ಆಗಿದೆ. ರೈತರಿಗೆ ಯಾವುದೇ ರೀತಿ ತೊಂದರೆಯಾಗುವಂತಹ ಕೆಲಸವನ್ನು ನಮ್ಮ ಸರ್ಕಾರ ಮಾಡಲ್ಲ ಎಂದರು.
ಕೊರೊನಾ ಸಂದರ್ಭದಲ್ಲಿ ಭಾರತ್ ಬಂದ್ ಮಾಡುವ ಅವಶ್ಯಕತೆ ಇರಲಿಲ್ಲ. ಪ್ರಧಾನಿಗಳು ನೇಮಕ ಮಾಡಿರುವ ಸಮಿತಿಯ ಬಳಿ ಕೂತು ಚರ್ಚಿಸಿ ಸಮಸ್ಯೆ ಬಗೆಹರಿಸಿಕೊಳ್ಳಬಹುದು.
ವರ್ಷವಿಡಿ ಪ್ರತಿಭಟನೆ ಮಾಡಲು ರೈತರಿಂದ ಸಾಧ್ಯನಾ? ಇಲ್ಲಿ ನಿಜವಾದ ರೈತರು ಯಾರೂ ಪ್ರತಿಭಟನೆ ಮಾಡುತ್ತಿಲ್ಲ ಎಂದರು. ನಿಜವಾದ ರೈತರು ಸೌಲಭ್ಯ ಕೇಳುತ್ತಿದ್ದಾರೆ. ರೈತರು ಕೇಳುವ ಸೌಲಭ್ಯವನ್ನು ನೀಡಲು ಸರ್ಕಾರ ತಯಾರಿದೆ. ಇದು ರೈತರದೇ ಸರ್ಕಾರ ಎಂದು ಹೇಳಿದರು.
ಓದಿ: ರೈತರ ಪ್ರತಿಭಟನೆ: ದೇವಿ ಮೈಮೇಲೆ ಬಂದಿದ್ದಾಳೆಂದು ಬೆಳಗಾವಿ ಅಜ್ಜಿಯ ಹೈಡ್ರಾಮಾ!