ಶಿವಮೊಗ್ಗ: ಭಾರತೀಯ ಸಂಸ್ಕೃತಿಯ ಪ್ರತೀಕ ಅಂದರೆ ಅದು ವಾಲ್ಮೀಕಿ ಎಂದು ಸಚಿವ ಈಶ್ವರಪ್ಪ ಪ್ರತಿಪಾದಿಸಿದ್ದಾರೆ. ನಗರದಲ್ಲಿ ನಡೆದ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವಾಲ್ಮೀಕಿ ಬರೆದ ರಾಮಾಯಣವನ್ನು ಭಾರತದ ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಮ್ಮ ರಾಮಾಯಣದಲ್ಲಿ ತಿಳಿಸಿದ್ದಾರೆ. ಇವರು ಗಂಡ ಹೆಂಡತಿ ಸಂಬಂಧದ ಕುರಿತು ವಿವರವಾಗಿ ತಿಳಿಸಿದ್ದಾರೆ. ಗಂಡನಿಗೆ ಹೇಗೆ ಮರ್ಯಾದೆ ನೀಡಬೇಕು ಎಂದು ವಾಲ್ಮೀಕಿ ತಿಳಿಸಿದ್ದಾರೆ. ರಾಮ ಸೀತೆ, ಲಕ್ಷ್ಮಣ ಸಂಬಂಧ, ತಂದೆ ತಾಯಿ ಸಂಬಂಧವನ್ನು ತಿಳಿಸಿದ್ದಾರೆ. ತಂದೆಗೆ ಕೊಟ್ಟ ಮಾತಿಗೆ 14 ವರ್ಷ ವನವಾಸ ಮಾಡುತ್ತಾರೆ.
ರಾಮಾಯಣ ಒಂದು ಪುಸ್ತಕ ಅಲ್ಲ, ಅದು ಜೀವನಸಾರ ಎಂದ್ರು. ಚೀನಾಗೆ ಹೋದಾಗ ಅಲ್ಲಿನ ಹೋಟೆಲ್ನಲ್ಲಿ ಬೆಳಗ್ಗೆ ಎದ್ದ ತಕ್ಷಣ ರಾಮಾಯಣ ಪುಸ್ತಕ ಕಾಣುವಂತೆ ಇಟ್ಟಿದ್ದಾರೆ ಎಂದರು.
ಅಯೋಧ್ಯಾ ರಾಮಮಂದಿರದ ಚರ್ಚೆ ನಡೆಸುತ್ತಿದ್ದಾರೆ. ಅಯೋಧ್ಯೆಯಲ್ಲಿ ರಾಮ ಹುಟ್ಟಿದ್ದು ಅಂತ ವಾಲ್ಮೀಕಿ ರಾಮಾಯಣದಲ್ಲಿ ತಿಳಿಸಿದ್ದಾರೆ. ನಮ್ಮಲ್ಲಿ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ರಾಮನ ಹುಟ್ಟಿನ ಬಗ್ಗೆ ಚರ್ಚೆ ನಡೆಸುತ್ತಿದ್ದಾರೆ. ರಾಮಾಯಣದ ಪುಸ್ತಕವು ಎಲ್ಲ ಧರ್ಮ, ಜಾತಿಯವರು ಓದಿದರೆ ಜೀವನದ ದಾರಿ ದೀಪ ಕಾಣುತ್ತದೆ. ನಮ್ಮೆಲ್ಲರ ದೇಹದಲ್ಲಿ ವಾಲ್ಮೀಕಿಯ ರಕ್ತ ಹರಿಯುತ್ತಿದೆ ಅಂತ ಧೈರ್ಯವಾಗಿ ಹೇಳಬಹುದು. ವಾಲ್ಮೀಕಿ ಬರೆದ ರಾಮಾಯಣದಂತೆ ನಡೆದುಕೊಂಡರೆ ಸಾಕು ಎಂದ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದರು.