ETV Bharat / state

ಲಸಿಕೆಯನ್ನು ವಿರೋಧಿಸಿದವರೇ ಇಂದು ಕ್ಯೂ ನಿಂತಿದ್ದಾರೆ: ಸಚಿವ ಈಶ್ವರಪ್ಪ

ದೇಶದಲ್ಲಿ ಲಸಿಕೆ ಹಾಕಿಸಿಕೊಳ್ಳಬೇಡಿ, ಪುರುಷತ್ವ ಹೋಗಿಬಿಡುತ್ತದೆ ಎಂದು ಅಪಪ್ರಚಾರ ಮಾಡಿದವರೇ ಇಂದು ಕೋವಿಡ್ ಲಸಿಕೆಗಾಗಿ ಕ್ಯೂ ನಿಂತಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್ ಈಶ್ವರಪ್ಪ ಹೇಳಿದರು.

author img

By

Published : Jul 4, 2021, 3:38 PM IST

Shivamogga
ಸಚಿವ ಕೆ.ಎಸ್ ಈಶ್ವರಪ್ಪ

ಶಿವಮೊಗ್ಗ: ಕೋವಿಡ್‌ ಲಸಿಕೆಯನ್ನು ವಿರೋಧಿಸಿದವರೇ ಇಂದು ಅದೇ ಲಸಿಕೆಗಾಗಿ ಸರತಿ ಸಾಲಲ್ಲಿ ನಿಂತಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್ ಈಶ್ವರಪ್ಪ ಹೇಳಿದ್ದಾರೆ. ನಗರದ ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ನಡೆದ ಜಿಲ್ಲಾ ಕಾರ್ಯಕಾರಣಿ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.

ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್ ಈಶ್ವರಪ್ಪ

ಕೊರೊನಾ ನಿಯಂತ್ರಣದಲ್ಲಿ ಜಗತ್ತಿನಲ್ಲಿಯೇ ಭಾರತ ಮೊದಲ ಸ್ಥಾನದಲ್ಲಿದೆ. ಲಸಿಕೆ ವಿಚಾರದಲ್ಲಿ, ಕೊರೊನಾ ರೋಗಿಗಳಿಗೆ ನೀಡುತ್ತಿರುವ ಚಿಕಿತ್ಸೆ ವಿಚಾರದಲ್ಲಿ ನಾವು ಮೊದಲ ಸ್ಥಾನದಲ್ಲಿದ್ದೇವೆ ಎಂದರು.

ದೇಶದಲ್ಲಿ ಸಂಘಟನಾತ್ಮಕ ಚಟುವಟಿಕೆಗಳಿಂದ ದೇಶದ ಸಂಸ್ಕೃತಿ ಉಳಿಸುವ ಮೂಲಕ ಸಂಘಟನೆ ಬೆಳೆಯುತ್ತಿದೆ. ಇನ್ನು ನಮ್ಮ ಪಕ್ಷದಲ್ಲೇ ಇದ್ದು ಟೀಕೆ ಮಾಡುವರಿದ್ದಾರೆ ಅದು ನೋವಿದೆ ಎಂದು ಹೇಳಿದರು.

ಇಂದು ಮುಖ್ಯಮಂತ್ರಿಯಾಗಿ ಯಡಿಯೂರಪ್ಪನವರು ಹಾಗೂ ಯೋಗಿ ಆದಿತ್ಯನಾಥ್ ಮುಂದುವರಿಯುತ್ತಿದ್ದಾರೆ. ಸಿಎಂ ಬದಲಾಗುತ್ತಾರೆ ಎಂದವರು ಮೈ ಮುಟ್ಟಿ ನೋಡಿಕೊಳ್ಳಬೇಕು. ಇವೆಲ್ಲದಕ್ಕೂ ಕಾರಣ ಸಂಘಟನೆ ಎಂದು ಸ್ವಪಕ್ಷೀಯ ವಿರೋಧಿಗಳಿಗೆ ಟಾಂಗ್ ನೀಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.