ಶಿವಮೊಗ್ಗ: ಹಿಂದೂ ಸಮಾಜಕ್ಕೂ ಒಂದು ತಾಳ್ಮೆ ಇರುತ್ತದೆ. ಅದನ್ನು ಮೀರಿದರೆ ಸಮಾಜ ಒಡೆಯುವ ಪರಿಸ್ಥಿತಿ ಬರುತ್ತದೆ. ಈ ಮಾತನ್ನ ಒಬ್ಬ ಮಂತ್ರಿಯಾಗಿ ಹೇಳುತ್ತಿದ್ದೇನೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್ ಈಶ್ವರಪ್ಪ ಹೇಳಿದರು. ನಗರದ ಮೆಗ್ಗಾನ್ ಆಸ್ಪತ್ರೆಯಲ್ಲಿ ಗುರುವಾರ ಸಂಜೆ ದುಷ್ಕರ್ಮಿಗಳಿಂದ ಹಲ್ಲೆಗೊಳಗಾದ ವೆಂಕಟೇಶ ಅವರ ಆರೋಗ್ಯ ವಿಚಾರಿಸಿ, ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
''ಹರ್ಷ ಕೊಲೆಯ ಬಳಿಕ ರಾಜ್ಯ ಸರ್ಕಾರ ಕ್ರಮಕೈಗೊಂಡು ಆರೋಪಿಗಳನ್ನು ಬಂಧಿಸಿದೆ. ಈ ಮಧ್ಯೆ ಗೂಂಡಾ ಮುಸಲ್ಮಾನರ ಮಾನಸಿಕತೆ ಇನ್ನೂ ಕಡಿಮೆಯಾಗಿಲ್ಲ. ನಮ್ಮ ಕಾರ್ಯಕರ್ತ ವೆಂಕಟೇಶ್ ಮೇಲೆ ಮುಸಲ್ಮಾನ ಗೂಂಡಾಗಳು ಹಲ್ಲೆ ಮಾಡಿದ್ದಾರೆ. ಈ ಸಂಬಂಧ ಇಬ್ಬರನ್ನು ಬಂಧಿಸಲಾಗಿದೆ. ಇಂತಹ ಗೂಂಡಾ ಮನಸ್ಥಿತಿಯ ಕೆಲವು ಮುಸ್ಲಿಮರಿಂದ ಇಡೀ ಮುಸ್ಲಿಂ ಸಮಾಜಕ್ಕೆ ಎಫೆಕ್ಟ್ ಆಗುತ್ತದೆ. ಹಾಗಾಗಿ ಮುಸ್ಲಿಂ ನಾಯಕರು ಇಂತಹವರ ವಿರುದ್ಧ ಕ್ರಮ ಕೈಗೊಳ್ಳಬೇಕು'' ಎಂದು ಈಶ್ವರಪ್ಪ ಹೇಳಿದರು.
ಇಡೀ ಸಮಾಜದಲ್ಲಿರುವ ಮುಸಲ್ಮಾನರು ಕೆಟ್ಟವರಲ್ಲ. ಅವರಲ್ಲಿರುವ ಹಿಡಿಯಷ್ಟು ಗೂಂಡಾಗಳು ಇಂತಹ ದುಷ್ಕೃತ್ಯಗಳನ್ನು ಮಾಡುತ್ತಿದ್ದಾರೆ. ಅವರ ವಿರುದ್ಧ ಮುಸ್ಲಿಂ ನಾಯಕರು ಗಮನ ಹರಿಸಬೇಕು ಎಂದು ಸಚಿವ ಈಶ್ವರಪ್ಪ ಸಲಹೆ ನೀಡಿದರು.
ಇದನ್ನೂ ಓದಿ: 'ಉಕ್ರೇನ್ ಜನ ಆಕ್ರೋಶಗೊಂಡು ಸ್ವತಃ ಗನ್ ಹಿಡಿದು ಹೋರಾಡುತ್ತಿದ್ದಾರೆ'