ಶಿವಮೊಗ್ಗ : ಜೋಗಿ ಪ್ರೇಮ್ ನಿರ್ದೇಶನದ 'ಏಕ್ ಲವ್ ಯಾ' ಚಿತ್ರದ ಐದನೇ ಹಾಡು ಮೀಟ್ ಮಾಡೋಣ ಇಲ್ಲಾ ಡೇಟ್ ಮಾಡೋಣ ಸಾಂಗ್ ಅನ್ನು ಖಾಸಗಿ ಹೋಟೆಲ್‌ನಲ್ಲಿ ಸಚಿವ ಕೆ.ಎಸ್ ಈಶ್ವರಪ್ಪ ಬಿಡುಗಡೆ ಮಾಡಿ, ಚಿತ್ರ ತಂಡಕ್ಕೆ ಶುಭಕೋರಿದರು.
ನಗರದ ಖಾಸಗಿ ಹೋಟೆಲ್‌ನಲ್ಲಿ ಹಾಡು ಬಿಡುಗಡೆಗೊಳಿಸಿ ಮಾತನಾಡಿದ ಸಚಿವರು, ಚಿತ್ರದ ಸಾಂಗ್‌ಗಳು ಉತ್ತಮವಾಗಿ ಮೂಡಿ ಬಂದಿವೆ. ಚಿತ್ರರಂಗದಲ್ಲಿ ಉತ್ತಮ ಹೆಸರು ಮಾಡುವುದು ತುಂಬಾ ಕಷ್ಟ.
ಆದರೆ, ವೈಯಕ್ತಿಕ ಪ್ರತಿಭೆ ಮೇಲೆ ರಾಜ್ಯದ ಜನರ ಮನಸ್ಸು ಗೆಲ್ಲುವ ಪ್ರಯತ್ನ ನಿಮ್ಮದಾಗಲಿ. ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿ. ಚಿತ್ರ ಉತ್ತಮವಾಗಿ ಪ್ರದರ್ಶನ ಕಾಣಲಿ ಎಂದು ಶುಭ ಕೋರಿದರು.
ಹಾಡು ಹೇಳಿ ರಂಜಿಸಿದ ನಟಿ ರಚಿತಾ ರಾಮ್ : ನಟಿ ರಚಿತಾ ರಾಮ್ ಎಣ್ಣೆ ಸಾಂಗ್ ಹಾಡುವ ಮೂಲಕ ಅಭಿಮಾನಿಗಳನ್ನು ರಂಜಿಸಿದರು. ಈ ಸಂದರ್ಭದಲ್ಲಿ ಶಾಸಕ ರೇಣುಕಾಚಾರ್ಯ ಚಿತ್ರದ ನಿರ್ಮಾಪಕಿ ರಕ್ಷಿತಾ ಪ್ರೇಮ್, ನಿರ್ದೇಶಕ ಪ್ರೇಮ್, ನಟ ರಾಣ,ನಾಯಕಿ ಗ್ರೀಷ್ಮಾ ಸೇರಿದಂತೆ ಚಿತ್ರ ತಂಡದ ಕಲಾವಿದರು ಉಪಸ್ಥಿತರಿದ್ದರು.