ETV Bharat / state

ಜನ್ಮದಿನದ ಪ್ರಯುಕ್ತ ಕೆರೆ ಅಭಿವೃದ್ಧಿಗೆ ಮುಂದಾದ ಸಚಿವ ಕೆ.ಎಸ್. ಈಶ್ವರಪ್ಪ - Minister KS Eshwarappa

ಕೆರೆಯ ಬಳಿ ನಡೆದ ಸರಳ ಕಾರ್ಯಕ್ರಮದಲ್ಲಿ ಕಾಗಿನೆಲೆ ಕನಕ ಗುರುಪೀಠದ ನಿರಂಜನಾನಂದ ಪುರಿ ಸ್ವಾಮಿಜಿ, ಮಾದರ ಪೀಠದ ಮಾದರ ಚನ್ನಯ್ಯ ಸ್ವಾಮಿಜಿ ಹಾಗೂ ಬೆಕ್ಕಿನ‌ಕಲ್ಮಠದ ಡಾ. ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮಿಜಿಗಳು ವೇದಿಕೆಯಲ್ಲಿ ನಿರ್ಮಾಣ ಮಾಡಿದ್ದ ಸಣ್ಣ ನೀರಿನ ತೊರೆಗೆ ಕಳಸಕ್ಕೆ ನೀರು ಹಾಕುವ ಮೂಲಕ ಕೆರೆ ಪುನಶ್ಚೇತನಕ್ಕೆ ಚಾಲನೆ ನೀಡಿದರು.

ಸಚಿವ ಕೆ.ಎಸ್.ಈಶ್ವರಪ್ಪ
ಸಚಿವ ಕೆ.ಎಸ್.ಈಶ್ವರಪ್ಪ
author img

By

Published : Jun 10, 2021, 1:37 PM IST

ಶಿವಮೊಗ್ಗ: ಗ್ರಾಮೀಣಾಭಿವೃದ್ದಿ ಖಾತೆ ಸಚಿವ ಕೆ.ಎಸ್. ಈಶ್ವರಪ್ಪನವರು ಇಂದು ತಮ್ಮ 73ನೇ ವರ್ಷದ ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಈ ಪ್ರಯುಕ್ತ ಶಿವಮೊಗ್ಗ ಹೊರವಲಯದ ರಾಷ್ಟ್ರೀಯ ಹೆದ್ದಾರಿ 206ರ ಪಕ್ಕದ ರಾಮೀನಕಟ್ಟೆ ಕೆರೆಯನ್ನು ಪುನಶ್ಚೇತನ ಮಾಡಲು ಮುಂದಾಗಿದ್ದು, ತಮ್ಮ ಧರ್ಮಪತ್ನಿ ಜಯಲಕ್ಷ್ಮಿ ಜೊತೆ ಕೆರೆಗೆ ಪೂಜೆ ಸಲ್ಲಿಸಿದರು.

ಕೆರೆಯ ಬಳಿ ನಡೆದ ಸರಳ ಕಾರ್ಯಕ್ರಮದಲ್ಲಿ ಕಾಗಿನೆಲೆ ಕನಕ ಗುರುಪೀಠದ ನಿರಂಜನಾನಂದ ಪುರಿ ಸ್ವಾಮಿಜಿ, ಮಾದರ ಪೀಠದ ಮಾದರ ಚನ್ನಯ್ಯ ಸ್ವಾಮಿಜಿ ಹಾಗೂ ಬೆಕ್ಕಿನ‌ಕಲ್ಮಠದ ಡಾ. ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮಿಜಿಗಳು ವೇದಿಕೆಯಲ್ಲಿ ನಿರ್ಮಾಣ ಮಾಡಿದ್ದ ಸಣ್ಣ ನೀರಿನ ತೊರೆಗೆ ಕಳಸಕ್ಕೆ ನೀರು ಹಾಕುವ ಮೂಲಕ ಕೆರೆ ಪುನಶ್ಚೇತನಕ್ಕೆ ಚಾಲನೆ ನೀಡಿದರು.

ಜನ್ಮದಿನದ ಪ್ರಯುಕ್ತ ಕೆರೆ ಅಭಿವೃದ್ದಿಗೆ ಮುಂದಾದ ಸಚಿವ ಕೆ.ಎಸ್.ಈಶ್ವರಪ್ಪ

ಈ ಕೆರೆಯ ಅಭಿವೃದ್ದಿಯನ್ನು ಶಿವಮೊಗ್ಗದ ಪರಿಸರಾಸಕ್ತರ ತಂಡದ ಮೂಲಕ ನಡೆಸಲಾಗುತ್ತಿದೆ. ಈ ಹಿಂದೆ ಇದೇ ತಂಡದವರು ವಾಜಪೇಯಿ ಲೇಔಟ್​ನಲ್ಲಿ ಕ್ಯಾದಿಕೆರೆಯನ್ನು ಅಭಿವೃದ್ದಿ ಪಡಿಸಿದ್ದಾರೆ. ಹೀಗಾಗಿ ಸಚಿವರು ಈ ತಂಡಕ್ಕೆ ಪುನಶ್ಚೇತನ ಜವಾಬ್ದಾರಿ ವಹಿಸಿದ್ದಾರೆ. ಈ ಕೆರೆಯು ಸುಮಾರು ನಾಲ್ಕು ಎಕರೆ ಪ್ರದೇಶದಲ್ಲಿದೆ. ಇದರಲ್ಲಿ ಹೂಳೆತ್ತುವುದು, ಉತ್ತಮವಾದ ದಂಡೆ ನಿರ್ಮಾಣ ಮಾಡುವುದು, ಉದ್ಯಾನ ನಿರ್ಮಾಣ ಮಾಡಿ ಗಿಡ- ಮರಗಳನ್ನು ಬೆಳೆಸುವ ಮೂಲಕ ಕೆರೆಯನ್ನು ಅಭಿವೃದ್ದಿ ಮಾಡುವ ಸಂಕಲ್ಪವನ್ನು ಈಶ್ವರಪ್ಪ ಮಾಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.