ETV Bharat / state

ಮತಾಂಧ ಶಕ್ತಿಗಳು ಹರ್ಷನ ಹತ್ಯೆ ಮಾಡಿವೆ: ಸಚಿವ ಕೋಟ ಶ್ರೀನಿವಾಸ ಪೂಜಾರಿ - ಶಿವಮೊಗ್ಗಕ್ಕೆ ಕೋಟ ಶ್ರೀನಿವಾಸ ಪೂಜಾರಿ ಭೇಟಿ

ಫೆಬ್ರವರಿ 20 ರಂದು ಬರ್ಬರವಾಗಿ ಕೊಲೆಯಾದ ಬಜರಂಗದಳದ ಕಾರ್ಯಕರ್ತ ಹರ್ಷನ ಮನೆಗೆ ಇಂದು ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ.

Kota Shrinivas Poojari met Harsha family
ಹರ್ಷ ಕುಟುಂಬ ಭೇಟಿ ಮಾಡಿದ ಸಚಿವ ಕೋಟ ಶ್ರೀನಿವಾಸ ಪೂಜಾರಿ
author img

By

Published : Feb 23, 2022, 6:00 PM IST

ಶಿವಮೊಗ್ಗ: ಇಂದು ಸಮಾಜ ಕಲ್ಯಾಣ ಖಾತೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಫೆ. 20ರಂದು ಕೊಲೆಗೀಡಾದ ಬಜರಂಗದಳ ಕಾರ್ಯಕರ್ತ ಹರ್ಷ ಅವರ ನಿವಾಸಕ್ಕೆ ಭೇಟಿ ನೀಡಿ, ಆತನ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

ಹರ್ಷ ಕುಟುಂಬ ಭೇಟಿ ಮಾಡಿದ ಸಚಿವ ಕೋಟ ಶ್ರೀನಿವಾಸ ಪೂಜಾರಿ

ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮತಾಂಧ ಶಕ್ತಿಗಳು ಹರ್ಷನ ಹತ್ಯೆ ಮಾಡಿವೆ. ಯುವಕನ ಕುಟುಂಬಸ್ಥರನ್ನು ಭೇಟಿ ಮಾಡಿ ಬಂದಿದ್ದೇನೆ. ಯುವಕನ ಪೋಷಕರು ಹತ್ಯೆ ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡುವಂತೆ ಮನವಿ ಮಾಡಿದ್ದಾರೆ. ಸದ್ಯ ಆರೋಪಿಗಳನ್ನು ಬಂಧಿಸಲಾಗಿದ್ದು, ಸರ್ಕಾರ ಮತ್ತು ನ್ಯಾಯಾಲಯ ಸೂಕ್ತ ಶಿಕ್ಷೆ ನೀಡುತ್ತವೆ. ಹರ್ಷ ಕುಟುಂಬದ ಜೊತೆ ಸರ್ಕಾರ ಇದೆ ಎಂದು ಅಭಯ ನೀಡಿದರು.

ಸರ್ಕಾರ ಕಠಿಣ ನಿರ್ಧಾರ ಕೈಗೊಂಡು ಈ ಹತ್ಯೆ ಹಿಂದೆ ಇರುವ ಸಂಘಟನೆಗಳನ್ನು ಬಂಧಿಸಿ ಜೈಲಿಗಟ್ಟುತ್ತೇವೆ. ಪೊಲೀಸ್ ಇಲಾಖೆ ಸಹ ಸಮರ್ಥವಾಗಿ ಕಾರ್ಯ ನಿರ್ವಹಿಸಿದೆ ಎಂದು ಸಚಿವರು ಹೇಳಿದರು.

ಇದನ್ನೂ ಓದಿ: ಶಿವಮೊಗ್ಗ ನಗರದಲ್ಲಿ ಫೆಬ್ರವರಿ 26ರ ತನಕ ಕರ್ಫ್ಯೂ ಮುಂದುವರಿಕೆ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.