ETV Bharat / state

ಜಿಲ್ಲಾ - ತಾಲೂಕು ಪಂಚಾಯಿತಿ ಚುನಾವಣೆ ಮುಂದೂಡುವ ಉದ್ದೇಶ ನಮಗಿಲ್ಲ: ಸಚಿವ ಕೆ. ಎಸ್ ಈಶ್ವರಪ್ಪ - ಜಿಲ್ಲಾ- ತಾಲೂಕು ಪಂಚಾಯತಿ ಚುನಾವಣೆ ಕುರಿತು ಈಶ್ವರಪ್ಪ ಪ್ರತಿಕ್ರಿಯೆ

ನಮಗೆ ಚುನಾವಣೆ ಮಾಡಲು ಆಸೆ. ಈಗಲೂ ಚುನಾವಣೆ ನಡೆದರೆ ನಮಗೆ ಹೆಚ್ಚು ಸ್ಥಾನ ಸಿಗಲಿದೆ. ಓಬಿಸಿ ಮೀಸಲಾತಿ ಬಿಟ್ಟು ಚುನಾವಣೆ ಮಾಡಲು ಸಾಧ್ಯನಾ? ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ. ಎಸ್ ಈಶ್ವರಪ್ಪ ಹೇಳಿದ್ದಾರೆ.

minister-k-s-eshwarappa
ಸಚಿವ ಕೆ. ಎಸ್ ಈಶ್ವರಪ್ಪ ಮಾತನಾಡಿದರು
author img

By

Published : Feb 11, 2022, 3:56 PM IST

ಬೆಂಗಳೂರು: ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆ ಮುಂದೂಡುವ ಉದ್ದೇಶ ನಮಗಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ. ಎಸ್ ಈಶ್ವರಪ್ಪ ಹೇಳಿದ್ದಾರೆ.

ವಿಧಾನಸೌಧದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಎಸ್ ಸಿ, ಎಸ್​ಟಿಗೆ ಮೀಸಲಾತಿ ಅನ್ವಯ ಎಂದು ಸುಪ್ರೀಂಕೋರ್ಟ್ ಆದೇಶ ಆಗಿದೆ. ಆದರೆ, ಹಿಂದುಳಿದ ವರ್ಗಗಳಿಗೆ ಮೀಸಲಾತಿ ಗೊಂದಲ ಆಗಿದೆ. ಹೀಗಾಗಿ, ಚುನಾವಣೆ ನಮ್ಮ ಕಾಲಾವಧಿಯಲ್ಲಿ ನಡೆಯುವ ಸಾಧ್ಯತೆ ಕಡಿಮೆ ಎಂದು ಪರೋಕ್ಷವಾಗಿ ಹೇಳಿದರು.

ಸಚಿವ ಕೆ. ಎಸ್ ಈಶ್ವರಪ್ಪ ಮಾತನಾಡಿದರು

ಚುನಾವಣೆ ನಡೆಸುವುದಕ್ಕೆ ನಾವು ಮನವಿ ಕಳಿಸಿದ್ದೆವು. ಡಿಲಿಮಿಟೇಶನ್, ರಿಸರ್ವೇಶನ್ ಬಗ್ಗೆ ಬಿಲ್ ತಂದೆವು. ನಾವು ಕಾನೂನು ಬದ್ಧವಾಗಿ ಚುನಾವಣೆ ನಡೆಯಬೇಕೆಂದು ತೀರ್ಮಾನಿಸಿದ್ದೆವು. ಹಾಗಾಗಿ, ಚುನಾವಣೆ ಮುಂದಕ್ಕೆ ಹೋಗಿದೆ. ಸುಪ್ರೀಂ ತೀರ್ಪಿನ ಬಗ್ಗೆ ತಜ್ಞರ ಜೊತೆ ಚರ್ಚಿಸಬೇಕು. ಹಾಗೆ ನೋಡಿದರೆ ಚುನಾವಣೆ ಅಸಾಧ್ಯ. ನಂತರ ಇದರ ಬಗ್ಗೆ ನಿರ್ಧರಿಸಬೇಕು ಎಂದರು.

ಚುನಾವಣೆ ನಡೆಸುವುದಕ್ಕೆ ನಾವು ಹಿಂದೇಟು ಹಾಕುತ್ತಿಲ್ಲ. ಚುನಾವಣಾ ಆಯೋಗ ಕ್ಷೇತ್ರ ಪುನರ್ವಿಂಗಡನೆ ಹಾಗೂ ಮೀಸಲಾತಿ ಬಗ್ಗೆ ಘೋಷಣೆ ಮಾಡಿದೆ. ಆದರೆ, ಮೀಸಲಾತಿ ಹಾಗೂ ಕ್ಷೇತ್ರ ಪುನರ್ ವಿಂಗಡಣೆ ಬಗ್ಗೆ 780 ಆಕ್ಷೇಪಗಳು ಬಂದವು. ಆ ಕಾರಣಕ್ಕಾಗಿ ಬಿಲ್ ತರಲಾಯಿತು. ಐಎಎಸ್ ಅಧಿಕಾರಿ ಲಕ್ಷ್ಮೀನಾರಾಯಣ್ ನೇತೃತ್ವದಲ್ಲಿ ಕಮಿಟಿ ಮಾಡಿದ್ದೆವು. ಈಗ ಸುಪ್ರೀಂ ಕೋರ್ಟ್​ನಲ್ಲಿ ಆದೇಶ ಬಂದಿದೆ.

ಇದರ ಪ್ರಕಾರ ಎಸ್ಸಿ, ಎಸ್ಟಿಗೆ ಮಾತ್ರ ಮೀಸಲಾತಿ ಅನ್ವಯ ಎಂದಿದೆ. ಈ ನಿಟ್ಟಿನಲ್ಲಿ ಒಬಿಸಿಗಳಿಗೆ ಮೀಸಲಾತಿ ಕೊಡುವಂತಿಲ್ಲ. ಒಬಿಸಿ ಕೂಡ ಜನರಲ್ ನಲ್ಲೇ ಬರಲಿದೆ. ಇದರ ಬಗ್ಗೆ ಪ್ರತಿಪಕ್ಷಗಳು ಮಾತನಾಡಲಿ ಎಂದರು. ನಮಗೆ ಚುನಾವಣೆ ಮಾಡಲು ಆಸೆ. ಈಗಲೂ ಚುನಾವಣೆ ನಡೆದರೆ ನಮಗೆ ಹೆಚ್ಚು ಸ್ಥಾನ ಸಿಗಲಿದೆ. ಓಬಿಸಿ ಮೀಸಲಾತಿ ಬಿಟ್ಟು ಚುನಾವಣೆ ಮಾಡಲು ಸಾಧ್ಯನಾ? ಎಂದು ಪ್ರಶ್ನಿಸಿದರು.

ಈ ಕುರಿತು ಮುಖ್ಯಮಂತ್ರಿಗಳು ಮತ್ತು ತಜ್ಞರ ಜೊತೆಗೂ ಮಾತನಾಡುತ್ತೇನೆ. ನಾವು ಕಾನೂನು ಬದ್ಧವಾಗಿ ಚುನಾವಣೆ ನಡೆಯಬೇಕು.‌ ತಜ್ಞರ ಸಮಿತಿ ಮತ್ತೆ ನೇಮಕ ಮಾಡಿದರೆ ನಮ್ಮ ಅವಧಿಯಲ್ಲಿ ಚುನಾವಣೆ ಆಗಲ್ಲ. ಸುಪ್ರೀಂಕೋರ್ಟ್ ಆದೇಶ ಮೀರಿ ಚುನಾವಣೆ ಮಾಡಲು ಹೋದರೆ‌ ಒಬಿಸಿಗೆ ಅನ್ಯಾಯವಾಗಲಿದೆ. ಒಬಿಸಿಗೆ ಅನ್ಯಾಯ ಆಗಲು ನಾವು ಬಿಡುವುದಿಲ್ಲ. ಹಾಗೆ ಮಾಡಿದರೆ ಯಾರಾದರೂ ನ್ಯಾಯಾಲಯಕ್ಕೆ ಹೋದರೆ ಎಷ್ಟು ವರ್ಷ ಚುನಾವಣೆ ಮುಂದಕ್ಕೆ ಹೋಗುತ್ತದೋ ಗೊತ್ತಿಲ್ಲ? ಎಂದರು.

ರಾಷ್ಟ್ರಧ್ವಜದ ವಿಚಾರದಲ್ಲಿ ನಾನು‌ ಮಾತನಾಡಲ್ಲ. ಈಗ ಎಲ್ಲವೂ ಶಾಂತವಾಗಿದೆ. ದಯವಿಟ್ಟು ಅದರ ಬಗ್ಗೆ ಕೇಳಬೇಡಿ. ಸಿದ್ದರಾಮಯ್ಯ ಅವರು ಈಶ್ವರಪ್ಪ ನಾಲಾಯಕ್ ಎಂದ ಬಗ್ಗೆ ಹೇಳಿಕೆ ಬಗ್ಗೆ ಆಮೇಲೆ ಮಾತನಾಡ್ತೇನೆ ಎಂದು ಹೇಳಿದರು.

ಓದಿ: ಹಿಜಾಬ್ ವಿವಾದ: ಹೈಕೋರ್ಟ್ ಹೊರಡಿಸಿದ ಮಧ್ಯಂತರ ತೀರ್ಪಿನಲ್ಲಿ ಏನೇನಿದೆ.?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.