ಶಿವಮೊಗ್ಗ: ಸಿದ್ದರಾಮಯ್ಯ ಕಾಂಗ್ರೆಸ್ ಪಕ್ಷದಲ್ಲಿ ಕಸದ ತೊಟ್ಟಿಯಲ್ಲಿರುವ ವಸ್ತು ಇದ್ದಂತೆ ಎಂದು ಸಚಿವ ಕೆ. ಎಸ್ ಈಶ್ವರಪ್ಪ ಹೇಳಿದ್ದಾರೆ.
ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಗೊಳಿಸಬೇಕು ಎನ್ನುವ ಸಿದ್ದರಾಮಯ್ಯ ಹೇಳಿಕೆಗೆ ತೀರುಗೇಟು ನೀಡುತ್ತಾ, ಸಿದ್ದರಾಮಯ್ಯನವರಿಗೆ ತಲೆ ಕೆಟ್ಟು ಹೋಗಿದೆ. ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳು ಆಗುತ್ತಿರುವುದನ್ನು ನೋಡಿ ಏನು ಉತ್ತರ ಕೊಡಬೇಕು ಎಂಬುದನ್ನು ನೋಡೋಕೂ ಆಗದೇ, ಕೇಳೋಕೋ ಆಗದೆ ಮುಖ್ಯಮಂತ್ರಿ ಸ್ಥಾನ ಕಳೆದುಕೊಂಡ ನಂತರ ಸಿದ್ದರಾಮಯ್ಯ ಹುಚ್ಚರಾಗಿದ್ದಾರೆ ಎಂದರು.
ನನ್ನ ಇಲಾಖೆಯ ಅಧಿಕಾರಿಗಳು ನನ್ನ ಮಾತು ಕೇಳುತ್ತಿಲ್ಲ ಎನ್ನುತ್ತಿದ್ದಾರಲ್ಲ, ನಾಳೆ ಅಥವಾ ನಾಡಿದ್ದು ನಮ್ಮ ಅಧಿಕಾರಿಗಳು ನಮ್ಮ ರಾಜ್ಯದಲ್ಲಿ ಏನು ಸಾಧನೆ ಮಾಡಿದ್ದಾರೆ ಎನ್ನುವ ಪಟ್ಟಿ ಕೊಡುತ್ತೇನೆ. ಏನ್ ಮಾತನಾಡಬೇಕು ಎಂಬುವ ಕಲ್ಪನೆ ಇಲ್ಲದೆ ಅವರು ಮಾತನಾಡುತ್ತಿದ್ದಾರೆ.
ಕಾಂಗ್ರೆಸ್ನಲ್ಲಿ ನೀವು ಕಸದ ತೊಟ್ಟಿಯಲ್ಲಿರುವ ವಸ್ತು ಆದಂತೆ ಆಗಿದ್ದೀರಿ. ನೀವು ಕಾಂಗ್ರೆಸ್ನಲ್ಲಿ ಲೆಕ್ಕದಲ್ಲಿಯೂ ಇಲ್ಲ, ಬುಕ್ನಲ್ಲಿಯೂ ಇಲ್ಲ, ನಿಮಗೆ ಕಾಂಗ್ರೆಸ್ ಪಕ್ಷದಲ್ಲಿ ಇಷ್ಟೊಂದು ಅಪಮಾನ ಇರಬೇಕಾದರೆ ವಿರೋಧ ಪಕ್ಷದ ನಾಯಕರಾಗಿ ಇರುವುದು ಸರಿಯಲ್ಲ, ಹಾಗಾಗಿ ವಿರೋಧ ಪಕ್ಷದ ನಾಯಕ ಸ್ಥಾನದಿಂದ ನೀವು ರಾಜೀನಾಮೆ ನೀಡಿ ಎಂದು ಆಗ್ರಹಿಸುತ್ತೇನೆ ಎಂದರು.
ಇದನ್ನೂ ಓದಿ:ರಮೇಶ್ ಜಾರಕಿಹೊಳಿಗೆ ಕೊರೊನಾ ಬಂದಿದೆ: ಸಚಿವ ಭೈರತಿ ಬಸವರಾಜ