ಶಿವಮೊಗ್ಗ:ಮೆಣಸಿನಕಾಳನ್ನು ಬಿಡಿಸಲು ಹೋಗಿದ್ದ ವ್ಯಕ್ತಿಯೋರ್ವ ವಿದ್ಯುತ್ ತಂತಿ ತಗುಲಿ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಸಾಗರದ ಉಪ್ಪಳ್ಳಿ ಮಡಸೂರು ಗ್ರಾಮದಲ್ಲಿ ನಡೆದಿದೆ.
ಸಾಗರ ತಾಲೂಕು ಉಪ್ಪಳ್ಳಿ ಮಡಸೂರು ಗ್ರಾಮದ ಕೆ ಬಿ ಶ್ರೀನಿವಾಸ್ ಎಂಬುವರ ತೋಟದಲ್ಲಿ ಕೆಲಸ ಮಾಡಿ ಕೊಂಡಿದ್ದ ರಾಮಪ್ಪ (65) ಅಲ್ಯೂಮಿನಿಯಂ ಏಣಿ ಬಳಸಿ ಕಾಳು ಮೆಣಸು ಕಟ್ ಮಾಡುವಾಗ, ತೋಟದಲ್ಲಿನ ವಿದ್ಯುತ್ ತಂತಿ ತಗುಲಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತ ರಾಮಪ್ಪ ಸಿದ್ದಾಪುರದ ಶಿರಳಗಿ ಗ್ರಾಮದವರು ಎಂದು ತಿಳಿದು ಬಂದಿದೆ. ಸ್ಥಳಕ್ಕೆ ಸಾಗರ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.