ಶಿವಮೊಗ್ಗ: ಅನೇಕ ವರ್ಷಗಳಿಂದ ಎಲ್ಲಾ ಸೌಲಭ್ಯಗಳಿಂದ ವಂಚಿತರಾಗಿದ್ದ ಮರಾಠ ಸಮುದಾಯಕ್ಕೆ ಅಭಿವೃದ್ಧಿ ನಿಗಮ ರಚನೆ ಮಾಡಲು ಸಿಎಂ ಆದೇಶಿಸಿದ್ದಾರೆ. ಈ ಸಂಬಂಧ ಮುಖ್ಯಮಂತ್ರಿಗಳಿಗೆ ಮರಾಠ ಸಮುದಾಯದ ಮುಖಂಡ ರಾಮ್ ರಾವ್ ಅಭಿನಂದನೆ ಸಲ್ಲಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಾವು ಕನ್ನಡಿಗರೇ. ಶತ ಶತಮಾನಗಳಿಂದ ನಮ್ಮ ವಂಶಸ್ಥರು ಇದೇ ಕನ್ನಡ ನಾಡಿನಲ್ಲಿ ಹುಟ್ಟಿ ಬೆಳೆದಿದ್ದಾರೆ. ಆದರೆ ಕೇಲವು ಕನ್ನಡಪರ ಸಂಘಟನೆಗಳು, ಮರಾಠ ಅಭಿವೃದ್ಧಿ ನಿಗಮ ರಚನೆಯ ವಿರುದ್ಧ ಪ್ರತಿಭಟನೆ ಮಾಡುತ್ತಿವೆ. ಇದರಿಂದ ಕನ್ನಡಿಗರಾದ ನಮಗೆ ನೋವಾಗಿದೆ. ಯಾರೋ ನಾಲ್ಕು ಜನ ಮಾಡುವ ಗಡಿ ಸಮಸ್ಯೆಗಳನ್ನು ನೆಪವಾಗಿಟ್ಟುಕೊಂಡು ಇಲ್ಲಿ ವಾಸವಾಗಿರುವ ಮರಾಠ ಸಮುದಾಯದ ಕನ್ನಡಿಗರಿಗೆ ನೀಡಿರುವ ಅಭಿವೃದ್ಧಿ ನಿಗಮವನ್ನು ವಿರೋಧಿಸುತ್ತಿರುವವರ ಮಾತಿಗೆ ಯಾರೂ ಮಾನ್ಯತೆ ನೀಡಬಾರದು ಎಂದು ಆಗ್ರಹಿಸಿದರು.
ವಾಟಾಳ್ ನಾಗರಾಜ್ ಕರೆ ನೀಡಿರುವ ಬಂದ್ ನಾವು ವಿರೋಧಿಸುತ್ತೇವೆ. ಮುಖ್ಯಮಂತ್ರಿಗಳು ಸಮಾಜದ ಸ್ಥಿತಿಗತಿಗಳನ್ನು ನೋಡಿಯೇ ಅಭಿವೃದ್ಧಿ ನಿಗಮ ರಚನೆಗೆ ಆದೇಶ ಮಾಡಿದ್ದಾರೆ ಹೊರತು ರಾಜಕೀಯ ಲಾಭಕ್ಕಾಗಿ ಅಲ್ಲ ಎಂದರು.