ಶಿವಮೊಗ್ಗ: ಜಿಲ್ಲೆಯಲ್ಲಿ ಮತ್ತೆ ಚಾಕು ಇರಿತ ಪ್ರಕರಣ ಬೆಳಕಿಗೆ ಬಂದಿದೆ. ಬರ್ತ್ಡೇ ಪಾರ್ಟಿ ವೇಳೆ ರೌಡಿಶೀಟರ್ ತನ್ನ ಸ್ನೇಹಿತನಿಗೆ ಚಾಕು ಇರಿದಿರುವ ಪ್ರಕರಣ ಸೋಮವಾರ ರಾತ್ರಿ ನಡೆದಿದೆ.
ನಿನ್ನೆ ಇಲಿಯಾಸ್ ನಗರದಲ್ಲಿ ಯುವಕನ ಬರ್ತ್ಡೇ ಪಾರ್ಟಿ ನಡೆಯುತ್ತಿತ್ತು. ಈ ಪಾರ್ಟಿಯಲ್ಲಿ ಚನ್ನಗಿರಿಯಲ್ಲಿ ನೆಲೆಸಿರುವ ಮೊಹಮ್ಮದ್ ಮುಸೇಬ್ ಬಂದಿದ್ದಾನೆ. ಈ ವೇಳೆ ಸೈಯದ್ ರಜಾಕ್ ಎಂಬಾತ ಮುಸೇಬ್ ಮೇಲೆ ಚಾಕುವಿನಿಂದ ದಾಳಿ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ಚಾಕು ದಾಳಿಯಾದ ಪರಿಣಾಮ ಮುಸೇಬ್ನ ಎದೆ ಹಾಗೂ ಹೊಟ್ಟೆ ಭಾಗಕ್ಕೆ ಗಾಯವಾಗಿದೆ. ತಕ್ಷಣ ಮುಸೇಬ್ನನ್ನು ಸ್ನೇಹಿತರು ನಗರದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದ್ದು, ಮುಸೇಬ್ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮುಸೇಬ್ ಹಾಗೂ ರಜಾಕ್ ಇಬ್ಬರಿಗೂ ಹಳೇ ದ್ವೇಷವಿದ್ದು, ಹಲವು ಭಾರಿ ಗಲಾಟೆ ಮಾಡಿಕೊಂಡಿದ್ದರು. ಹಳೇ ದ್ವೇಷದಿಂದಲೇ ಚಾಕುವಿನಿಂದ ಇರಿದಿದ್ದಾರೆ ಎಂದು ಮುಸೇಬ್ ದೊಡ್ಡಪೇಟೆ ಪೊಲೀಸರಿಗೆ ದೂರು ನೀಡಿದ್ದಾರೆ. ಇಬ್ಬರು ಸಹ ರೌಡಿಶೀಟರ್ಗಳಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಓದಿ: ಪುಷ್ಪಾ ಪಟದಾರಿ ಆತ್ಮಹತ್ಯೆ ಪ್ರಕರಣ: ಶವಕ್ಕಾಗಿ ಎರಡು ಕುಟುಂಬಗಳ ನಡುವೆ ಪೈಪೋಟಿ