ಶಿವಮೊಗ್ಗ: ಬೆಳಗಾವಿಯ ಪೀರನವಾಡಿಯಲ್ಲಿ ದೇಶಭಕ್ತ ಸಂಗೊಳ್ಳಿ ರಾಯಣ್ಣನಿಗೆ ಅವಮಾನ ಮಾಡಿದ ಎಂಇಎಸ್ ಕೃತ್ಯವನ್ನು ಖಂಡಿಸಿ ಸಾಗರದಲ್ಲಿ ಮಲೆನಾಡು ಕರ್ನಾಟಕ ರಕ್ಷಣಾ ವೇದಿಕೆಯಿಂದ ಪ್ರತಿಭಟನೆ ನಡೆಸಲಾಯಿತು.
ಪೀರನವಾಡಿಯಲ್ಲಿ ಸಂಗೊಳ್ಳಿ ರಾಯಣ್ಣನ ಪುತ್ಥಳಿ ಸ್ಥಾಪನೆ ಮಾಡುವ ಕುರಿತು ಎಂಇಎಸ್ ವಿರೋಧ ವ್ಯಕ್ತಪಡಿಸಿದೆ, ಇದು ಖಂಡನೀಯ. ನಮಗೆ ಸಂಗೊಳ್ಳಿ ರಾಯಣ್ಣ ಹಾಗೂ ಶಿವಾಜಿ ಇಬ್ಬರೂ ಒಂದೇ. ಆದರೆ ನಮ್ಮ ನೆಲದಲ್ಲಿ ರಾಯಣ್ಣನಿಗೆ ಅಪಮಾನ ಮಾಡುವುದು ಕನ್ನಡಿಗರಾದ ನಾವು ಸಹಿಸಲ್ಲ. ಮುಂದಿನ ದಿನಗಳಲ್ಲಿ ಇಲ್ಲಿನ ಸಮಸ್ಯೆ ಬಗೆಹರಿಸುವ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ ಅವರು ಹೇಳಿದರೂ ಕೂಡ ಅಲ್ಲಿ ವಿನಾ ಕಾರಣ ಗಲಭೆ ಉಂಟಾಗುವಂತೆ ಮಾಡಲಾಗಿದೆ.
ಹಾಗಾಗಿ ರಾಯಣ್ಣನಿಗೆ ಅಪಮಾನ ಮಾಡಿದ ಎಂಇಎಸ್ ಕಾರ್ಯಕರ್ತರಿಗೆ ರಾಜ್ಯ ಸರ್ಕಾರ ತಕ್ಕ ಪಾಠ ಕಲಿಸಬೇಕಿದೆ ಎಂದು ಆಗ್ರಹಿಸಿ ಮಲೆನಾಡು ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಸಾಗರದ ಉಪ ವಿಭಾಗಧಿಕಾರಿ ಮೂಲಕ ಸಿಎಂಗೆ ಮನವಿ ಸಲ್ಲಿಸಿದರು.