ಶಿವಮೊಗ್ಗ: ಆಧುನಿಕತೆಯ ಭರಾಟೆಯಲ್ಲಿ ಪುರಾತನ ಕಲೆ, ಸಂಸ್ಕೃತಿ ಹಾಗೂ ಬಳಕೆಯ ವಸ್ತುಗಳು ನಮ್ಮ ಸ್ಮೃತಿಪಟಲದಿಂದ ಕಾಣೆಯಾಗುತ್ತಿವೆ. ಅಲ್ಲದೇ ಇಂದಿನ ಯುವಪೀಳಿಗೆಯು ಗತಕಾಲದ ಕಲೆಯನ್ನೇ ಮರೆತು ಬಿಡುತ್ತಿವೆ.
ಮಲೆನಾಡ ಮೇಳದಲ್ಲಿ ಎಂಬಿಎ ವಿದ್ಯಾರ್ಥಿಗಳಿಗೆ ಗ್ರಾಮೀಣ ಭಾಗದ ಗುಡಿ ಕೈಗಾರಿಕೆಗಳಿಂದ ಹೇಗೆ ವ್ಯಾಪಾರ ವಹಿವಾಟು ಮಾಡಬೇಕೆಂದು ತಿಳಿಸುವ ನಿಟ್ಟಿನಲ್ಲಿ ಸ್ಥಳೀಯ ಗ್ರಾಮೀಣ ಕೈಗಾರಿಕೆ ಹಾಗೂ ಗ್ರಾಮೀಣ ಭಾಗದ ಉದ್ಯಮಿಗಳನ್ನು ಪರಿಚಯಿಸುವ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಕಾಲೇಜಿನ ಕ್ಯಾಂಪಸ್ನಲ್ಲಿ ಒಂದೆಡೆ ಮಲೆನಾಡಿನ ಪುರಾತನ ಕಾಲದಿಂದಲೂ ಕೃಷಿಗೆ ಬಳಸಿಕೊಂಡು ಬರುತ್ತಿದ್ದ ಕೃಷಿ ಉಪಕರಣಗಳು, ಅವುಗಳ ಬಳಕೆ, ಅವುಗಳ ಪರಿಚಯವನ್ನು ಮಾಡಲಾಗಿತ್ತು. ಆಯಾ ವಸ್ತುಗಳ ಮೇಲೆ ಅವುಗಳ ಹೆಸರನ್ನು ಹಾಕಿ ಪ್ರದರ್ಶನಕ್ಕಿಡಲಾಗಿತ್ತು. ಗುದ್ದಲಿ, ಪಿಕಾಸಿ, ಹಾರೆ ಸೇರಿದಂತೆ ಅಡಿಕೆ ಕೊಯ್ಯುವ ವಸ್ತುಗಳನ್ನು ಹಾಗೂ ಮಲೆನಾಡಿನ ಮಳೆಗೆ ಬಳಸುವ ಕಂಬಳಿಯನ್ನು ಸಹ ಪ್ರದರ್ಶನಕ್ಕೆ ಇಡಲಾಗಿತ್ತು.
![ಪುರಾತನ ಕಾಲದ ಪಾತ್ರೆಗಳು](https://etvbharatimages.akamaized.net/etvbharat/prod-images/kn-smg-03-jncc-malnaduhabba-script-pkg-7204213_29062022184411_2906f_1656508451_52.jpg)
ದಸರಾ ಸಂದರ್ಭದಲ್ಲಿ ಪ್ರದರ್ಶನಕ್ಕಿಡುವ ಗೊಂಬೆಗಳನ್ನು ಅಚ್ಚುಕಟ್ಟಾಗಿ ಜೋಡಿಸಲಾಗಿತ್ತು. ಇದರಲ್ಲಿ ಮೈಸೂರು ಅರಮನೆ, ದಸರಾದಲ್ಲಿನ ಮೆರವಣಿಗೆ ಗೊಂಬೆಗಳು ಸೇರಿದಂತೆ ಮದುವೆ ಸೇರಿದಂತೆ ವಿವಿಧ ರೀತಿಯ ಗೊಂಬೆಗಳನ್ನು ಪರಿಚಯಿಸಲಾಗಿತ್ತು. ಇದೆಲ್ಲಾ ಮಲೆನಾಡಿನ ಸಂಸ್ಕೃತಿಯನ್ನು ಪರಿಚಯಿಸುವುದರ ಒಂದು ಭಾಗವಾದ್ರೆ, ಇನ್ನೊಂದು ಭಾಗವಾಗಿ ಎಂಬಿಎ ವಿದ್ಯಾರ್ಥಿಗಳಿಗೆ ಮುಂದೆ ಅನುಕೂಲವಾಗುವಂತೆ ವ್ಯಾಪಾರದ ಮಳಿಗೆಗಳನ್ನು ಹಾಕಲಾಗಿತ್ತು.
![ಮಕ್ಕಳ ಗೊಂಬೆಗಳು](https://etvbharatimages.akamaized.net/etvbharat/prod-images/kn-smg-03-jncc-malnaduhabba-script-pkg-7204213_29062022184411_2906f_1656508451_104.jpg)
ವಿವಿಧ ರೀತಿಯ ಮಳಿಗೆ: ಮಳಿಗೆಯಲ್ಲೂ ಸಹ ದೇಶೀಯತೆಯನ್ನು ಮೆರೆಯಲಾಗಿತ್ತು. ಇಲ್ಲಿ ಹಣ್ಣು, ಕೈಮಗ್ಗದ ಬಟ್ಟೆ, ಒಣ ಕೊಬ್ಬರಿ ಸೇರಿದಂತೆ ವಿವಿಧ ರೀತಿಯ ಮಳಿಗೆಗಳನ್ನು ಹಾಕಲಾಗಿತ್ತು. ಇವುಗಳನ್ನು ವಿದ್ಯಾರ್ಥಿಗಳೇ ಏರ್ಪಾಡು ಮಾಡಿದ್ದು ವಿಶೇಷವಾಗಿತ್ತು. ಈ ಸ್ಟಾಲ್ಗಳಲ್ಲಿ ವಿದ್ಯಾರ್ಥಿಗಳು ವ್ಯಾಪಾರ ಮಾಡಿ ಅನುಭವ ಪಡೆದುಕೊಂಡರು. ಎಲ್ಲಾ ವಿದ್ಯಾರ್ಥಿಗಳು ದೇಶಿ ದಿರಿಸಿನಲ್ಲೇ ಮಿಂಚಿದರು.
ಇದನ್ನೂ ಓದಿ: ಸುರಕ್ಷಿತ ಕ್ಷೇತ್ರ ಹುಡುಕುವ ಬದಲು ನಿವೃತ್ತಿ ಘೋಷಿಸಿ: ಸಿದ್ದರಾಮಯ್ಯಗೆ ಬಿಜೆಪಿ ಟಾಂಗ್