ಶಿವಮೊಗ್ಗ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾನಗರ ಪಾಲಿಕೆ ,ಜಿಲ್ಲಾ ಮಡಿವಾಳ ಸಮಿತಿ ಸಂಘ ಇವರ ಸಂಯುಕ್ತಾಶ್ರಯದಲ್ಲಿ ಮಡಿವಾಳ ಮಾಚಿದೇವ ಜಯಂತಿಯನ್ನು ನಗರದ ಕುವೆಂಪು ರಂಗಮಂದಿರದಲ್ಲಿ ನಡೆಸಲಾಯಿತು.
ಜಯಂತಿಯನ್ನು ಉದ್ಘಾಟಿಸಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಎಸ್ ರುದ್ರೇಗೌಡ, ಬಸವಣ್ಣನವರು ಇಡೀ ಸಮಾಜದಲ್ಲಿ ದೊಡ್ಡ ಕ್ರಾಂತಿಯನ್ನು ಮಾಡಿದರು, ಆ ಕ್ರಾಂತಿಯಲ್ಲಿ ನಮಗೆ ನಕ್ಷತ್ರವಾಗಿ ಕಂಡವರು ಮಾಚಿದೇವರು ಎಂದರು.
ಕಾಯಕವನ್ನು ಹೆಚ್ಚು ಪ್ರೀತಿ ಮಾಡುವ ಶರಣರ ಜಯಂತಿ ನಮಗೆ ಆದರ್ಶವಾಗಬೇಕು. ನಮ್ಮ ನಿಷ್ಠೆಯಲ್ಲಿ ಅದನ್ನು ಪಾಲಿಸಬೇಕು, ಪ್ರತಿಯೊಬ್ಬರೂ ಅಚ್ಚುಕಟ್ಟಾಗಿ ಅವರವರ ಕಾಯಕಗಳಲ್ಲಿ ನಿಷ್ಠೆಯನ್ನು ತೋರಿಸಿದಲ್ಲಿ ಅದಕ್ಕಿಂತ ದೊಡ್ಡ ಕೊಡುಗೆ ಸಮಾಜಕ್ಕೆ ಬೇರೊಂದಿಲ್ಲ ಎಂದು ಅಭಿಪ್ರಾಯಪಟ್ಟರು.