ETV Bharat / state

ನನ್ನ ಸೋಲಿಗಿಂತ ಹಿರಿಯರ ಸೋಲು ನೋವುಂಟು ಮಾಡಿದೆ: ಮಾಜಿ ಸಿಎಂ ಪುತ್ರನ ಬೇಸರ - kannada news

ಬಿಜೆಪಿಯನ್ನ ನೀವು ಆರಿಸಿ ತಂದಿದ್ದೀರಿ. ಅದರಲ್ಲಿ ತಪ್ಪಿಲ್ಲ. ಆದರೆ, ಅವರು ನಿಮ್ಮ ಒಲವಿಗೆ ಸ್ಪಂದಿಸದೇ ಇದ್ದರೆ ಏನು ಮಾಡುತ್ತೀರಿ ಎಂದು ಮಾಜಿ ಶಾಸಕ ಮಧು ಬಂಗಾರಪ್ಪ ಪ್ರಶ್ನಿಸಿದ್ದಾರೆ.

ಮಧು ಬಂಗಾರಪ್ಪ
author img

By

Published : Jun 22, 2019, 11:04 AM IST

ಶಿವಮೊಗ್ಗ: ಮೈತ್ರಿ​ ಪಕ್ಷದ ಕಾರ್ಯಕರ್ತರಿಗೆ ಹಾಗೂ ಜಿಲ್ಲೆಯ ಮತದಾರರಿಗೆ ಮಾಜಿ ಶಾಸಕ ಮಧು ಬಂಗಾರಪ್ಪ ಕೃತಜ್ಞತೆ ಸಲ್ಲಿಸಿದ್ದಾರೆ. ಇಲ್ಲಿನ ಲಗಾನ್​ ಕಲ್ಯಾಣ ಮಂದಿರದಲ್ಲಿ ಹಮ್ಮಿಕೊಂಡಿದ್ದ ಜೆಡಿಎಸ್ - ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಹಾಗೂ ಮತದಾರರ ಕೃತಜ್ಞತಾ ಸಭೆಯಲ್ಲಿ ಅಭಿನಂದನೆ ಸಲ್ಲಿಸಿದ್ದಾರೆ.

ಬಳಿಕ ಮಾತನಾಡಿದ ಮಧು ಬಂಗಾರಪ್ಪ, ಚುನಾವಣೆ ಸೋಲಿನಿಂದ ನಾನು ಕಂಗೆಟ್ಟಿಲ್ಲ. ಕಾರ್ಯಕರ್ತರ ಜೊತೆ ನಾನಿದ್ದೇನೆ. ರಾಜ್ಯದಲ್ಲಿ ಮೈತ್ರಿ ಸರ್ಕಾರ ಆಡಳಿತದಲ್ಲಿದೆ. ಯಾವ ಕೆಲಸ ಬೇಕಾದರೂ ಮಾಡಿಸಿಕೊಂಡು ಬರುತ್ತೇನೆ. ಆದರೆ, ನನಗೆ ನನ್ನ ಸೋಲಿಗಿಂತ ಮೈತ್ರಿ ಪಕ್ಷದ ಹಿರಿಯರ ಸೋಲು ನೋವುಂಟು ಮಾಡಿದೆ ಎಂದು ನೊಂದುಕೊಂಡರು.

ಕೃತಜ್ಞತಾ ಸಭೆಯಲ್ಲಿ ಮಾತನಾಡುತ್ತಿರುವ ಮಾಜಿ ಶಾಸಕ ಮಧು ಬಂಗಾರಪ್ಪ

ಮತದಾರರಲ್ಲಿ ನನ್ನದೊಂದು ಪ್ರಶ್ನೆ ಇದೆ. ಬಿಜೆಪಿ ಪಕ್ಷಕ್ಕೆ ಒಲವು ತೋರಿ ಮತ ನೀಡಿದ್ದೀರಿ. ಆದರೆ, ನಿಮ್ಮ ಒಲವಿಗೆ ಅವರು ಸ್ಪಂದಿಸದೇ ಇದ್ದರೆ ಏನು ಮಾಡುತ್ತೀರಿ ಎಂದು ಪ್ರಶ್ನಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಇತ್ತೀಚೆಗೆ ನಡೆದ ಸ್ಥಳೀಯ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಮೈತ್ರಿ ಪಕ್ಷದ ಅಭ್ಯರ್ಥಿಗಳಿಗೆ ಸನ್ಮಾನ ಮಾಡಲಾಯಿತು.

Intro:ಶಿವಮೊಗ್ಗ,
ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಿಗೆ ಹಾಗೂ ಜಿಲ್ಲೆಯ ಮತಧಾರರಿಗೆ ಕೃತಜ್ಞತೆ ಸಲ್ಲಿಸಿದ ಮಧು ಬಂಗಾರಪ್ಪ

ನಗರದ ಲಗಾನ್ ಕಲ್ಯಾಣ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿದ್ದ ಜೆಡಿಎಸ್ -ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಹಾಗೂ ಮತದಾರರಿಗೆ ಕೃತಜ್ಞತೆ ಸಭೆ ಯಲ್ಲಿ ಎಲ್ಲರಿಗೂ ಅಭಿನಂದನೆ ಸಲ್ಲಿಸಿ ಮಾತನಾಡಿದ ಮಧು ಬಂಗಾರಪ್ಪ

Body:ಚುನಾವಣೆ ಸೋಲಿನಿಂದ ನಾನು ಕಂಗಾಲ್ ಆಗಿಲ್ಲ. ಕಾರ್ಯಕರ್ತರ ಜೊತೆ ನಾನಿದ್ದೇನೆ ರಾಜ್ಯದಲ್ಲಿ ಮೈತ್ರಿ ಸರ್ಕಾರ ಆಡಳಿತದಲ್ಲಿ ಇದೆ ಯಾವ ಕೆಲಸ ಬೇಕಾದರೂ ಮಾಡಿಸಿಕೊಂಡು ಬರುತ್ತೇನೆ ಎಂದರು.
ನನಗೆ ನನ್ನ ಸೋಲಿಗಿಂತ ಮೈತ್ರಿ ಪಕ್ಷದ ಹಿರಿಯರ ಸೋಲು ನೋವುಂಟು ಮಾಡಿದೆ ಎಂದರು.
ಮತದಾರರಲ್ಲಿ ನನ್ನದೊಂದು ಪ್ರಶ್ನೆ ಇದೆ ಬಿಜೆಪಿ ಪಕ್ಷಕ್ಕೆ ಒಲವು ತೋರಿ ಮತ ನೀಡಿದ್ದೀರಿ ಆದರೆ ನಿಮ್ಮ ಒಲವಿಗೆ ಅವರು ಸ್ಪಂದಿಸದೆ ಇದ್ದರೆ ಏನು ಮಾಡಿದ್ದೀರಿ ಎಂದು ಪ್ರಶ್ನಿಸಿದರು.
ಕಾರ್ಯಕ್ರಮ ದ ಕೊನೆಯಲ್ಲಿ ಇತ್ತೀಚೆಗೆ ನಡೆದ ಸ್ಥಳೀಯ ಚುನಾವಣೆಯಲ್ಲಿ ಗೆದ್ದ ಶಿರಾಳಕೊಪ್ಪ ಪಟ್ಟನ ಪಂಚಾಯತ ,ಹಾಗೂ ಶಿಕಾರಿಪುರ ದ ಪುರಸಭೆ ಯಲ್ಲಿ ಗೆಲುವು ಸಾಧಿಸಿದ ಮೈತ್ರಿ ಪಕ್ಷದ ಅಭ್ಯರ್ಥಿ ಗಳಿಗೆ ಸನ್ಮಾನ ಮಾಡಲಾಯಿತು.
ಭೀಮಾನಾಯ್ಕ ಎಸ್ ಶಿವಮೊಗ್ಗ

Conclusion:ಭೀಮಾನಾಯ್ಕ ಎಸ್ ಶಿವಮೊಗ್ಗ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.