ಶಿವಮೊಗ್ಗ : ವಿದೇಶಕ್ಕೆ ಹೋಗಬೇಕಾದ ಯುವಕ ಪ್ರಿಯತಮೆ ಸಿಗಲಿಲ್ಲವೆಂದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹೊಸನಗರ ತಾಲೂಕಿನ ಹಾಲುಗುಡ್ಡೆ ಗ್ರಾಮದಲ್ಲಿ ನಡೆದಿದೆ. ಹಾಲುಗುಡ್ಡೆಯ ನಿವಾಸಿ ರಮೇಶ್ ಎಂಬುವರ ಅವರ ಮಗ ಅವಿನಾಶ್ (27) ಎಂಬಾತ ಆತ್ಮಹತ್ಯೆ ಮಾಡಿ ಕೊಂಡ ಯುವಕ.
ಹಾಲುಗುಡ್ಡ ಗ್ರಾಮದ ಯುವತಿ ಹಾಗೂ ಅವಿನಾಶ ಕಳೆದ ಐದಾರು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ, ಕಳೆದ ಒಂದು ತಿಂಗಳ ಹಿಂದೆ ಯುವತಿಯು ಬೇರೆಯವನ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು.
ಇದರಿಂದ ಮನನೊಂದು ಅವಿನಾಶ್ ಭಾನುವಾರ ರಾತ್ರಿ ಯುವತಿಯೊಂದಿಗಿದ್ದ ಫೋಟೊವನ್ನು ಶೇರ್ ಮಾಡಿ, ತಮ್ಮದೇ ಪಂಪ್ ಹೌಸ್ನಲ್ಲಿ ಆತ್ಮ ಹತ್ಯೆಗೆ ಶರಣಾಗಿದ್ದಾನೆ.
ಅವಿನಾಶ್ ಈ ತಿಂಗಳ ಕೊನೆಯಲ್ಲಿ ಉದ್ಯೋಗಕ್ಕಾಗಿ ವಿದೇಶಕ್ಕೆ ತೆರಳಬೇಕಿತ್ತು. ಈ ಕುರಿತು ರಿಪ್ಪನಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣದ ದಾಖಲಾಗಿದೆ.
ಇದನ್ನೂ ಓದಿ: ಆರೋಪಿಯನ್ನು ಕರೆ ತರುತ್ತಿದ್ದಾಗ ಅಪಘಾತ; ನಾಲ್ವರು ಪೊಲೀಸರು ಸೇರಿ ಐವರು ಸಾವು