ಶಿವಮೊಗ್ಗ: ಲಾಕ್ಡೌನ್ನಿಂದಾಗಿ ಮುಚ್ಚಿದ್ದ ಮದ್ಯದಂಗಡಿಗಳು ಇಂದಿನಿಂದ ತಮ್ಮ ಸೇವೆಯನ್ನು ಪುನರಾರಂಭಿಸಿವೆ. ಜನರು ಅಂಗಡಿಗಳ ಮುಂದೆ ಸರದಿ ಸಾಲಿನಲ್ಲಿ ನಿಂತು ಮದ್ಯ ಖರೀದಿಸುತ್ತಿದ್ದರು.
ಜಿಲ್ಲೆಯಲ್ಲಿ 165 ಮದ್ಯದಂಗಡಿಗಳಿಗೆ ವ್ಯಾಪಾರ ಮಾಡಲು ಅವಕಾಶ ನೀಡಲಾಗಿದೆ. ಅಂಗಡಿ ಎದುರು ಬ್ಯಾರಿಕೇಡ್ ಹಾಕಲಾಗಿದ್ದು ಗ್ರಾಹಕರು ಅಂತರ ಕಾಯ್ದುಕೊಂಡು ಯಾವುದೇ ಗಲಾಟೆ ಮಾಡದೆ ಖರೀದಿಸಿ ಮನೆಗೆ ಹೋಗುತ್ತಿದ್ದರು.
ಸದ್ಯ ಒಬ್ಬ ವ್ಯಕ್ತಿ 2.3 ಲೀ. ಮದ್ಯ ಖರೀದಿಸಬಹುದಾಗಿದೆ. ಬೆಳಗ್ಗೆ 9 ರಿಂದ ಸಂಜೆ 7ರ ಗಂಟೆ ತನಕ ಮದ್ಯ ಮಾರಾಟಕ್ಕೆ ಅವಕಾಶವಿದೆ.