ETV Bharat / state

ಲಿಂಗಾಯತರ ಮತ ಸೆಳೆಯಲು ಬಿಎಸ್​​ವೈ ಪ್ಲಾನ್​​: ವೀರಶೈವ ಸಮಾಜದ ಸ್ನೇಹಮಿಲನ

ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಲಿಂಗಾಯತರ ಮತ ಸೆಳೆಯಲು ಬಿ.ಎಸ್.ಯಡಿಯೂರಪ್ಪ ಮನೆಯಲ್ಲಿ ಮಹತ್ವದ ಸಭೆ ನಡೆಸಲಾಗಿದೆ.

Lingayat leaders meeting at BSY house
ವೀರಶೈವ ಸಮಾಜದ ಸ್ನೇಹಮಿಲನ ಸಭೆ
author img

By

Published : Apr 25, 2023, 6:54 PM IST

Updated : Apr 25, 2023, 11:05 PM IST

ವೀರಶೈವ ಸಮಾಜದ ಸ್ನೇಹಮಿಲನ ಸಭೆಯಲ್ಲಿ ಮಾತನಾಡಿದ ಕೆ.ಎಸ್​ ಈಶ್ವರಪ್ಪ

ಶಿವಮೊಗ್ಗ: ವಿಧಾನಸಭಾ ಚುನಾವಣೆಯಲ್ಲಿ ಲಿಂಗಾಯತ ವಿಚಾರ ಸಾಕಷ್ಟು ಚರ್ಚೆಯಲ್ಲಿದೆ. ರಾಜಕೀಯ ಪಕ್ಷಗಳು ರಾಜ್ಯದ ದೊಡ್ಡ ಸಮಾಜವಾದ ಲಿಂಗಾಯತರನ್ನು ತಮ್ಮತ್ತ ಸೆಳೆಯಲು ಸಾಕಷ್ಟು ಪ್ರಯತ್ನ ಮಾಡುತ್ತಿವೆ. ಅದರಂತೆ ಸೋಮವಾರ ಬಿ.ಎಸ್.ಯಡಿಯೂರಪ್ಪ ಅವರು ತಮ್ಮ ನಿವಾಸದ ಬಳಿ ವೀರಶೈವ ಲಿಂಗಾಯತ ಮುಖಂಡರ ಸಭೆ ನಡೆಸಿದರು.

ಈಗಾಗಲೇ ರಾಜ್ಯದಲ್ಲಿ ಲಿಂಗಾಯತರ ಪ್ರಾಬಲ್ಯವನ್ನು ಬಿಜೆಪಿಯಲ್ಲೇ ಉಳಿಸಿ, ಬೆಳೆಸಿಕೊಂಡು ಹೋಗುವ ಟಾಸ್ಕ್ ಪೂರೈಸುತ್ತಿರುವ ಬಿ.ಎಸ್ ಯಡಿಯೂರಪ್ಪ ಶಿವಮೊಗ್ಗದಲ್ಲಿ ಲಿಂಗಾಯತ ಸಮಾಜದವರೊಂದಿಗೆ ಸ್ನೇಹಮಿಲನ ಕಾರ್ಯಕ್ರಮ ನಡೆಸಿದರು. ಅಸಮಾಧಾನಗೊಂಡಿರುವ ಲಿಂಗಾಯತರನ್ನು ಒಟ್ಟುಗೂಡಿಸುವ ಪ್ರಯತ್ನ ಮಾಡಿದ್ದಾರೆ. ಚುನಾವಣಾ ಪ್ರಚಾರಕ್ಕೂ ಮುನ್ನ ಲಿಂಗಾಯತ ಸಮುದಾಯದ ಮುಖಂಡರ ಜತೆ ಸಭೆ ನಡೆಸಿರುವ ಯಡಿಯೂರಪ್ಪ ಬಿಜೆಪಿ ಸರ್ಕಾರದಲ್ಲಿ‌ ಲಿಂಗಾಯತ ಸಮಾಜಕ್ಕೆ ಎಲ್ಲ ರೀತಿಯ ಸಹಕಾರ ನೀಡಲಾಗಿದೆ. ಈ ಬಾರಿ ಲಿಂಗಾಯತ ಮತಗಳು ಯಾವ ಕಡೆ ಹೋಗದಂತೆ ಕ್ರಮ ತೆಗೆದುಕೊಳ್ಳಬೇಕು ಎಂದು ಸೂಚನೆ ನೀಡಿದರು.

ವೀರಶೈವ ಸಮಾಜದ ಸ್ನೇಹಮಿಲನ ಸಭೆಯಲ್ಲಿ ಮಾತನಾಡಿದ ಬಿಎಸ್​

ಲಿಂಗಾಯತ ಸಮಾಜ ಒಗ್ಗೂಡಿಸಲು ಕರೆ: ಬಿಜೆಪಿ ಸೇರಿದಂತೆ ಕಾಂಗ್ರೆಸ್,‌ ಜೆಡಿಎಸ್ ಅಭ್ಯರ್ಥಿಗಳು ಲಿಂಗಾಯತ ಸಮುದಾಯಕ್ಕೆ ಸೇರಿದವರಾಗಿದ್ದು, ಮೂರು ಪಕ್ಷಗಳಿಗೆ ಮತಗಳು ಹಂಚಿ ಹೋಗದಂತೆ ಗೇಮ್ ಪ್ಲಾನ್​​​ಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಈ ಸಭೆಯಲ್ಲಿ ಯಡಿಯೂರಪ್ಪ, ಕೆ.ಎಸ್ ಈಶ್ವರಪ್ಪ ಸೇರಿದಂತೆ ಹಲವರು ಪಾಲ್ಗೊಂಡಿದ್ದರು. ಲಿಂಗಾಯತ ಸಮಾಜದ ಅಭ್ಯರ್ಥಿ ಎಸ್.ಎನ್. ಚನ್ನಬಸಪ್ಪರನ್ನು ಗೆಲ್ಲಿಸಲು ಹಾಗೂ ಲಿಂಗಾಯತ ಸಮಾಜವನ್ನು ಒಗ್ಗೂಡಿಸಲು, ಲಿಂಗಾಯತ ಮತ ವಿಭಜನೆಯಾಗದಂತೆ ನೋಡಿಕೊಳ್ಳಲು ಸಭೆಯಲ್ಲಿ ಕರೆ ನೀಡಲಾಯಿತು.

ಈ ವೇಳೆ‌ ಮಾತನಾಡಿದ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ "ಇದು ಮಾತನಾಡುವ ಸಮಯ ಅಲ್ಲ. ಚನ್ನಬಸಪ್ಪ ಅವರನ್ನು ಹೆಚ್ಚು ಅಂತರದಿಂದ ಗೆಲ್ಲಿಸಲು ಮನೆ ಮನೆಗೆ ಹೋಗಿ ಪ್ರಚಾರ ಮಾಡಿ ಎಂದು ಕರೆ ನೀಡಿದರು. ಲಿಂಗಾಯತರ ಮತಗಳ ಬಗ್ಗೆ ಸುಮ್ಮನೆ ಗೊಂದಲ ಮೂಡಿಸಲಾಗುತ್ತಿದೆ. ಈ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳುವ ಅವಶ್ಯಕತೆಯಿಲ್ಲ. ಯೋಗ್ಯ, ಪ್ರಾಮಾಣಿಕ ವ್ಯಕ್ತಿ ಗೆಲುವಿನ‌ ಬಗ್ಗೆ ಅನುಮಾನ‌ ಇಲ್ಲ. ಗೆಲುವಿನ ಅಂತರ ಹೆಚ್ಚಾಗಬೇಕು. 15 ದಿವಸ ಕೆಲಸ ಮಾಡಿದರೆ 5 ವರ್ಷ ನೆಮ್ಮದಿಯಿಂದ ಇರಬಹುದು. ಶಿವಮೊಗ್ಗದಲ್ಲಿ ಚೆನ್ನಬಸಪ್ಪ ಅಭ್ಯರ್ಥಿ ಅಲ್ಲ. ಯಡಿಯೂರಪ್ಪ ಅಭ್ಯರ್ಥಿ. ನೀವೇ ಅಭ್ಯರ್ಥಿ ಎಂದುಕೊಂಡು ಕೆಲಸ ಮಾಡಿ ಎಂದರು.

ಇದಕ್ಕೂ ಮುನ್ನ ಮಾತನಾಡಿದ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ "ಎಲ್ಲ ಸಮಾಜಗಳಿಗೂ ಕೂಡ ಬಿಜೆಪಿ ಪಕ್ಷ, ಸರ್ಕಾರ ಅನುಕೂಲ ಮಾಡಿಕೊಟ್ಟಿದೆ. ಪಿಎಫ್ಐ ಬ್ಯಾನ್ ಆದರೂ ಕಾಂಗ್ರೆಸ್ ಅದನ್ನು ಪ್ರಶ್ನೆ ಮಾಡುತ್ತದೆ. ದೇಶದ್ರೋಹ ಕೆಲಸ ಮಾಡುವ ಸಂಘಟನೆ ಇರಬೇಕಾ? ದೇಶದ್ರೋಹ ಕೆಲಸ ಮಾಡುವ ಸರ್ಕಾರ ಬರಬೇಕೋ? ಅಥವಾ ಧರ್ಮ, ಸಂಸ್ಕೃತಿ ಉಳಿಸುವ ಸರ್ಕಾರ ಬರಬೇಕೋ ಎಂಬುದನ್ನು ಮತದಾರರೇ ನಿರ್ಧರಿಸಬೇಕು ಎಂದರು.

ಶಿವಮೊಗ್ಗದಲ್ಲಿ 60 ಸಾವಿರ ಮತಗಳ ಅಂತರದಿಂದ ಗೆದ್ದೆ ಗೆಲ್ಲುತ್ತೇವೆ ಎಂಬ ವಿಶ್ವಾಸ ಇದೆ. ಒಬ್ಬೊಬ್ಬರು ಹತ್ತು, ಹತ್ತು ವೋಟು ಹಾಕಿಸುತ್ತೇವೆ ಎಂದು ಎಲ್ಲರೂ ಪಣ ತೊಡಬೇಕು. ಲಿಂಗಾಯತ ಸಮಾಜದ ಪರವಾಗಿ ನಮ್ಮ ಸರ್ಕಾರವಿದೆ ಎಂದು ಈಶ್ವರಪ್ಪ ಹೇಳಿದರು.

ವೀರಶೈವ ಸಮಾಜದ ಸ್ನೇಹಮಿಲನ ಕಾರ್ಯಕ್ರಮದಲ್ಲಿ ಮಾತನಾಡಿದ ಈಶ್ವರಪ್ಪ

ಯಾರೂ ಕೂಡ ನಮ್ಮನ್ನು ಒಡೆಯದಂತೆ ನೋಡಿಕೊಳ್ಳಬೇಕು. ಶಿವಮೊಗ್ಗದಲ್ಲಿ 50 ರಿಂದ 56,000 ಮುಸ್ಲಿಂ ವೋಟುಗಳಿವೆ ಎಂದು ಹೇಳುತ್ತಾರೆ. ನಮಗೆ ಅವರ ಒಂದೂ ವೋಟು ಬೇಡ! ಶಿವಮೊಗ್ಗದಲ್ಲಿ ಹರ್ಷ ಕೊಲೆ ಸಮಯದಲ್ಲಿ ಕಾಂಗ್ರೆಸ್ ಬಾಯಿ ಮುಚ್ಚಿಕೊಂಡಿತ್ತು. ನಾನು ಎಸ್​ಪಿ ಜೊತೆ ಮಾತನಾಡುವಾಗ ಒಮ್ಮೆ ಲವ್ ಜಿಹಾದ್ ಬಗ್ಗೆ ಪ್ರಸ್ತಾಪಿಸಿದ್ದೆ. ಲವ್ ಜಿಹಾದ್ ಪ್ರಕರಣಗಳಲ್ಲಿ ಮಹಿಳೆಯರು ದೂರು ನೀಡಲು ಹಿಂಜರಿಯುತ್ತಾರೆ ಎಂದು ಹೇಳಿದ್ದರು. ಅಂತಹ ಎಷ್ಟೋ ಪ್ರಕರಣಗಳು ದಾಖಲಾಗದೇ ಉಳಿಯುತ್ತವೆ. ನಮ್ಮ ಹೆಣ್ಣು ಮಕ್ಕಳಿಗೆ ತೊಂದರೆಯಾದಾಗ ಕಾಂಗ್ರೆಸ್ ನಾಯಕರು ಬರೋದಿಲ್ಲ. ಅವರು ಗಟ್ಟಿಯಾಗಿ ನಿಲ್ಲೋದಿಲ್ಲ. ಇಲ್ಲಿ ನಾವು ಯೋಚನೆ ಮಾಡಬೇಕಾಗಿರೋದು ಬರೀ ರಸ್ತೆ, ಚರಂಡಿ, ದೀಪ, ಕುಡಿಯುವ ನೀರಿನ ಬಗ್ಗೆ ಅಲ್ಲ. ನಮ್ಮ ವೈಯಕ್ತಿಕ ಬದುಕಿನ ಬಗ್ಗೆ. ನಮ್ಮ ಧರ್ಮದ ಬಗ್ಗೆ. ಈ ದೇಶದ ಉಳಿವಿನ ಬಗ್ಗೆ. ಇದನ್ನೇ ಬಸವೇಶ್ವರರು ಹೇಳಿದ್ದು ಎಂದು ಈಶ್ವರಪ್ಪ ಹೇಳಿದರು.

ಅಲ್ಲದೇ ಶಿವಮೊಗ್ಗದಲ್ಲಿ ಈ ಜಾತಿ ವ್ಯವಸ್ಥೆಗೆ ಮಾರುಹೋಗುತ್ತಾರೆ ಎಂಬ ನಂಬಿಕೆ ನನಗಿಲ್ಲ. ನೂರಕ್ಕೆ ನೂರು ನಮ್ಮ ಬಿಜೆಪಿ ಅಭ್ಯರ್ಥಿ ಚನ್ನಬಸಪ್ಪ ಗೆಲ್ಲುತ್ತಾರೆ ಎಂದು ಅವರು ಇದೇ ವೇಳೆ ವಿಶ್ವಾಸ ವ್ಯಕ್ತಪಡಿಸಿದರು.

ಇದನ್ನೂ ಓದಿ: ಶಿವಮೊಗ್ಗ ವಿಧಾನಸಭಾ ಚುನಾವಣೆ 2023: ಅಂತಿಮ ಕಣದಲ್ಲಿ 74 ಅಭ್ಯರ್ಥಿಗಳು

Last Updated : Apr 25, 2023, 11:05 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.