ಶಿವಮೊಗ್ಗ: ಡಿ.ಕೆ.ಶಿವಕುಮಾರ್ ರವರು, ರಾಜಕೀಯವಾಗಿ, ಕಾನೂತ್ಮಾಕವಾಗಿ ಹಾಗೂ ಸಾಮಾಜಿಕವಾಗಿ ಹೋರಾಟ ನಡೆಸುತ್ತೆನೆ ಎಂದು ಹೇಳಿ ಕೊಂಡಿದ್ದಾರೆ ಅವರಿಗೆ ಶುಭವಾಗಲಿ ಎಂದು ಹಾರೈಸುತ್ತೆನೆ ಎಂದು ಗ್ರಾಮೀಣಾಭಿವೃದ್ದಿ ಖಾತೆ ಸಚಿವ ಕೆ.ಎಸ್.ಈಶ್ವರಪ್ಪ ಶಿವಮೊಗ್ಗದಲ್ಲಿ ವ್ಯಂಗ್ಯವಾಡಿದರು.
ಡಿ.ಕೆ.ಶಿವಕುಮಾರ್ ರವರಿಗೆ ಇಡಿ ನೋಟಿಸ್ ನೀಡಿದ ನಂತ್ರ ಅವರು ಕೋರ್ಟ್ ಗೆ ಹೋದರು. ಕೋರ್ಟ್ ಗೆ ಹೋದ ಮೇಲೆ ಈ ವಿಚಾರಗಳ ಮೇಲೆ ಪ್ರಭಾವ ಬಿರುವ ಅವಕಾಶ ಕೇಂದ್ರ ಸರ್ಕಾರಕ್ಕಾಗಲಿ ಅಥವಾ ರಾಜ್ಯ ಸರ್ಕಾರಕ್ಕಾಗಲಿ ಇದೆಯಾ? ಎನ್ನುವ ಮೂಲಕ ಬಿಜೆಪಿ ಡಿ.ಕೆ.ಶಿವಕುಮಾರರನ್ನು ಪ್ರಕರಣದಲ್ಲಿ ಸಿಲುಕಿಸುತ್ತಿದೆ ಎಂಬ ಕಾಂಗ್ರೆಸ್ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.
ಆಕಸ್ಮಾತ್ ಇಡಿಯವರು ಮಾಡಿದ್ದು ತಪ್ಪು ಅಂತ ಆಗಿದಿದ್ರೆ ಕೋರ್ಟ್ ಇಡಿರವರಿಗೆ ಛಿಮಾರಿ ಹಾಕುತ್ತಿತ್ತು. ಆದರೆ, ಕೋರ್ಟ್ ಸ್ಪಷ್ಟವಾಗಿ ನೀವು ಮಾಡಿದ್ದು ತಪ್ಪು , ಹೀಗಾಗಿ ನೀಮಗೆ ನೀಡಿರುವ ನೋಟಿಸ್ ಗೆ ತಡೆಯಾಜ್ಞೆ ನೀಡಲು ಸಾಧ್ಯವಿಲ್ಲ ಎಂದು ತಿಳಿಸಿದೆ. ಇದರಲ್ಲೇ ಡಿ.ಕೆ.ಶಿವಕುಮಾರ್ ತಪ್ಪಿತಸ್ಥರು ಅನ್ನೋದು ಸ್ಪಷ್ಟವಾಗಿ ಕಾಣಿಸುತ್ತಿದೆ. ಇನ್ನೂ ಮುಂದೆ ನೋಡೋಣ ಏನಾಗುತ್ತದೆ ಎಂದರು.
ಇಡಿಯವರಿಗೆ ಅಪರೇಷನ್ ಕಮಲ ಕಾಣಿಸಲಿಲ್ವಾ ಎಂಬ ಕಾಂಗ್ರೆಸ್ ನವರ ಪ್ರಶ್ನೆಗೆ ಉತ್ತರಿಸಿದ ಈಶ್ವರಪ್ಪ, ಇಷ್ಟು ದಿನ ಅಧಿಕಾರ ನಡೆಸಿದ್ದು ನೀವೆ ಅಲ್ವಾ ನೀವೆ ಯಾಕೆ ಇದನ್ನು ಸಿಬಿಐ ಗೆ ನೀಡಲಿಲ್ಲ?. ಸಿಬಿಐ ತನಿಖೆಗೆ ನೀಡಿದ್ರೆ, ಕಾಂಗ್ರೆಸ್ ಹಾಗೂ ಜೆಡಿಎಸ್ ನವರ ಕಚ್ಚಾಟ ಬಹಿರಂಗವಾಗುತ್ತದೆ ಅಂತ ಇರಬೇಕು ಎಂದು ತಿರುಗೇಟು ನೀಡಿದರು. ಕಾಂಗ್ರೆಸ್ ನವರು ತಮ್ಮ ಕೈಯಲ್ಲಿ ಅಧಿಕಾರ ಇದ್ದಾಗ ಏನೂ ಮಾಡದೆ ಇದ್ದು, ಈಗ ಬಿಜೆಪಿಯವರಿಗೆ ಪ್ರಶ್ನೆ ಮಾಡುತ್ತಿದ್ದಾರೆ. ಇವರಿಗೆ ನೈತಿಕತೆ ಅವರಿಗೆ ಇಲ್ಲ ಎಂದರು.
ಇನ್ನೂ ಕೆಎಂಎಫ್ ಇಷ್ಟು ದಿನ ಗೌಡರ ಕುಟುಂಬದ ಸ್ವಂತ ಆಸ್ತಿ ಎಂಬಂತೆ ಆಗಿತ್ತು. ಪ್ರಜಾ ಪ್ರಭುತ್ವದಲ್ಲಿ ಯಾವುದೇ ಹುದ್ದೆ ಒಂದೇ ಕುಟುಂಬಕ್ಕೆ ಉಳಿಯೋದಿಲ್ಲ ಎಂಬುದು ತಿಳಿದು ಬಂದಿದೆ ಎಂದು ಕೆಎಂಎಫ್ ಸ್ಥಾನ ಬಿಜೆಪಿಗೆ ಲಭಿಸಿರುವುದರ ಬಗ್ಗೆ ಪ್ರತಿಕ್ರಿಯೆ ನೀಡಿದರು.