ETV Bharat / state

ಶಿವಮೊಗ್ಗದಲ್ಲಿ ಉರುಳಿಗೆ ಸಿಲುಕಿ 4 ವರ್ಷದ ಗಂಡು ಚಿರತೆ ಸಾವು - ಈಟಿವಿ ಭಾರತ್​ ಕನ್ನಡ ನ್ಯೂಸ್​

ಶಿವಮೊಗ್ಗ ಜಿಲ್ಲೆಯ ಆಗರದಹಳ್ಳಿ ಗ್ರಾಮದ ಹೊರಭಾಗದಲ್ಲಿ ದುರುಳರು ಹಾಕಿದ ಉರುಳಿಗೆ ಸಿಲುಕಿ ಚಿರತೆ ಮೃತಪಟ್ಟಿದೆ.

ಶಿವಮೊಗ್ಗದಲ್ಲಿ ಚಿರತೆ ಸಾವು
ಶಿವಮೊಗ್ಗದಲ್ಲಿ ಚಿರತೆ ಸಾವು
author img

By

Published : Aug 8, 2023, 7:40 PM IST

ಶಿವಮೊಗ್ಗ : ದುರುಳರು ಹಾಕಿದ ಉರುಳಿಗೆ ಸಿಲುಕಿ ಚಿರತೆ ಸಾವನ್ನಪ್ಪಿರುವ ಘಟನೆ ಭದ್ರಾವತಿ ತಾಲೂಕು ಆಗರದಹಳ್ಳಿ ಗ್ರಾಮದಲ್ಲಿ ನಡೆದಿದೆ. ಮಂಗಳವಾರ ಬೆಳಗ್ಗೆ ಜಮೀನಿಗೆ ಹೋದವರು ಉರುಳಿಗೆ ಚಿರತೆ ಬಿದ್ದಿರುವುದನ್ನು ಕಂಡು ಅರಣ್ಯಾಧಿಕಾರಿಗಳಿಗೆ ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ಬಂದ ಮಾವಿನಕಟ್ಟೆ ವಲಯದ ಡಿಆರ್​ಎಫ್​ಒ ಮಂಜುನಾಥ್ ಹಾಗೂ ಅವರ ತಂಡ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದಾರೆ.

ಗ್ರಾಮದ ಹೊರ ಭಾಗದಲ್ಲಿ ಅರಣ್ಯಾಧಿಕಾರಿಗಳು ಒತ್ತುವರಿ ತಡೆಯುವ ಸಲುವಾಗಿ ಕಂದಕಗಳನ್ನು ತೆಗೆದಿದ್ದಾರೆ. ಈ ಕಂದಕಕ್ಕೆ ಹೊಂದಿಕೊಂಡಂತೆ ದುರುಳರು ಉರುಳನ್ನು ಹಾಕಿದ ಪರಿಣಾಮ ಚಿರತೆಯೊಂದು ಬಲಿಯಾಗಿದೆ. ನಂತರ ಪಶು ವೈದ್ಯಾಧಿಕಾರಿಗಳನ್ನು ಕರೆಯಿಸಿ ಚಿರತೆಯ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಅರಣ್ಯ ಇಲಾಖೆಯ ನಿಯಮದಂತೆ ಮೃತ ಚಿರತೆಯ ಅಂತ್ಯಕ್ರಿಯೆ ಮಾಡಿ ಮುಗಿಸಿದ್ದಾರೆ.

ಇದು ಹಂದಿ ಬೇಟೆಗೆ ಹಾಕಿದ್ದ ಉರುಳು ಆಗಿರುವ ಸಾಧ್ಯತೆಗಳಿದ್ದು, ಯಾರು ಉರುಳು ಹಾಕಿದರು ಎಂಬ ಮಾಹಿತಿ ಇಲ್ಲ. ಈ ಕುರಿತು ತನಿಖೆ ನಡೆಸುತ್ತಿದ್ದೇವೆ ಎಂದು ಡಿಆರ್​ಎಫ್​ಒ ಮಂಜುನಾಥ್ ಕೆ ಎಸ್ ಅವರು ಈಟಿವಿ ಭಾರತ ಗೆ ದೂರವಾಣಿ ಮೂಲಕ ತಿಳಿಸಿದ್ದಾರೆ.

ಇದನ್ನೂ ಓದಿ : ಚಾಮರಾಜನಗರ: 9 ವರ್ಷದ ಬಾಲಕನ ಮೇಲೆ ಚಿರತೆ ದಾಳಿ

ಅರಣ್ಯ ಸಂರಕ್ಷಣಾ ಕಾಯ್ದೆ ಬಂದ ನಂತರ ಕಾಡು ಪ್ರಾಣಿಗಳ ಬೇಟೆ ಬಹುತೇಕ ನಿಂತಿದ್ದು, ಇದರಿಂದ ಕಾಡು ಪ್ರಾಣಿಗಳ ಸಂತತಿ ಹೆಚ್ಚಿದೆ. ಇದರಿಂದ ಕಾಡು ಪ್ರಾಣಿಗಳು ಗ್ರಾಮಗಳಲ್ಲಿ ಪ್ರವೇಶ ಪಡೆಯುತ್ತಿವೆ. ಮಂಗಳವಾರ ನಡೆದ ಘಟನೆಯ ಬಗ್ಗೆ ಅನೇಕ ಅನುಮಾನಗಳಿದ್ದು, ಉರುಳನ್ನು ಚಿರತೆಗಾಗಿಯೇ ಹಾಕಿದ್ದ ಅಥವಾ ಕಾಡು ಹಂದಿಗಾಗಿ ಹಾಕಿದ್ದ ಎಂಬ ಅನುಮಾನ ಗ್ರಾಮಸ್ಥರನ್ನು ಕಾಡುತ್ತಿದೆ. ಇದರಿಂದ ಅರಣ್ಯ ಇಲಾಖೆಯವರು ಸೂಕ್ತವಾಗಿ ತನಿಖೆ ನಡೆಸಿ, ಆರೋಪಿಗಳನ್ನು ಬಂಧಿಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಜಮೀನಿನಲ್ಲಿ ಹಾಕಿದ ಉರುಳಿಗೆ ಸಿಲುಕಿ ಚಿರತೆ ಸಾವು : ಕಾಡುಪ್ರಾಣಿಗಳ ಬೇಟೆಗಾಗಿ ಜಮೀನಿನಲ್ಲಿ ಹಾಕಲಾಗಿದ್ದ ಉರುಳಿಗೆ ಸಿಲುಕಿ ಚಿರತೆ ಸಾವನ್ನಪ್ಪಿರುವ ಘಟನೆ ಎಚ್ ಡಿ ಕೋಟೆ ತಾಲ್ಲೂಕಿನ ಹೆಗ್ಗಡಾಪುರ ಗ್ರಾಮದಲ್ಲಿ ಕಳೆದ ತಿಂಗಳು ಜುಲೈ 21 ರಂದು ಬೆಳಕಿಗೆ ಬಂದಿತ್ತು. ಗ್ರಾಮದ ದೇವನಾಯಕ ಎಂಬುವರ ಜಮೀನಿನಲ್ಲಿ ಘಟನೆ ನಡೆದಿದ್ದು, ಅರಣ್ಯಾಧಿಕಾರಿಗಳಾದ ಡಿಸಿಎಫ್ ಬಸವರಾಜು, ಎಸಿಎಫ್ ಲಕ್ಷ್ಮಿಕಾಂತ್, ಮೇಟಿಕುಪ್ಪೆ ಅರಣ್ಯಾಧಿಕಾರಿ ಹರ್ಷಿತ್ ಹಾಗೂ ಇತರೆ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.

ಚಿರತೆಯನ್ನು ಕಳೇಬರವನ್ನು ಪಶುವೈದ್ಯ ಮುಜೀದ್ ನೇತೃತ್ವದಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿತ್ತು. ಈ ಸಂಬಂಧ ಜಮೀನು ಮಾಲೀಕ ದೇವನಾಯಕ್ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ಇತ್ತೀಚೆಗೆ ರಾಜ್ಯದ ಹಲವು ಕಡೆ ಚಿರತೆಗಳು ಹೆಚ್ಚಾಗಿ ಕಾಣಿಸಿಕೊಂಡು ಜನರಲ್ಲಿ ಭಯ ಮೂಡಿಸಿವೆ. ಅಲ್ಲದೆ ಚಿರತೆ ದಾಳಿಯಿಂದ ಆನೇಕ ಮಂದಿ ಪ್ರಾಣವನ್ನು ಕಳೆದಕೊಂಡಿದ್ದಾರೆ. ಇನ್ನೊಂದೆಡೆ ಚಿರತೆಗಳು ಸಹಾ ಉರಳಿಗೆ ಹಾಗು ಇನ್ನೀತರ ಕಾರಣಗಳಿಂದ ಸಾವನ್ನಪ್ಪಿವೆ.

ಇದನ್ನೂ ಓದಿ : ಚಾಮರಾಜನಗರ: ಬಾಲಕನ ಮೇಲೆ ದಾಳಿ ಮಾಡಿದ್ದ ಚಿರತೆ ಕೊನೆಗೂ ಸೆರೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.