ETV Bharat / state

ಸಾಗರ: ಬೇಟೆಗಾರರ ಉರುಳಿಗೆ ಬಿದ್ದು ಚಿರತೆ ಸಾವು - ಅರಣ್ಯಾಧಿಕಾರಿಗಳು

ಬೇಟೆಗಾರರ ಉರುಳಿಗೆ ಸುಮಾರು 5 ವರ್ಷದ ಚಿರತೆಯೊಂದು ಬಲಿಯಾಗಿರುವ ಘಟನೆ ಸಾಗರ ತಾಲೂಕು ಕೋಣೆಹೂಸೂರು ಗ್ರಾಮದ ಅರಣ್ಯ ಪ್ರದೇಶದಲ್ಲಿ ನಡೆದಿದೆ.

Leopard died after being felled by hunters
ಬೇಟೆಗಾರರ ಉರುಳಿಗೆ ಬಿದ್ದ ಚಿರತೆ ಸಾವು
author img

By

Published : Dec 6, 2022, 7:13 PM IST

ಶಿವಮೊಗ್ಗ: ಬೇಟೆಗಾರರ ಉರುಳಿಗೆ ಚಿರತೆಯೊಂದು ಬಲಿಯಾಗಿರುವ ಘಟನೆ ಸಾಗರ ತಾಲೂಕು ಕೋಣೆ ಹೂಸೂರು ಗ್ರಾಮದ ಅರಣ್ಯ ಪ್ರದೇಶದಲ್ಲಿ ನಡೆದಿದೆ.

ಮೊಲಗಳಿಗೆ ಹಾಕಿದ ಉರುಳಿನಲ್ಲಿ ಸುಮಾರು 5 ವರ್ಷದ ಚಿರತೆ ಸಿಲುಕಿ ಕೊಂಡಿದೆ. ಉರುಳಿಗೆ ಸಿಲುಕಿಕೊಂಡು ಅದರಿಂದ ಹೊರ ಬರಲು ಆಗದೇ ಮರವನ್ನೇರಿದೆ. ಮರನ್ನೇರಿದರೂ ಸಹ ಚಿರತೆಗೆ ಉರುಳಿನಿಂದ ಹೊರ ಬರಲು ಆಗದೇ ಅಲ್ಲೆ ಒದ್ದಾಡುತ್ತಿದ್ದನ್ನು ಗಮನಿಸಿದ ಸ್ಥಳೀಯರು ಅರಣ್ಯಾಧಿಕಾರಿಗಳಿಗೆ ವಿಷಯ ತಿಳಿಸಿದ್ದಾರೆ. ಅರಣ್ಯಾಧಿಕಾರಿಗಳು ಆಗಮಿಸಿ ಉರುಳಿಂದ ಬಿಡಿಸುವಷ್ಟರಲ್ಲಿ ಚಿರತೆ ಸಾವನ್ನಪ್ಪಿದೆ.

ಸ್ಥಳಕ್ಕೆ ಸಾಗರ ಉಪ ವಿಭಾಗದ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ:ಶರಾವತಿ ಸಂತ್ರಸ್ತರ ಪರಿಸ್ಥಿತಿಗೆ ಕಾಂಗ್ರೆಸ್ ಕಾರಣ: ಶಾಸಕ ಹರತಾಳು ಹಾಲಪ್ಪ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.