ಶಿವಮೊಗ್ಗ: ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಶ್ರೀರಾಮ ಮಂದಿರ ನಿರ್ಮಾಣದ ನಿಧಿ ಸಮರ್ಪಣ ಅಭಿಯಾನ ದೇಶಾದ್ಯಂತ ಚಾಲನೆಗೊಂಡಿದೆ. ಈ ಹಿನ್ನೆಲೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪ ನಗರದ ಮಲೇಶ್ವರ ನಗರದಲ್ಲಿರುವ ಹಿರಿಯ ಸಂಘ ಪರಿವಾರದ ನಾಯಕರುಗಳ ಮನೆಗೆ ಭೇಟಿ ನೀಡಿ ಶ್ರೀರಾಮ ಮಂದಿರ ನಿರ್ಮಾಣಕ್ಕೆ ದೇಣಿಗೆ ಸ್ವೀಕರಿಸಿದರು.
ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಇಡೀ ದೇಶದಲ್ಲಿ ಇಂದಿನಿಂದ ರಾಮಮಂದಿರ ನಿರ್ಮಾಣದ ನಿಧಿ ಸಮರ್ಪಣ ಅಭಿಯಾನ ಆರಂಭವಾಗಿದೆ. ಹಾಗಾಗಿ ನಮ್ಮ ಕಾರ್ಯಕರ್ತರು ಪ್ರತಿ ಮನೆ ಮನೆಗೂ ಭೇಟಿ ನೀಡಿ ದೇಣಿಗೆ ಸ್ವೀಕರಿಸುತ್ತಿದ್ದಾರೆ ಎಂದರು.
ಈ ಸುದ್ದಿಯನ್ನೂ ಓದಿ: ಹುಬ್ಬಳ್ಳಿ ಚನ್ನಮ್ಮ ವೃತ್ತದ ಮೇಲು ರಸ್ತೆ, ಕಲಘಟಗಿ ಚತುಷ್ಪಥ ಹೆದ್ದಾರಿ ನಿರ್ಮಾಣಕ್ಕೆ ಶಿಲಾನ್ಯಾಸ
ದೇಶದ ಪ್ರತಿ ಮನೆಯಿಂದ ಜನರು ದೇಣಿಗೆ ನೀಡಬೇಕು ಎಂದು ಅಪೇಕ್ಷೆ ಮಾಡಿದ್ದರು. ಹಾಗಾಗಿ ಅವರ ಕೈಲಾದಷ್ಟು ದೇಣಿಗೆಯನ್ನು ನೀಡುತ್ತಿದ್ದಾರೆ ಎಂದರು. 490 ವರ್ಷಗಳಿಂದ ಗುಲಾಮಗಿರಿ ಸಂಕೇತದಲ್ಲಿ ನಾವಿದ್ದೆವು. ಆ ಗುಲಾಮಗಿರಿ ಸಂಕೇತವನ್ನು ಕಿತ್ತುಹಾಕಿ, ಇಂದು ದೇಶದ ಕೋಟಿ ಕೋಟಿ ಜನರ ತಪಸ್ಸು ಹಾಗೂ ಹೋರಾಟದಿಂದ ಅಯೋಧ್ಯೆಯಲ್ಲಿ ರಾಮಂದಿರ ನಿರ್ಮಾಣವಾಗುತ್ತಿದೆ ಎಂದರು.