ETV Bharat / state

ಸಂತೋಷ್ ಪಾಟೀಲ್​ನದ್ದು ಆತ್ಮಹತ್ಯೆಯೋ, ಕೊಲೆಯೋ ಅನುಮಾನ ಶುರುವಾಗಿದೆ : ಈಶ್ವರಪ್ಪ - Santosh Patil death

ಈ ಹಿಂದೆ ಕೆ ಜೆ ಜಾರ್ಜ್ ಅವರನ್ನು ಯಾಕೆ ಬಂಧಿಸಿಲ್ಲ. ನನ್ನ ಬಂಧನಕ್ಕೆ ಒತ್ತಾಯಿಸುತ್ತಿರುವುದು ಏಕೆ?. ರಾಹುಲ್  ಗಾಂಧಿ ಅಜ್ಜಿ (ಇಂದಿರಾ ಗಾಂಧಿ)ಗೆ ಬಿಜೆಪಿ  ಪಕ್ಷಕ್ಕೆ ನಷ್ಟ ಮಾಡಲು ಆಗಿಲ್ಲ. ಇನ್ನು ಮೊಮ್ಮಗನಿಂದ ಇದು ಸಾಧ್ಯವೇ ಎಂದು ಈಶ್ವರಪ್ಪ ಪ್ರಶ್ನೆ ಮಾಡಿದರು..

ಬಿಜೆಪಿ ಹಿರಿಯ ಶಾಸಕ ಕೆ.ಎಸ್.ಈಶ್ವರಪ್ಪ
ಬಿಜೆಪಿ ಹಿರಿಯ ಶಾಸಕ ಕೆ.ಎಸ್.ಈಶ್ವರಪ್ಪ
author img

By

Published : Apr 16, 2022, 4:30 PM IST

ಶಿವಮೊಗ್ಗ : ಗುತ್ತೆಗೆದಾರ ಸಂತೋಷ್ ಪಾಟೀಲ್​ನದ್ದು ಆತ್ಮಹತ್ಯೆಯೋ, ಕೊಲೆಯೋ ಅನುಮಾನ ಶುರುವಾಗಿದೆ. ಆದರೆ, ಪಕ್ಷಕ್ಕೆ ಇರಸುಮುರುಸು ಆಗಬಾರದು ಎನ್ನುವ ಹಿನ್ನೆಲೆಯಲ್ಲಿ ನಾನು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿರುವೆ ಎಂದು ಬಿಜೆಪಿ ಹಿರಿಯ ಶಾಸಕ ಕೆ ಎಸ್ ಈಶ್ವರಪ್ಪ ಹೇಳಿದರು. ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂತ್ರಿಗಳು, ಕಾರ್ಯಕರ್ತರು ನನಗೆ ಧೈರ್ಯ ತುಂಬುತ್ತಿದ್ದಾರೆ.

ನನ್ನ ವಿರುದ್ಧ ಷಡ್ಯಂತ್ರ ನಡೆದಿದೆ ಎನ್ನುವುದು ಎಲ್ಲರ ಅಭಿಪ್ರಾಯವಾಗಿದೆ. ನಾನು ಸಹ ನೋಟಿಸ್​ನಿಂದ ಹೆದರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದುಕೊಂಡಿದ್ದೆ. ಈಗ ಆತ್ಮಹತ್ಯೆಯೋ ಅಥವಾ ಕೊಲೆ ಎನ್ನುವುದು ಅನುಮಾನ ಶುರುವಾಗಿದೆ. ಈ ಕುರಿತು ಸಮಗ್ರ ತನಿಖೆ ಆಗಬೇಕಿದೆ ಹಾಗೂ ಸತ್ಯಾಸತ್ಯತೆ ಹೊರ ಬರಬೇಕಿದೆ ಎಂದರು.

ಸಂತೋಷ್ ಪಾಟೀಲ್​ನದ್ದು ಆತ್ಮಹತ್ಯೆಯೋ, ಕೊಲೆಯೋ ಅನುಮಾನ ಶುರುವಾಗಿದೆ: ಈಶ್ವರಪ್ಪ

ನನಗೂ ಸಂತೋಷ ಸಾವಿನ ಬಗ್ಗೆ ಸಿಂಪತಿ ಇದೆ. ಈ ಪ್ರಕರಣದಲ್ಲಿ ಸಂತೋಷ್​ನನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ ಎನ್ನುವ ಅನುಮಾನವೂ ಇದೆ. ಸತ್ಯ ಹೊರಗೆ ಬರಬೇಕು. ಇದರಲ್ಲಿ ಯಾರು ಭಾಗಿಯಾಗಿದ್ದಾರೆ ಎನ್ನುವುದು ಬಹಿರಂಗ ಆಗಬೇಕೀದೆ. ಇದರ ಹಿಂದೆ ದೊಡ್ಡ ಷಂಡ್ಯತ್ರ ಇದೆ. ಇದರ ಹಿಂದಿನ ರೂವಾರಿ ಯಾರು?. ಪಕ್ಷಾನೋ, ವ್ಯಕ್ತಿನೋ, ಸಂಸ್ಥೆನೋ ಎನ್ನುವುದು ಹೊರ ಬರಬೇಕಿದೆ. ಆವಾಗ ಅವರ ಆತ್ಮಕ್ಕೂ ಶಾಂತಿ ಸಿಗುತ್ತೆ. ತನಿಖೆ ನಡೆಡಿಯುತ್ತಿರುವ ಸಂದರ್ಭದಲ್ಲಿ ಈ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿ ವಕುಮಾರ್​ ಇದ್ದಾರಾ, ಇಲ್ಲವೋ ಎನ್ನುವುದನ್ನು ತನಿಖೆಯ ವರದಿ ಬಂದ ನಂತರ ಹೇಳುತ್ತೇನೆ ಎಂದರು.

ಮನಸಾಕ್ಷಿ ಇದ್ದರೆ, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್​, ಹೆಚ್.ಡಿ.ಕುಮಾರಸ್ವಾಮಿ ನನ್ನ ಬಂಧನ ಒತ್ತಾಯ ಮಾಡುತ್ತಿರಲಿಲ್ಲ. ನಾನು ತಪ್ಪು ಮಾಡಿದ್ದರೆ ನನಗೆ ಶಿಕ್ಷೆ ಆಗಲಿ. ನಾನು ನಿರ್ದೋಷಿ ಆಗಿ ಹೊರಗೆ ಬರುತ್ತೇನೆ. ಅವರು ಅವರ ಮನೆದೇವರು ನಂಬದಿದ್ದರೂ ಚಿಂತೆಯಿಲ್ಲ. ಕನಿಷ್ಠ ಮನಸಾಕ್ಷಿಯನ್ನಾದರೂ ಕೇಳಿಕೊಳ್ಳಲಿ.

ಈ ಹಿಂದೆ ಕೆ.ಜೆ.ಜಾರ್ಜ್ ಅವರನ್ನು ಯಾಕೆ ಬಂಧಿಸಿಲ್ಲ. ನನ್ನ ಬಂಧನಕ್ಕೆ ಒತ್ತಾಯಿಸುತ್ತಿರುವುದು ಏಕೆ ಎಂದು ಈಶ್ವರಪ್ಪ ಗರಂ ಆದರು. ಇದೇ ವೇಳೆ ರಾಹುಲ್ ಗಾಂಧಿ ಅಜ್ಜಿ (ಇಂದಿರಾ ಗಾಂಧಿ)ಗೆ ಬಿಜೆಪಿ ಪಕ್ಷಕ್ಕೆ ನಷ್ಟ ಮಾಡಲು ಆಗಿಲ್ಲ. ಇನ್ನು ಮೊಮ್ಮಗನಿಂದ ಇದು ಸಾಧ್ಯವೇ ಎಂದು ಈಶ್ವರಪ್ಪ ಪ್ರಶ್ನೆ ಮಾಡಿದರು. ಇತ್ತ, ಮೊಮ್ಮಗನ ಮದುವೆ ಇರುವ ಕಾರಣ ಬಿಜೆಪಿ ಕಾರ್ಯಕಾರಣಿಯಲ್ಲಿ ಭಾಗಿ ಆಗಲ್ಲ ಎಂದು ಸ್ಪಪ್ಟಪಡಿಸಿದರು.

ಇದನ್ನೂ ಓದಿ: ರಾಜಕಾರಣದಲ್ಲಿ ಯಾರು ಸತ್ಯವಂತರು?: ಜೆಡಿಎಸ್​​ ವರಿಷ್ಠ ಹೆಚ್.ಡಿ ದೇವೇಗೌಡ ಪ್ರಶ್ನೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.