ETV Bharat / state

ರಕ್ಷಿಸಲು ಬಂದಾತನಿಗೆ ಕಚ್ಚಿತು ಕಾರ್ಕೋಟಕ ಕಾಳಿಂಗ ಸರ್ಪ - ವಿಡಿಯೋ

ಕಾಳಿಂಗ ಸರ್ಪ ಹಿಡಿದು ಚೀಲಕ್ಕೆ ಹಾಕುವ ವೇಳೆ ಕೈಗೆ ಕಚ್ಚಿದ್ದು, ಅದೃಷ್ಟವಶಾತ್​ ಹಾವು ಹಿಡಿಯಲು ಬಂದಿದ್ದ ಶ್ರೀನಾಥ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

King cobra bites who came to rescues it in Thirthahalli
ರಕ್ಷಿಸಲು ಬಂದಾತನಿಗೆ ಕಚ್ಚಿದ ಕಾರ್ಕೋಟಕ ಕಾಳಿಂಗ ಸರ್ಪ
author img

By

Published : Aug 3, 2020, 10:22 PM IST

ಶಿವಮೊಗ್ಗ: ತನ್ನನ್ನು ರಕ್ಷಿಸಲು ಬಂದವನಿಗೆ ಕಾಳಿಂಗ ಸರ್ಪ ಕಚ್ಚಿರುವ ಘಟನೆ ತೀರ್ಥಹಳ್ಳಿಯ ಹುಂಚದಕಟ್ಟೆ ಮಠದಲ್ಲಿ ನಡೆದಿದೆ.‌

ಹುಂಚದಕಟ್ಟೆ ಮಠದ ಆನೆ ಕಟ್ಟುವ ಜಾಗದಲ್ಲಿ ಸುಮಾರು 5 ಅಡಿ‌ ಉದ್ದದ ಕಾಳಿಂಗ ಸರ್ಪ ಕಾಣಿಸಿ‌ಕೊಂಡಿತ್ತು. ಈ ವೇಳೆ ಹುಂಚದ ಶ್ರೀನಾಥ್ ಹಾವು ಹಿಡಿಯಲು ಹೋಗಿದ್ದಾರೆ. ಹಾವು ಹಿಡಿದು ಅದನ್ನು ಚೀಲಕ್ಕೆ ಹಾಕುವಾಗ ಅದು ಶ್ರೀನಾಥ್ ಅವರ ಕೈಗೆ ಕಚ್ಚಿದೆ. ತಕ್ಷಣವೇ ಅವರು ತೀರ್ಥಹಳ್ಳಿ ಜಯಚಾಮರಾಜೇಂದ್ರ ತಾಲೂಕು ಆಸ್ಪತ್ರೆಗೆ ದಾಖಲಾಗಿದ್ದಾರೆ.

ರಕ್ಷಿಸಲು ಬಂದಾತನಿಗೆ ಕಚ್ಚಿದ ಕಾರ್ಕೋಟಕ ಕಾಳಿಂಗ ಸರ್ಪ

ಹಾವು ಹಿಡಿಯುವಾಗ ಶ್ರೀನಾಥ್ ಕೈಗವಸು ಹಾಕಿದ್ದ ಕಾರಣ ಹೆಚ್ಚಿನ ಅನಾಹುತವಾಗಿಲ್ಲ. ಈ ವೇಳೆ ತೀರ್ಥಹಳ್ಳಿಯ ರಕ್ತನಿಧಿಯ ಗೆಳೆಯರಾದ ಕುರುವಳ್ಳಿ ನಾಗರಾಜ್, ವಿಕ್ರಮ್ ಶೆಟ್ಟಿ ಸೇರಿ ಶ್ರೀನಾಥ್​ಗೆ ಬೇಕಾಗಿದ್ದ ರಕ್ತ ನೀಡಿ ಸಹಾಯ ಮಾಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.