ETV Bharat / state

ಬೇರೆ ರಾಜ್ಯಗಳಿಗೆ ಹೋಲಿಸಿದ್ರೆ ಕರ್ನಾಟಕದ ಕೊರೊನಾ ಪರಿಸ್ಥಿತಿ ಸುಧಾರಿಸುತ್ತಿದೆ : ಸಚಿವ ಈಶ್ವರಪ್ಪ - A nationwide lockdown

ಉದ್ಯೋಗಕ್ಕೆ ಬರುವ ಕಾರ್ಮಿಕರಿಗೆ ಗ್ರಾಪಂ ವ್ಯಾಪ್ತಿಯಲ್ಲಿ ಉದ್ಯೋಗ ಕಲ್ಪಿಸಲಿದ್ದೇವೆ. ಜೊತೆಗೆ ಕೇಂದ್ರ ಕೂಲಿ ಹಣವನ್ನು 249 ರೂಪಾಯಿಯಿಂದ 275 ರೂಪಾಯಿಗೆ ಏರಿಕೆ ಮಾಡಿದೆ ಎಂದರು.

Karnataka's corona situation is improving compared to other states: Ishwarappa
ಬೇರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದ ಕೊರೊನಾ ಪರಿಸ್ಥಿತಿ ಸುಧಾರಿಸುತ್ತಿದೆ: ಈಶ್ವರಪ್ಪ
author img

By

Published : Apr 12, 2020, 5:19 PM IST

ಶಿವಮೊಗ್ಗ : ದೇಶದ ಬೇರೆ ರಾಜ್ಯಗಳಿಗೆ ಹೋಲಿಸಿದರೆ ಕೊರೊನಾ ಕುರಿತಂತೆ ಕರ್ನಾಟಕ‌ದ ಪರಿಸ್ಥಿತಿ ಬೇಗ ಸುಧಾರಿಸುತ್ತಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರ ನಿರೀಕ್ಷೆಗೆ ಮೀರಿ ಬಡವರಿಗೆ ಏನೇನು ನೀಡಬೇಕೋ ಅದನ್ನೆಲ್ಲ ತಲುಪಿಸುತ್ತಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ. ಎಸ್. ಈಶ್ವರಪ್ಪ ಹೇಳಿದರು.

ಬೇರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದ ಕೊರೊನಾ ಪರಿಸ್ಥಿತಿ ಸುಧಾರಿಸುತ್ತಿದೆ: ಈಶ್ವರಪ್ಪ

ನಗರದಲ್ಲಿ ಮಾತನಾಡಿದ ಅವರು, ಗ್ರಾಮೀಣ ಪ್ರದೇಶದ ಜನರು ಉದ್ಯೋಗ ಬೇಕು ಎಂದು ಕೇಳುವಂತಹ‌ ಸಂದರ್ಭ ಇದು. ಹಾಗಾಗಿ, ರಾಜ್ಯ ಸರ್ಕಾರ ನರೇಗಾ ಯೋಜನೆಯಡಿ ಬಡವರಿಗೆ ಹೆಚ್ಚು ಉದ್ಯೋಗ ಕೊಡಲಿದೆ. ಅದಕ್ಕಾಗಿಯೇ ವಿಶೇಷ ಯೋಜನೆ ತಯಾರು ಮಾಡಿದ್ದೇವೆ. ಉದ್ಯೋಗಕ್ಕೆ ಬರುವ ಕಾರ್ಮಿಕರಿಗೆ ಗ್ರಾಪಂ ವ್ಯಾಪ್ತಿಯಲ್ಲಿ ಉದ್ಯೋಗ ಕಲ್ಪಿಸಲಿದ್ದೇವೆ. ಜೊತೆಗೆ ಕೇಂದ್ರ ಕೂಲಿ ಹಣವನ್ನು 249 ರೂಪಾಯಿಯಿಂದ 275 ರೂಪಾಯಿಗೆ ಏರಿಕೆ ಮಾಡಿದೆ ಎಂದರು.

ಕೇಂದ್ರದಿಂದ ರಾಜ್ಯಕ್ಕೆ ಮೊನ್ನೆ ₹1870 ಕೋಟಿ ಬಿಡುಗಡೆ ಆಗಿದೆ. ಈ ಹಿಂದೆ ಕೂಲಿ ಮಾಡಿದ ಕಾರ್ಮಿಕರಿಗೆ ಹಣ ಕೊಡುವುದು ಬಾಕಿ ಇತ್ತು. ಅದಕ್ಕಾಗಿ, ಸುಮಾರು ₹870 ಕೋಟಿ ಬಾಕಿ ಹಣ ನೀಡಿದ್ದೇವೆ. ಸದ್ಯ ಉದ್ಯೋಗ ಮಾಡುವ ಕಾರ್ಮಿಕರಿಗೆ ನೀಡಲು ₹1 ಸಾವಿರ ಕೋಟಿ ಹಣ ಇದೆ ಎಂದರು. 15 ದಿನದೊಳಗಾಗಿ ಕೂಲಿ ನೀಡಲು ಕ್ರಮಕೈಗೊಳ್ಳಲಾಗಿದೆ. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಈ ಯೋಜನೆ ಜಾರಿಗೆ ತರಲು ತೀರ್ಮಾನಿಸಿದ್ದೇವೆ. ಕೊರೊನಾ ಸಮಸ್ಯೆಯಿರುವುದರಿಂದ ಜನರು ಒಟ್ಟೊಟ್ಟಿಗೆ ಸೇರದೆ ಐದು ಐದು ಮಂದಿಗೆ ನಿರ್ದಿಷ್ಟ ಕೆಲಸ ಹಂಚಿಕೆ ಮಾಡಲಾಗುವುದು. ಇಡೀ ರಾಜ್ಯದಲ್ಲಿ ನರೇಗಾ ಯೋಜನೆ ಜಾರಿಗೆ ತರಲು ಚಿಂತನೆ ನಡೆಸಿದ್ದೇವೆ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.