ಶಿವಮೊಗ್ಗ: ಸಮಾಜದಲ್ಲಿ ಇರುವ ಜಾತಿಯ ವಿಷ ಬೀಜ ಕಿತ್ತು ಹಾಕಬೇಕು. ಆಗ ಮಾತ್ರ ಬದಲಾವಣೆ ತರಲು ಸಾಧ್ಯವಾಗುತ್ತದೆ ಎಂದು ಹಿರಿಯ ರಾಜಕಾರಣಿ ಕಾಗೋಡು ತಿಮ್ಮಪ್ಪ ಹೇಳಿದರು. ನಗರದಲ್ಲಿ ನಡೆಯುತ್ತಿರುವ ಘಟನೆಗಳ ಕುರಿತು ಪ್ರತಿಕ್ರಿಯಿಸಿದ ಅವರು, ಚುನಾವಣೆಗಳು ಬರುತ್ತವೆ, ಹೋಗುತ್ತವೆ. ನಮ್ಮದು ಪ್ರಜಾತಂತ್ರ ವ್ಯವಸ್ಥೆ. ಇಂತಹ ಸುಂದರ ವ್ಯವಸ್ಥೆ ಪ್ರಪ್ರಂಚದಲ್ಲಿ ಎಲ್ಲೂ ಇಲ್ಲ ಎಂದರು.
ಕೇವಲ ಭಾಷಣದಿಂದ ಬದಲಾವಣೆ ಆಗಲ್ಲ. ಭಾಷಣದ ಸಂದೇಶ ಹೋಗುವ ತನಕ ಕೆಲಸ ಮಾಡಬೇಕಿದೆ. ಪ್ರಜಾಪ್ರಭುತ್ವದಲ್ಲಿ ವಿದ್ಯಾವಂತರು ಆಲೋಚನೆ ಮಾಡಬೇಕು. ಇಂದಿನ ಸಮಾಜದಲ್ಲಿ ಯಾರಾನ್ನಾದರೂ ಎತ್ತಿ ಕಟ್ಟುವುದು ಸುಲಭ. ಇದಕ್ಕೆ ವಿದ್ಯಾವಂತರಾಗುವುದು ಅವಶ್ಯಕವಾಗಿದೆ. ಇನ್ನು ಸಮಾಜದ ಬದಲಾವಣೆಗೆ ಪತ್ರಕರ್ತರು ಶ್ರಮಿಸಬೇಕು ಎಂದು ಹೇಳಿದರು.
ಇದನ್ನೂ ಓದಿ: ಮಹಾತ್ಮ ಗಾಂಧಿ ಕೊಂದವರು ನನ್ನನ್ನು ಬಿಡುತ್ತಾರಾ.. ಸಿದ್ದರಾಮಯ್ಯ ಪ್ರಶ್ನೆ