ETV Bharat / state

ಕೊರೊನಾ ನಿಯಂತ್ರಣಕ್ಕೆ ಸಚಿವ ಈಶ್ವರಪ್ಪ ಮಾಸ್ಟರ್​ ಪ್ಲಾನ್​....ಏನದು ?

ಆಯುಷ್ ಪೌಡರ್ ಹಾಗೂ ಚೂರ್ಣ ನೀಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿಗಳ‌ ಸಭಾಂಗಣದಲ್ಲಿ ನಡೆದ‌ ಸಭೆಯಲ್ಲಿ ಮಾತನಾಡಿದ‌‌ ಸಚಿವ ಈಶ್ವರಪ್ಪ ತಿಳಿಸಿದ್ದಾರೆ. ಇದರ ಮಾರುಕಟ್ಟೆ ದರ 350 ರೂ ಇದೆ. ಇದನ್ನು ಕಡಿಮೆ ದರದಲ್ಲಿ ಕೊಂಡು ಜನರಿಗೆ ನೀಡಲಾಗುತ್ತದೆ. ಇದನ್ನು ಕೊಳ್ಳುವವರಿದ್ದರೆ ಅವರಿಗೆ 100 ರೂ. ನಂತೆ ನೀಡುವ ಚಿಂತನೆ ಸಹ ಇದೆ ಎಂದು ಸಚಿವರು ತಿಳಿಸಿದ್ದಾರೆ.

K. S Eshwarappa
ಸಚಿವ ಈಶ್ವರಪ್ಪ
author img

By

Published : Jul 14, 2020, 12:25 PM IST

ಶಿವಮೊಗ್ಗ: ಸಚಿವ ಈಶ್ವರಪ್ಪ ತಮ್ಮ ಕ್ಷೇತ್ರದ ಜನರನ್ನು ಕೊರೊನಾದಿಂದ ಮುಕ್ತವಾಗಿಸಲು ಆಯುಷ್ ಇಲಾಖೆಯ ಪವರ್ ಬೂಸ್ಟರ್ ನೀಡಲು ಚಿಂತನೆ ನಡೆಸಿದ್ದಾರೆ.

ಜಿಲ್ಲಾಧಿಕಾರಿಗಳ‌ ಸಭಾಂಗಣದಲ್ಲಿ ನಡೆದ‌ ಸಭೆಯಲ್ಲಿ ಮಾತನಾಡಿದ‌‌ ಅವರು, ಆಯುಷ್ ಪೌಡರ್ ಹಾಗೂ ಚೂರ್ಣ ನೀಡಲಾಗುತ್ತಿದೆ. ಇದರ ಮಾರುಕಟ್ಟೆ ದರ 350 ರೂ ಇದೆ. ಇದನ್ನು ಕಡಿಮೆ ದರದಲ್ಲಿ ಕೊಂಡು ಜನರಿಗೆ ನೀಡಲಾಗುತ್ತದೆ. ಇದನ್ನು ಕೊಳ್ಳುವವರಿದ್ದರೆ ಅವರಿಗೆ 100 ರೂ. ನಂತೆ ನೀಡುವ ಚಿಂತನೆ ಸಹ ಇದೆ ಎಂದರು.

ಪ್ರತಿ ವಾರ್ಡ್​ನ ಕಾರ್ಪೋರೇಟರ್​ಗಳು ಈ ಬಗ್ಗೆ ಗಮನ ಹರಿಸಿ ಇದನ್ನು ಹಂಚಬೇಕು. ಇದರಿಂದ ಕ್ಷೇತ್ರದ ಜನ‌ ಕೊರೊನಾ ದಿಂದ ದೂರ ಉಳಿಯಲು ಆಂತರಿಕವಾಗಿ‌ ಶಕ್ತಿ ಬಂದಂತಾಗುತ್ತದೆ. ಕ್ಷೇತ್ರದ 4 ಲಕ್ಷ ಜನರಿಗೂ ನೀಡುವ ಯೋಚನೆ ಇದೆ. ಸದ್ಯ ಇದನ್ನು ಮೊದಲು 1 ಲಕ್ಷದಷ್ಟು ತಂದು ಹಂಚಲಾಗುವುದು.‌‌ ನಂತರ ಕಿಟ್ ಬಂದ ಹಾಗೆ ಹಂಚಲಾಗುತ್ತದೆ ಎಂದರು.

ಆಯುಷ್ ಆಯುರ್ವೇದ‌ ತೆಗೆದುಕೊಂಡು ಕೊರೊನಾ‌ ವಿರುದ್ದ ಹೋರಾಟ‌‌‌‌ ಮಾಡಬಹುದು. ಇದಕ್ಕೆ ಪಕ್ಷಾತೀತವಾಗಿ ಎಲ್ಲರೂ ಸಹಕಾರ‌ ನೀಡಬೇಕು. ಜೊತೆಗೆ ಸಂಘ ಸಂಸ್ಥೆಗಳ ಸಹಕಾರ ಅತ್ಯಗತ್ಯ ಎಂದು ಈಶ್ವರಪ್ಪ ಇದೇ ವೇಳೆ ವಿನಂತಿಸಿ‌ಕೊಂಡಿದ್ದಾರೆ.

ಈ ವೇಳೆ ಎಂಎಲ್​ಸಿ ಆರ್.‌ ಪ್ರಸನ್ನ ಕುಮಾರ್, ಆಯನೂರು ಮಂಜುನಾಥ್. ಮತ್ತೂರಿನ‌ ಪಟ್ಟಾಭಿರಾಮ್, ‌ಮೇಯರ್ ಸುವರ್ಣ ಶಂಕರ್‌ ಸೇರಿ‌ ಇತರರು ಹಾಜರಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.