ETV Bharat / state

ಹಿಂದೂಗಳು ಶಾಂತಿಯಿಂದ ಇರುವುದು ದೌರ್ಬಲ್ಯ‌ ಎಂದು ಭಾವಿಸಬಾರದು: ಕೆ. ಎಸ್ ಈಶ್ವರಪ್ಪ ವಾರ್ನಿಂಗ್​

ನಿನ್ನೆ ಸುಳ್ಯದಲ್ಲಿ ಬಿಜೆಪಿ ಕಾರ್ಯಕರ್ತರ ಕೊಲೆ ಖಂಡನೀಯವಾಗಿದೆ.‌ ರಾಜ್ಯದ ಸಿಎಂ ಹಾಗೂ ಗೃಹ ಮಂತ್ರಿಗಳು ಕೊಲೆಪಾತಕಿಗಳನ್ನು ಬಿಡೋದಿಲ್ಲ ಎಂದು ಹೇಳಿದ್ದಾರೆ ಎಂದು ಮಾಜಿ ಸಚಿವ ಕೆ. ಎಸ್ ಈಶ್ವರಪ್ಪ ತಿಳಿಸಿದ್ದಾರೆ.

ಕೆ. ಎಸ್ ಈಶ್ವರಪ್ಪ
ಕೆ. ಎಸ್ ಈಶ್ವರಪ್ಪ
author img

By

Published : Jul 27, 2022, 4:43 PM IST

ಶಿವಮೊಗ್ಗ: ಶಾಂತಿಯಿಂದ ಇರುವುದು ಹಿಂದೂಗಳ ದೌರ್ಬಲ್ಯ ಅಂತ ಮುಸ್ಲಿಂ ಗೂಂಡಾಗಳು ಭಾವಿಸಬಾರದು ಎಂದು ಮಾಜಿ ಸಚಿವ ಕೆ. ಎಸ್ ಈಶ್ವರಪ್ಪ ಎಚ್ಚರಿಕೆ‌ ನೀಡಿದ್ದಾರೆ.‌ ಶಿವಮೊಗ್ಗದಲ್ಲಿ ಮಾತನಾಡಿದ ಅವರು, ಯಾವುದೇ ತಪ್ಪು ಮಾಡದ ಬಿಜೆಪಿ ಕಾರ್ಯಕರ್ತರ ಮೇಲೆ ಮುಸ್ಲಿಂ ಗೂಂಡಾಗಳು ಹಲ್ಲೆ ನಡೆಸುತ್ತಿರುವುದು ಖಂಡನೀಯ ಎಂದರು.

ಮಾಜಿ ಸಚಿವ ಕೆ. ಎಸ್ ಈಶ್ವರಪ್ಪ ಅವರು ಮಾತನಾಡಿದರು

ನಿನ್ನೆ ಸುಳ್ಯದಲ್ಲಿ ಬಿಜೆಪಿ ಕಾರ್ಯಕರ್ತರ ಕೊಲೆ ಖಂಡನೀಯವಾಗಿದೆ.‌ ರಾಜ್ಯದ ಸಿಎಂ ಹಾಗೂ ಗೃಹ ಮಂತ್ರಿಗಳು ಕೊಲೆಪಾತಕಿಗಳನ್ನು ಬಿಡೋದಿಲ್ಲ ಎಂದು ಹೇಳಿದ್ದಾರೆ. ಸರ್ಕಾರ ಹಾಗೂ ಹಿಂದುತ್ವವಾದಿಗಳ ದೌರ್ಬಲ್ಯವಲ್ಲ. ಇದೇ ರೀತಿ ಮುಂದುವರಿದರೆ ಸಮಾಜದಲ್ಲಿ ಅಶಾಂತಿ ಉಂಟಾಗುತ್ತದೆ ಎಂದರು.

ಪ್ರವೀಣ್ ಅವರ ಕೊಲೆ ಕುರಿತು ಸಿಎಂ ಜೊತೆ ಮಾತನಾಡುತ್ತೇನೆ ಎಂದರು. ಕೊಲೆಗಡುಕರ ವಿರುದ್ದ ಕಠಿಣ ಕ್ರಮ ತೆಗೆದುಕೊಳ್ಳಬೇಕೆಂದು ಒತ್ತಾಯಿಸುತ್ತೇನೆ. ಕೊಲೆಮಾಡುವ ಮುಸ್ಲಿಂ ಗೂಂಡಾಗಳು ಇನ್ಮುಂದೆ ಎಚ್ಚರಿಕೆಯಿಂದ ಇರಬೇಕು ಎಂದು ಹೇಳಿದರು.

ಶಿವಮೊಗ್ಗದಲ್ಲಿ ಹರ್ಷನ ಕೊಲೆ ನಡೆದಾಗ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರನ್ನು ಒತ್ತಾಯ ಮಾಡಿದ್ದೆವು. ಅವರು ಕೊಲೆ ಪ್ರಕರಣವನ್ನು ಎನ್​ಐಎಗೆ ವಹಿಸಿದ್ದರು. ಅದರ ತನಿಖೆ ಇನ್ನೂ ನಡೆಯುತ್ತಿರುವಾಗಲೇ ಈಗ ಮತ್ತೂಂದು ಕೊಲೆ ನಡೆದಿದೆ. ಈಗ ಮುಸ್ಲಿಂ ಗೂಂಡಾಗಳು ನೀವು ಕಾನೂನು ಕ್ರಮ ಏನ್ ಬೇಕಾದರೂ ತೆಗೆದುಕೊಳ್ಳಿ, ನಾವು ಹೀಗೆ ಇರುತ್ತೇವೆ ಅಂತ ಕೊಲೆ ಮಾಡುತ್ತಲೇ ಇದ್ದಾರೆ. ಇಂತಹ ಮನೋಭಾವದಿಂದ ಅವರನ್ನು ಹೊರತರಬೇಕಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಾಂಗ್ರೆಸ್​ನದು ಭ್ರಷ್ಟಾಚಾರೋತ್ಸವ: ನಾಳೆ ದೊಡ್ಡಬಳ್ಳಾಪುರದಲ್ಲಿ ಸಿಎಂ ಬೊಮ್ಮಾಯಿ ನೇತೃತ್ವದ ಸರ್ಕಾರದ ಒಂದು ವರ್ಷದ ಸಾಧನೆಯ ಕುರಿತು ಜನೋತ್ಸವ ಸಮಾವೇಶ ನಡೆಸುತ್ತಿದ್ದೇವೆ. ಆದರೆ, ಇದನ್ನೇ ಕಾಂಗ್ರೆಸ್ ನವರು ಭ್ರಷ್ಟಾಚಾರೋತ್ಸವ ಎಂದು ಕರೆಯುತ್ತಿದ್ದಾರೆ. ನ್ಯಾಷನಲ್ ಹೆರಾಲ್ಡ್ ಪತ್ರಿಕೆಯಲ್ಲಿ ನಡೆದ ನೂರಾರು ಕೋಟಿ ಅವ್ಯವಹಾರದ ಕುರಿತು ತನಿಖೆಗೆ ನೋಟಿಸ್ ನೀಡಿದರೆ, ಕಾಂಗ್ರೆಸ್​​ನವರು ಪ್ರತಿಭಟನೆ ಹಾಗೂ ಗಲಾಟೆ ನಡೆಸುತ್ತಿದ್ದಾರೆ.‌

ಮೊದಲು ಕ್ಷೇಮೆ ಕೇಳಬೇಕು: ಕೆಪಿಸಿಸಿ ಅಧ್ಯಕ್ಷರ ಮನೆಯಲ್ಲಿ ಈಡಿ ದಾಳಿ ನಡೆಸಿದಾಗ ಸಿಕ್ಕ ಕೋಟಿ ಕೋಟಿ ಹಣದಿಂದ ಅವರು ತಿಹಾರ್ ಜೈಲಿಗೆ ಹೋಗಿಬಂದಿದ್ದಾರೆ. ನಾಳೆ ಮತ್ತೆ ವಿಚಾರಣೆಗೆ ಹೋಗಲಿದ್ದಾರೆ‌ ಎಂದರು. ನ್ಯಾಷನಲ್ ಹೆರಾಲ್ಡ್ ಹಾಗೂ ಶಿವಕುಮಾರ್ ಮನೆಯಲ್ಲಿ ಸಿಕ್ಕ ಹಣ ಭ್ರಷ್ಟಚಾರದ್ದು, ನಮಗೆ ಭ್ರಷ್ಟಾಚಾರಿಗಳು ಹೇಳುವವರೇ ಭ್ರಷ್ಟಾಚಾರಿಗಳು. ಇದರಿಂದ ಅವರು ಮೊದಲು ಕ್ಷೇಮೆ ಕೇಳಬೇಕು ಎಂದರು.

ರಾಜೀನಾಮೆ ಒಂದೇ ಪರಿಹಾರವಲ್ಲ: ಬಿಜೆಪಿ ಕಾರ್ಯಕರ್ತರ ಹತ್ಯೆ ಖಂಡಿಸಿ ಚಿಕ್ಕಮಗಳೂರು ಜಿಲ್ಲೆಯ ಬಿಜೆಪಿ ಕಾರ್ಯಕರ್ತರು ರಾಜೀನಾಮೆ ನೀಡಿದಕ್ಕೆ ಪ್ರತಿಕ್ರಿಯಿಸಿದ ಅವರು, ಸರ್ಕಾರ ಕೊಲೆ ಪಾತಕಿಗಳನ್ನು‌ ಬಿಡುವುದಿಲ್ಲ. ಆದರೆ, ರಾಜೀನಾಮೆ ನೀಡಿದರೆ ಎಲ್ಲ ಸರಿ ಹೋಗಲ್ಲ. ಈಗಿನ ಕಾನೂನು‌ ಕೊಲೆಗಡುಕರಿಗೆ ಸಾಕಾಗುತ್ತಿಲ್ಲ. ಇದರಿಂದ ಕಾನೂನಿನಲ್ಲಿಯೇ ಬದಲಾವಣೆ ತರಬೇಕಿದೆ ಎಂದರು.

ಓದಿ: Praveen Nettaru murder: ಸಿಎಂ ಬೊಮ್ಮಾಯಿ‌ಗೆ ತನಿಖೆ ಮಾಹಿತಿ ನೀಡಿದ ಡಿಜಿಪಿ ಸೂದ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.