ಶಿವಮೊಗ್ಗ: ಗೊಡ್ಡು ಬೆದರಿಕೆ ಹಾಗೂ ಹೇಡಿಗಳು ಬರೆದಿರುವ ಪತ್ರಗಳಿಗೆ ನಾನೆಂದೂ ಹೆದರಲ್ಲ-ಬೆದರಲ್ಲ ಅಂತಾ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಹೇಳಿದರು.
ಅನಾಮಧೇಯ ವ್ಯಕ್ತಿಯೊಬ್ಬರು ಬರೆದಿರುವ ಬೆದರಿಕೆ ಪತ್ರದ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರೋ ಮುಸ್ಲಿಂ ಗುಂಡಾಗಳು ಅನಾಮಧೇಯ ಪತ್ರ ಬರೆದಿದ್ದಾರೆ. ಅವರ ಗೊಡ್ಡು ಬೆದರಿಕೆ ಪತ್ರಕ್ಕೆ ನಾನೆಂದು ಹೆದರುವುದಿಲ್ಲ. ಯಾರು ಬೆದರಿಕೆ ಪತ್ರ ಬರೆದಿದ್ದಾನೋ ಅವನ ಮೇಲೆ ತನಿಖೆ ಆಗಬೇಕು ಎಂದು ಒಬ್ಬ ಶಾಸಕನಾಗಿ ದೂರು ಕೊಟ್ಟಿದ್ದೇನೆ, ಪ್ರಕರಣ ಸಹ ದಾಖಲಿಸಿದ್ದೇನೆ ಎಂದರು.
ಈ ಕುರಿತು ಪೊಲೀಸರು ಕ್ರಮ ಕೈಗೊಳ್ಳುತ್ತಾರೆ ಎಂಬ ಭರವಸೆ, ವಿಶ್ವಾಸ ಇದೆ. ಈ ಪತ್ರ ನಮ್ಮ ರಾಜ್ಯದಿಂದಲೇ ಬಂದಿರೋದು. ಗೂಂಡಾಗಳಿಗೆ ಗೂಂಡಾ ಅಂತಾ ಕರೆಯದೇ ಬೇರೆ ಪದ ಬಳಸಲು ಆಗುತ್ತದಾ? ಎಂದು ಪ್ರಶ್ನಿಸಿದ್ದರು.
ಇದನ್ನೂ ಓದಿ: ನಾನು ಗೆದ್ದಾಗ ಶಿವಮೊಗ್ಗದಲ್ಲಿ ಗಲಾಟೆ ನಡೆದಿಲ್ಲ: ಕೆ ಎಸ್ ಈಶ್ವರಪ್ಪ