ETV Bharat / state

ಸಿದ್ದರಾಮಯ್ಯ ಸೋತ ಕ್ಷೇತ್ರದಿಂದಲೇ ಗೆದ್ದು ಜನ ನಾಯಕ ಅನಿಸಿಕೊಳ್ಳಲಿ: ಕೆ.ಎಸ್ ಈಶ್ವರಪ್ಪ

ಗೆದ್ದ ಸ್ಥಳದಲ್ಲೇ ಮರು ಚುನಾವಣೆಗೆ ನಿಂತರೆ ಜನರ ಪ್ರೀತಿ - ವಿಶ್ವಾಸ ಗಳಿಸಿದ್ದಾರೋ ಇಲ್ವೋ ಗೊತ್ತಾಗುತ್ತಾ. ಚಾಮುಂಡೇಶ್ವರಿಯಲ್ಲಿ ಸಿದ್ದರಾಮಯ್ಯ ಸೋತರು, ಕೆಲ ಸಂದರ್ಭ ಅಲ್ಲಿನ ಕಾರ್ಯಕರ್ತರ ಮೇಲೆ ಹರಿಹಾಯ್ದರು. ಚಾಮುಂಡೇಶ್ವರಿ ಕ್ಷೇತ್ರದಿಂದಲೇ ಸಿದ್ದರಾಮಯ್ಯ ನಿಂತು ಗೆದ್ದು ಬರಲಿ ಎಂದು ಕೆ.ಎಸ್ ಈಶ್ವರಪ್ಪ ಹೇಳಿದರು.

siddaramaiah-contest-in-kolar-constituency
ಕೆ.ಎಸ್ ಈಶ್ವರಪ್ಪ
author img

By

Published : Nov 14, 2022, 7:00 PM IST

ಶಿವಮೊಗ್ಗ : ಸಿದ್ದರಾಮಯ್ಯ ಎಲ್ಲಿ ಚುನಾವಣೆಗೆ ನಿಲ್ತಾರೋ ನಮಗೆ ಬೇಕಿಲ್ಲ. ಆದರೆ ನಿಜವಾದ ನಾಯಕ ಸೋತ ಕ್ಷೇತ್ರದಿಂದಲೇ ಗೆದ್ದು ಬರಬೇಕು‌. ಸಿದ್ದರಾಮಯ್ಯ ಕೋಲಾರಕ್ಕೆ ಹೋಗದೇ, ಚಾಮುಂಡೇಶ್ವರಿ ಕ್ಷೇತ್ರದಿಂದಲೇ ಗೆದ್ದು ಜನನಾಯಕ ಎಂದು ಗುರುತಿಸಿಕೊಳ್ಳಬೇಕು ಎಂದು ಸಲಹೆ ನೀಡ್ತೀನಿ ಎಂದರು ಈಶ್ವರಪ್ಪ ಹೇಳಿದರು.

ಗೆದ್ದ ಸ್ಥಳದಲ್ಲೇ ಮರು ಚುನಾವಣೆಗೆ ನಿಂತರೆ ಜನರ ಪ್ರೀತಿ-ವಿಶ್ವಾಸ ಗಳಿಸಿದ್ದಾರೋ ಇಲ್ವೋ ಗೊತ್ತಾಗುತ್ತಾ. ಚಾಮುಂಡೇಶ್ವರಿಯಲ್ಲಿ ಸಿದ್ದರಾಮಯ್ಯ ಸೋತರು, ಕೆಲ ಸಂದರ್ಭ ಅಲ್ಲಿನ ಕಾರ್ಯಕರ್ತರ ಮೇಲೆ ಹರಿಹಾಯ್ದರು. ಚಾಮುಂಡೇಶ್ವರಿ ಕ್ಷೇತ್ರದಿಂದಲೇ ಸಿದ್ದರಾಮಯ್ಯ ನಿಂತು ಗೆದ್ದು ಬರಲಿ ಎಂದರು.‌

ಪ್ರಮೋದ್ ಮುತಾಲಿಕ್ ಎಲ್ಲಾದರೂ ನಿಲ್ಲಲಿ : ಪ್ರಜಾಪ್ರಭುತ್ವದಲ್ಲಿ ಯಾರು ಎಲ್ಲಿ ಬೇಕಾದರೂ ಚುನಾವಣೆಗೆ ನಿಲ್ಲಬಹುದು. ಪ್ರಮೋದ್ ಮುತಾಲಿಕ್ ಹಿಂದೂಪರವಾಗಿ ನಿಂತರೆ ಯಾವುದೇ ಅಭ್ಯಂತರ ಇಲ್ಲ. ಪ್ರಮೋದ್ ಮುತಾಲಿಕ್ ಚುನಾವಣೆಗೆ ನಿಲ್ಲಲು ಸ್ವತಂತ್ರರು. ಆದರೆ ಮುತಾಲಿಕ್ ಚುನಾವಣೆಗೆ ನಿಲ್ಲೋದರಿಂದ ಹಿಂದುತ್ವಕ್ಕೆ ಲಾಭವಾಗುತ್ತೋ-ನಷ್ಟವಾಗಯತ್ತೋ ಯೋಚನೆ ಮಾಡಿ ನಿಲ್ಲಿ ಎಂದರು.

ಸಿದ್ದರಾಮಯ್ಯ ಸೋತ ಕ್ಷೇತ್ರದಿಂದಲೇ ಗೆದ್ದು ಜನನಾಯಕ ಅನಿಸಿಕೊಳ್ಳಲಿ

ಇಸ್ಲಾಂನಲ್ಲಿ ಮೂರ್ತಿ ಪೂಜೆ ಇಲ್ಲ: ತನ್ವೀರ್ ಸೇಠ್ ಟಿಪ್ಪು ಪ್ರತಿಮೆ ನಿರ್ಮಾಣ ಮಾಡಲು ಹೊರಟಿದ್ದು, ಮುಸ್ಲಿಂ ಧರ್ಮಕ್ಕೆ ವಿರೋಧ. ಅವರಲ್ಲಿ ಮೂರ್ತಿ ಪೂಜೆಯೇ‌ ಇಲ್ಲ. ಕೆಂಪೇಗೌಡರಿಗೆ ವಿರುದ್ಧವಾಗಿ ಟಿಪ್ಪು ಪ್ರತಿಮೆ ಮಾಡ್ತೀನಿ ಅನ್ನೋದು ನಿಜವಾದ ದೇಶದ್ರೋಹದ ಕೆಲಸ. ಟಿಪ್ಪು ನಿಜವಾದ ಕನಸುಗಳು ಪುಸ್ತಕ ಬಿಡುಗಡೆಯಾಗಿದೆ. ಅದನ್ನ ತನ್ವೀರ್ ಸೇಠ್ ಓದಬೇಕು.

ಪ್ರತಿಮೆ ಮಾಡಲು ಹೊರಟ ತನ್ವೀರ್ ಜನರ ಕ್ಷಮೆ ಕೇಳಬೇಕು. ಕಾಂಗ್ರೆಸ್ ಮುಖಂಡರು ಅವರಿಗೆ ಬುದ್ಧಿ ಹೇಳಬೇಕು. ಟಿಪ್ಪು ಬದಲು ಅಬ್ದುಲ್ ಕಲಾಂ ಪ್ರತಿಮೆ ಮಾಡಲಿ, ಯಾವನೋ ದೇಶ ದ್ರೋಹಿ, ದೇವಸ್ಥಾನ ಚೂರು ಮಾಡಿದ ಟಿಪ್ಪು ಪ್ರತಿಮೆ ಮಾಡ್ತೀನಿ ಅನ್ನೋದು ಸರಿಯಲ್ಲ ಎಂದು ಈಶ್ವರಪ್ಪ ಹೇಳಿದರು.

ಕೇಸರಿ ಬಣ್ಣ ಬಿಜೆಪಿಯದ್ದಾ: ವಿವೇಕಾನಂದರ ಹೆಸರಲ್ಲಿ ಆಯ್ದ ಕೊಠಡಿಗಳಿಗೆ ಕೇಸರಿ ಬಣ್ಣ ಬಳಿಯಲು ಮುಂದಾಗಿರುವ ಶಿಕ್ಷಣ ಇಲಾಖೆ ಕ್ರಮ ಸಮರ್ಥಿಸಿಕೊಂಡ ಈಶ್ವರಪ್ಪ, ಟೀಕೆ ಮಾಡುವವರು ಕೇಸರಿ ಬಣ್ಣ ಹಿಂದೂಗಳದ್ದು ಹಾಗೂ ಹಸಿರು ಮುಸ್ಲಿಂ ಸಮುದಾಯದ್ದು ಎಂದು ಹೇಳಲಿ. ಕಾಂಗ್ರೆಸ್ ಈ ರೀತಿ ಪ್ರತಿಯೊಂದರಲ್ಲೂ ರಾಜಕೀಯ ಹುಡುಕುವುದು ಸರಿಯಲ್ಲ ಎಂದರು.

ಇದನ್ನೂ ಓದಿ : 224 ಕ್ಷೇತ್ರದಲ್ಲಿ ಎಲ್ಲಿ ಬೇಕಾದರೂ ಸ್ಪರ್ಧಿಸುವವನು ನಿಜವಾದ ನಾಯಕ: ಸಿದ್ದರಾಮಯ್ಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.