ಶಿವಮೊಗ್ಗ: ಬಜರಂಗದಳ ಕಾರ್ಯಕರ್ತ ಹರ್ಷ ಕೊಲೆ ಪ್ರಕರಣದ 10 ಜನ ಆರೋಪಿಗಳಿಗೆ ಕೋರ್ಟ್ ನ್ಯಾಯಾಂಗ ಬಂಧನ ವಿಧಿಸಿದೆ. ಫೆಬ್ರವರಿ 20ರಂದು ಕೊಲೆ ನಡೆದಿದ್ದು, ಕೃತ್ಯ ನಡೆದ 48 ಗಂಟೆಯಲ್ಲಿ ಈ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು.
ಬಳಿಕ ಹೆಚ್ಚಿನ ವಿಚಾರಣೆಗೆ ತಮ್ಮ ವಶಕ್ಕೆ ನೀಡಬೇಕೆಂದು ಫೆಬ್ರವರಿ 25ರಂದು ನ್ಯಾಯಾಲಯಕ್ಕೆ ಪೊಲೀಸರು ವಿನಂತಿಸಿದ್ದರು. ಅದರಂತೆ ಶಿವಮೊಗ್ಗದ ಎರಡನೇ ಜೆಎಂಎಫ್ಸಿ ನ್ಯಾಯಾಲಯವು ಫೆಬ್ರವರಿ 25ರಿಂದ ಮಾರ್ಚ್ 7ರ ತನಕ ಒಟ್ಟು 11 ದಿನ ಪೊಲೀಸರ ವಶಕ್ಕೆ ನೀಡಿ ಆದೇಶಿಸಿತ್ತು. ಇಂದು ಪೊಲೀಸ್ ಕಸ್ಟಡಿ ಮುಗಿದ ಕಾರಣ ಆರೋಪಿಗಳನ್ನು ಮತ್ತೆ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ನೀಡಿದೆ.
ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸೆಕ್ಷನ್ 302ರಂತೆ ಪ್ರಕರಣ ದಾಖಲಿಸಿಕೊಂಡು ಪೊಲೀಸ್ ತನಿಖೆ ನಡೆಸಲಾಗಿದೆ. ಮಾರ್ಚ್ 2ರ ಸಂಜೆ 10 ಜನ ಆರೋಪಿಗಳ ವಿರುದ್ದ ಕಾನೂನುಬಾಹಿರ ಚಟುವಟಿಕೆ ತಡೆಗಟ್ಟುವಿಕೆ ಕಾಯ್ದೆ ಅಡಿ ಪ್ರಕರಣ ದಾಖಲಿಸಲಾಗಿದೆ. ಈ ಕಾಯ್ದೆಯಂತೆ ಡಿವೈಎಸ್ಪಿ ಹಾಗೂ ಅವರಿಗಿಂತ ಮೇಲ್ಪಟ್ಟ ಅಧಿಕಾರಿಗಳು ಪ್ರಕರಣದ ತನಿಖೆ ನಡೆಸಬೇಕಿದೆ. ಬಂಧಿತ ಯಾವ ಆರೋಪಿಯೂ ಕೂಡ ಇನ್ನೂ ಜಾಮೀನಿಗೆ ಅರ್ಜಿ ಹಾಕಿಲ್ಲ.
ಇದನ್ನೂ ಓದಿ: ಮೈಸೂರು ರೈಲ್ವೆ ಕ್ವಾರ್ಟರ್ಸ್ನಲ್ಲಿ ಕ್ಲೋರಿನೇಷನ್ ಸೋರಿಕೆ: 5ಕ್ಕೂ ಹೆಚ್ಚು ಮಂದಿ ಅಸ್ವಸ್ಥ